Home ಜಿಲ್ಲೆ ಮೈಸೂರು ಅರಮನೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ವೈಭವ

ಅರಮನೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ವೈಭವ

ಸಂಜೆವಾಣಿ ನ್ಯೂಸ್
ಮೈಸೂರು: ನ.01:
– ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ನಗರದ ಐತಿಹಾಸಿಕ ಅರಮನೆ ಆವರಣದಲ್ಲಿ ಕನ್ನಡಾಂಬೆ ತಾಯಿ ಶ್ರೀ ಭುವನೇಶ್ವರಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ, ಕನ್ನಡಿಗರ ಹೆಮ್ಮೆಯ ಮೆರವಣಿಗೆಗೆ ಅತ್ಯಂತ ಸಂಭ್ರಮ,ಸಡಗರದಿಂದ ಚಾಲನೆ ನೀಡಿದರು.

ಕನ್ನಡ ನುಡಿ, ನೆಲ, ಜಲ ಹಾಗೂ ನಮ್ಮ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಭಾಷೆಯ ಉಳಿವು ಮತ್ತು ನಾಡಿನ ಬೆಳವಣಿಗೆಗಾಗಿ ನಾವೆಲ್ಲರೂ ಒಂದಾಗಿ ಶ್ರಮಿಸಬೇಕು. ನಮ್ಮ ಹೆಮ್ಮೆಯ ‘ಕನ್ನಡದ ಅಸ್ಮಿತೆಯನ್ನು’ ಎತ್ತಿಹಿಡಿಯುವ ಮೂಲಕ ಈ ಪುಣ್ಯಭೂಮಿಯ ಕೀರ್ತಿ ಮತ್ತು ಹಿರಿಮೆಯನ್ನು ವಿಶ್ವದ ಮೂಲೆಮೂಲೆಗೂ ಪಸರಿಸೋಣ ಎಂದು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದರು.

ಈ ವೈಭವೋಪೇತ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ಶ್ರೀ ಜಿ. ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ನಗರ ಪೆÇಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಯುಕೇಶ್ ಕುಮಾರ್, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕರಾದ ಶ್ರೀ ಟಿ.ಎಸ್ ಸುಬ್ರಮಣ್ಯ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಹಿರಿಯ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಗಣ್ಯರು, ಪ್ರಮುಖರು ಹಾಗೂ ನಾಡಿನ ಹಿರಿಯರು ಪಾಲ್ಗೊಂಡು ಕಾರ್ಯಕ್ರಮದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.