
ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ಅರ್ಹರಲ್ಲದವರಿಗೂ ಗೈಡ್‍ಶಿಪ್ ಕೊಡುವುದಕ್ಕೆ ಮೈಸೂರು ವಿವಿ ಶಿಕ್ಷಣ ಮಂಡಲಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಕ್ರಾಫರ್ಡ್ ಭವನದಲ್ಲಿ ಸೋಮವಾರ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಸಾಲಿನ ಪ್ರಥಮ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಕಲಾ ನಿಕಾಯದ ಡೀನ್ ಪೆÇ್ರ.ಎಂ.ಎಸ್. ಶೇಖರ್ ಈ ವಿಚಾರವನ್ನು ಪ್ರಸ್ತಾಪಿಸಿದರು. ಖಾಸಗಿ ಕಾಲೇಜುಗಳಿಂದ ಅರ್ಹರಲ್ಲದವರಿಗೂ ಗೈಡ್‍ಶಿಪ್ ಕೊಡುವಂತೆ ಮನವಿ ಪತ್ರಗಳು ಬರುತ್ತಿವೆ. ಯುಜಿಸಿ, ಸರ್ಕಾರ ಮತ್ತು ಬಿಒಎಸ್ ನಿಯಮಗಳು ಹಾಗೂ ಪೆÇ್ರಬೆಷನರಿ ಡಿಕ್ಲೇರ್ ಆಗಿರುವುದನ್ನು ಪರಿಶೀಲಿಸಿ ಗೈಡ್‍ಶಿಪ್ ಕೊಡಬೇಕು ಎಂದು ಪೆÇ್ರ.ಎಂ.ಎಸ್.ಶೇಖರ್ ಸಭೆಯ ಗಮನಸೆಳೆದರು.
ಸರ್ಕಾರಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅರ್ಹರಿದ್ದರೂ ಗೈಡ್‍ಶಿಪ್ ಕೊಡಲಾಗುತ್ತಿಲ್ಲ. ಆದರೆ, ಖಾಸಗಿ ಕಾಲೇಜುಗಳಿಂದ ಗೈಡ್‍ಶಿಪ್ ಅನ್ನು ಪರಿಗಣಿಸಲಾಗುತ್ತಿದೆ. ಈಚೆಗೆ ಗೈಡ್‍ಶಿಪ್ ಕೋರಿ ಮನವಿ ಬಂದಿದೆ. ನೌಕರಿ ಕಾಯಂ ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ದಾಖಲೆಗಳನ್ನು ಕಳುಹಿಸುವಂತೆ ಪತ್ರ ಬರೆದರೆ, ನಮ್ಮನ್ನೇ ಪರಿಶೀಲಿಸುವಂತೆ ಮರು ಉತ್ತರ ಬಂದಿದೆ. ಆ ಹಿಂಬರಹಕ್ಕೆ ಯಾರದೇ ಸಹಿಯೂ ಇಲ್ಲ ಎಂದು ಪತ್ರವನ್ನು ಸಭೆಯಲ್ಲಿ ಪ್ರದರ್ಶಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪೆÇ್ರ.ಎನ್.ಕೆ. ಲೋಕನಾಥ್ ಅವರು, ಬಿಒಎಸ್ ಮತ್ತು ಯುಜಿಸಿ ನಿಯಾಮನುಸಾರ ಗೈಡ್‍ಶಿಪ್‍ಗೆ ಅನುಮತಿ ಕೊಡಬೇಕಾಗುತ್ತದೆ. ನೇಮಕಾತಿ ವಿಷಯವಾಗಿ ಸರ್ಕಾರದ ಹಂತದಲ್ಲಿ ಇತ್ಯರ್ಥವಾಗಬೇಕು. ಇದು ನಮ್ಮ ಸಮಸ್ಯೆ ಅಲ್ಲ ಎಂದರು.
ಮೈಸೂರು ವಿವಿ ಗುಣಮಟ್ಟದ ದೃಷ್ಟಿಯಿಂದ ಈ ವಿಷಯವನ್ನು ಪ್ರಸ್ತಾಪಿಸಿದೆ. ಹಿಂದೆ ವಾರ್ಷಿಕ ಸಭೆಯಲ್ಲಿ ಚರ್ಚೆ ಮಾಡಿ ಗೈಡ್‍ಶಿಪ್ ನೀಡಬಹುದು. ತಕ್ಷಣ ಗೈಡ್‍ಶಿಪ್ ಕೊಡಲು ತುರ್ತು ಏನಿರುತ್ತದೆ ಎಂದು ಪೆÇ್ರ.ಎಂ.ಎಸ್.ಶೇಖರ್ ಅವರು ಹೇಳಿದರು.
