
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.06: ಇಲ್ಲಿನ ವಿಶ್ವೇಶ್ವರಯ್ಯ ನಗರದ ನಾಲ್ಕನೇ ಕ್ರಾಸ್ ನ ಪೆಟ್ರೋಲಿಯಂ ಕಂಪನಿ ಉದ್ಯೋಗಿ ವಿದ್ಯಾಧರ್ ಹೆಚ್.ಎಂ.ಅವರ ಮನೆಯಲ್ಲಿ ನಿನ್ನೆ ರಾತ್ರಿ ಬ್ರಹ್ಮಕಮಲದ ಹೂ ಅರಳಿದೆ.
ಈ ಹೂ ರಾತ್ರಿ ಅರಳುತ್ತೆ ಬೆಳಗಾಗುವುದರೊಳಗಾಗಿ ಬಾಡುತ್ತೆ, ಅಷ್ಟೇ ಅಲ್ಲ ವರ್ಷಕ್ಕೆ ಒಮ್ಮೆ ಮಾತ್ರ ಅರಳುವುದು. ಇದರ ಸುಹಾಸನೆ ವಿಶೇಷವಾದುದು. ಶಿವಲಿಂಗ ಪೂಜೆಗೆ ಮಹತ್ವದ್ದು. ಅರಳುದ ತಕ್ಷಣ ಪೂಜೆ ಮಾಡುವ ಪದ್ದತಿಯೂ ಇದೆ. ಈ ಹೂ ಅರಳುವುದನ್ನು ನೋಡಲು ಸುತ್ತಮುತ್ತಲಿನ ಜನರು ಸಹ ಸೇರುತ್ತಾರೆ.