
- ಅರಿಶಿನದ ಕೊಂಬನ್ನು ಮಜ್ಜಿಗೆಯಲ್ಲಿ ತೇಯ್ದು ಕುಡಿಯುತ್ತಾ ಬಂದರೆ ಅರಿಶಿನ ಕಾಮಾಲೆ, ಮೂಲವ್ಯಾಧಿ ಹಾಗೂ ಆಮಶಂಕೆಗೆ ಉತ್ತಮ ಪರಿಹಾರ.
- ಮಾಗಿದ ಬಾಳೆಹಣ್ಣು, ಜೇನುತುಪ್ಪ, ನಿಂಬೆರಸ ಇವನ್ನು ಚೆನ್ನಾಗಿ ಮಸೆದು ಸೇವಿಸಿದರೆ ಅರಿಶಿನ ಕಾಮಾಲೆಗೆ ಒಳ್ಳೆಯದು. (ಕೆಲವು ದಿನಗಳ ಕಾಲ)
- ಅರಿಶಿನ ಕಾಮಾಲೆಗೆ ಶುಂಠಿಯನ್ನು ಯಥೇಚ್ಛವಾಗಿ ಬಳಸುವುದರಿಂದ ಲಾಭವಿದೆ. ಶುಂಠಿ ಜಜ್ಜಿ ರಸ ತೆಗೆದು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಅರಿಶಿನ ಕಾಮಾಲೆ ರೋಗಗುಣಮುಖವಾಗುತ್ತದೆ.
- ಶುಂಠಿ, ಪುದಿನಾ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಅರಿಶಿನ ಕಾಮಾಲೆಗೆ ಉತ್ತಮ ಪರಿಹಾರ.
- ಯಕೃತ್ತು ದೋಷಕ್ಕೆ ಅರಳೇಕಾಯಿ ಕಷಾಯ ಮಾಡಿ ಆ ಕಷಾಯಕ್ಕೆ ಹಿಪ್ಪಲಿ ಚೂರ್ಣ ಬೆರೆಸಿ ಕುಡಿದರೆ ಯಕೃತ್ತು ಚೆನ್ನಾಗಿ ಕೆಲಸ ಮಾಡುತ್ತದೆ.
- ಶುದ್ಧ ಅರಿಶಿನಪುಡಿ, ತ್ರಿಫಲ ಚೂರ್ಣ ಎರಡನ್ನೂ ಸಮಪ್ರಮಾಣದಲ್ಲಿ ಬೆರೆಸಿ ತುಪ್ಪ ಅರ್ಧ ಚಮಚ, ಜೇನುತುಪ್ಪ 1 ಚಮಚ ಹಾಕಿ ಚೆನ್ನಾಗಿ ಕಲಸಿ ತಿನ್ನಬೇಕು.
- ಸೇಬುಹಣ್ಣನ್ನು ಸಿಪ್ಪೆ ಸಹಿತವಾಗಿ ಪ್ರತಿನಿತ್ಯ ಸೆವಿಸುತ್ತಿದ್ದರೆ ಯಕೃತ್ತು ಚೆನ್ನಾಗಿ ಕೆಲಸ ಮಾಡುತ್ತದೆ.
- ಅನಾನಸ್ ಹಣ್ಣು ಯಕೃತ್ತಿನ ವಿಕಾರಗಳನ್ನು ಚೆನ್ನಾಗಿ ಸರಿಪಡಿಸುತ್ತದೆ.
- ಹಾಗಲಕಾಯಿ ರಸ ಅಥವಾ ಹಾಗಲಕಾಯಿ ಎಲೆಯ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ, ಲಿವರ್ ಚೆನ್ನಾಗಿ ಕೆಲಸ ಮಾಡುತ್ತದೆ.
- ಪರಂಗಿಕಾಯಿಯ ಪಲ್ಯವನ್ನು ಮೇಲಿಂದ ಮೇಲೆ ಸೇವಿಸುವುದರಿಂದ ಲಿವರ್‍ಗೆ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆ ಆಗುತ್ತವೆ.
- ಕಹಿ ಸೋರೆಯ ಚಿಗುರನ್ನು ನೀರಿಗೆ ಹಾಕಿ ಕಷಾಯ ಮಾಡಿ ಸಕ್ಕರೆ ಹಾಕಿ 12 ದಿನ ಕುಡಿದರೆ ಕಾಮಾಲೆ ರೋಗವು ಕಡಿಮೆ ಆಗುತ್ತದೆ.
- ನೆಲನೆಲ್ಲಿ ಸೊಪ್ಪನ್ನು ನುಣ್ಣಗೆ ಅರೆದು ಅದನ್ನು ಎಮ್ಮೆಯ ಮಜ್ಜಿಗೆಯಲ್ಲಿ ಕದಡಿ ಕುಡಿದರೆ ಕಾಮಾಲೆ ರೋಗವು ಹತೋಟಿಗೆ ಬರುತ್ತದೆ.
- ಅಮೃತಬಳ್ಳಿಯ ಕಷಾಯ ಮಾಡಿ ಕಲ್ಲುಸಕ್ಕರೆ ಹಾಕಿ ಏಳು ದಿನ ಬರೀಹೊಟ್ಟೆಯಲ್ಲಿ ಕುಡಿಯಬೇಕು.
- ಎಕ್ಕದ ಗಿಡದ ಬೇರನ್ನು ನೀರಿನಲ್ಲಿ ತೇಯ್ದು ಮೂಗಿನ 2 ಹೊಳ್ಳೆಗಳಿಗೆ ಎರಡು ಎರಡು ಹನಿ ಹಾಕಬೇಕು.
- ಸಿಹಿಮೂಲಂಗಿ ರಸಕ್ಕೆ ಸ್ವಲ್ಪ ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ (ಸತತವಾಗಿ 7 ದಿನಗಳ ಕಾಲ) ಸೇವಿಸುವುದರಿಂದ ಕಾಮಾಲೆ ರೋಗವು ಗುಣವಾಗುತ್ತದೆ.
- ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
- ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ 9535383921.