2017ರಲ್ಲಿ ಯುಜಿಸಿ ರೂಪಿಸಿರುವ ಗೈಡ್‍ಶಿಪ್ ಸಂಬಂಧಿತ ನಿಯಮಗಳನ್ನು ಪಾಲಿಸುವುದು. ಸಂಶೋಧನೆಗೆ ಉತ್ತೇಜನ ಕೊಡಲು ನಿಯಾಮನುಸಾರ ಗೈಡ್‍ಶಿಪ್ ಕೊಡಬಹುದು ಎಂಬ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿನ್ನದ ಪದಕ, ದತ್ತಿ: ಗೌರಮ್ಮ ಶಂಕರಪ್ಪ ದತ್ತಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಗದು ಬಹುಮಾನ, ಪೆÇ್ರ.ಕೆ.ಎಂ. ಶಫಿಉಲ್ಲಾ ಮತ್ತು ಪೆÇ್ರ.ಎಚ್.ಶೇಖರ್ ಶೆಟ್ಟಿ ಡೌನಿಮಿಲ್ಡಿವ್ ಲ್ಯಾಬೊರೇಟರಿ ದತ್ತಿ, ಪೆÇ್ರ.ವೈ.ಬಿ.ಬಸವರಾಜು ನಗದು ಬಹುಮಾನ ದತ್ತಿ, ಸಿ.ಎಂ.ನಾರಾಯಣಸ್ವಾಮಿ ಮತ್ತು ಬಿ.ಜಿ.ಶಾಂತಕುಮಾರಿ ಚಿನ್ನದ ಪದಕ ದತ್ತಿ ಸ್ಥಾಪನೆಗೆ ಸಭೆ ಒಪ್ಪಿಗೆ ನೀಡಿತು.
ಯುವರಾಜ ಕಾಲೇಜಿನಲ್ಲಿ ಬಿಸಿಎ ಕೋರ್ಸಿಗೆ ಹೆಚ್ಚುವರಿ ವಿದ್ಯಾರ್ಥಿಗಳನ್ನು ಪ್ರವೇಶಾತಿ ಮಾಡಿಕೊಳ್ಳಲು ಅನುಮತಿ ನೀಡಲಾಯಿತು.
ದತ್ತಿ ಸ್ಥಾಪನೆ ಘೋಷಣೆ: ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನಗೊಂಡ ಪ್ರಥಮ ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಕೆ. ವಿವೇಕಾನಂದ ಅವರು ತಮ್ಮ ಪೆÇೀಷಕರ ಹೆಸರಿನಲ್ಲಿ ದತ್ತಿ ಸ್ಥಾಪಿಸುವುದಾಗಿ ಘೋಷಿಸಿದರು. ಚಿನ್ನದ ಪದಕ, ದತ್ತಿ ಸ್ಥಾಪನೆಗೆ ಒಪ್ಪಿಗೆ ಕೊಡುವ ವೇಳೆ ಮಾಹಿತಿ ಪಡೆದುಕೊಂಡ ಅವರು, ಕೂಡಲೇ ದತ್ತಿ ಸ್ಥಾಪಿಸುವುದಾಗಿ ಪ್ರಕಟಿಸಿದರು. ಸಭೆಯ ಕೆ.ವಿವೇಕಾನಂದರ ನಿರ್ಧಾರವನ್ನು ಸ್ವಾಗತಿಸಿತು.
ಯುಜಿ, ಪಿಜಿ ನೂತನ ಪಠ್ಯಕ್ಕೆ ಒಪ್ಪಿಗೆ: ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ನೂತನವಾಗಿ ತಯಾರಿಸಲಾಗಿರುವ ಪಠ್ಯಕ್ಕೆ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಪಠ್ಯ ಬದಲಾವಣೆ ರಾಜ್ಯ ಸರ್ಕಾರ ಮತ್ತು ಸ್ಟೇಟ್ ಎಜುಕೇಷನ್ ಕಮಿಷನ್ ಬದ್ಧತೆಯಾಗಿದೆ. ಪಠ್ಯ ಬದಲಾವಣೆ ಸಂಬಂಧ ಕಮಿಷನ್ ಪೂರ್ಣ ವರದಿ ಸಲ್ಲಿಸಿದೆ. ಜುಲೈ ತಿಂಗಳಲ್ಲಿ ವರದಿ ಬಿಡುಗಡೆಯಾಗಬಹುದು. ಸರ್ಕಾರದ ಆದೇಶಕ್ಕೆ ಬದ್ಧರಾಗಿ ಸಣ್ಣಪುಟ್ಟ ಬದಲಾವಣೆ ಇದ್ದರೆ ಮಾಡಬೇಕಾಗುತ್ತದೆ ಎಂದು ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಹೇಳಿದರು.
ಕುಲಸಚಿವೆ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪೆÇ್ರ.ಎನ್.ನಾಗರಾಜ್, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮುಂತಾದವರಿದ್ದರು.