ಅರಸು ಅವರ ಕೊಡುಗೆ ದೇಶಕ್ಕೆ ಮಾದರಿ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.10:-
ನಾನು ಎಂದಿಗೂ ದೇವರನ್ನು ಕಂಡಿಲ್ಲ. ಡಿ.ದೇವರಾಜ ಅರಸು ಅವರೇ ನನ್ನ ಪಾಲಿನ ದೇವರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ತಿಳಿಸಿದರು.


ನಗರದ ದಿ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ಹಾಗೂ ಅರಸು ಜಾಗೃತಿ ಅಕಾಡೆಮಿ ಟ್ರಸ್ಟ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 43ನೇ ಸ್ಮರಣೆ ಹಾಗೂ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಸವಾರಂಭದಲ್ಲಿ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಡಿ.ದೇವರಾಜ ಅರಸು ಅವರು ನಾಡಿಗೆ ಕೊಟ್ಟ ಕೊಡುಗೆ ದೇಶಕ್ಕೆ ಮಾದರಿಯಾಗಿದೆ. ಸಾಮಾಜಿಕ ಕಳಕಳಿಯಿಂದ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ಅರಸು ಅವರು ಯಾವುದೇ ಜಾತಿ ಹಂಗಿಲ್ಲದ ನಿಷ್ಪ ಕ್ಷಪಾತವಾದ ಆಡಳಿತಗಾರರು. ಅಂದಿನ ದಿನಗಳಲ್ಲಿಯೇ ಎಲ್ಲಾ ವರ್ಗದ ಜನರ ಸಾಲಮನ್ನಾ ಮಾಡಿ, ಬಡವರನ್ನು ಹಾಗೂ ಅಸಂಘಟಿತರನ್ನು ಮೇಲೆತ್ತುವ ಕೆಲಸ ಮಾಡಿದರು ಎಂದು ಸ್ಮರಿಸಿದರು.


ಪ್ರಶಸ್ತಿ ಪ್ರದಾನ: ಎಂ.ಮಲ್ಲರಾಜೇ ಅರಸ್ (ಬಿಇಎಲ್ ನಿವೃತ್ತ ಪ್ರಧಾನ ವ್ಯವಸ್ಥಾಪಕ), ಎಸ್.ಉದಯಶಂಕರ್ (ಪತ್ರಿಕಾ ಛಾಯಾಗ್ರಾಹಕ), ಚಿಕ್ಕಲಿಂಗಯ್ಯ (ಕೆಆರ್‍ಐಡಿಎಲ್ ಇಇ, ಚಾಮರಾಜ ನಗರ), ಎಂ.ಆರ್.ಅನಂತಕುವಾರ್ (ಸಂಸ್ಥಾಪಕರು, ದಿವ್ಯದೀಪ ಚಾರಿಟಬಲ್ ಟ್ರಸ್ಟ್), ಟಿ.ತ್ಯಾಗರಾಜ್ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎಚ್.ಎ.ವೆಂಕಟೇಶ್, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಮರ್ ನಾಥರಾಜೇ ಅರಸ್, ಸಂಧ್ಯಾ ಸುರಕ್ಷಾ ಟ್ರಸ್ಟ್‍ನ ಡಾ.ಬಿ.ಆರ್. ನಟರಾಜ ಜೋಯಿಸ್, ಕರ್ನಾಟಕ ಅರಸು ಮಹಾಮಂಡಳಿ ಟ್ರಸ್ಟ್ ಉಪಾಧ್ಯಕ್ಷ ಡಾ.ಎಂ.ಜಿ.ಆರ್. ಅರಸ್,ಅನ್ವೇಷಣಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ಎಚ್.ಎಂ.ಟಿ. ಲಿಂಗರಾಜೇ ಅರಸ್ ಉಪಸ್ಥಿತರಿದ್ದರು.