Home ಜಿಲ್ಲೆ ಮಂಗಳೂರು ಅರಂಬೂರಿನ ಇಡ್ಯಡ್ಕ ಸರಕಾರಿ ಶಾಲೆಯ ನೂತನ ಶೌಚಾಲಯ ಕಟ್ಟಡಕ್ಕೆ ಶಾಸಕರಿಂದ ಶಿಲಾನ್ಯಾಸ

ಅರಂಬೂರಿನ ಇಡ್ಯಡ್ಕ ಸರಕಾರಿ ಶಾಲೆಯ ನೂತನ ಶೌಚಾಲಯ ಕಟ್ಟಡಕ್ಕೆ ಶಾಸಕರಿಂದ ಶಿಲಾನ್ಯಾಸ

ಸುಳ್ಯ:ಅರಂಬೂರಿನ ಇಡ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್‌ಪಿಎಲ್ ವತಿಯಿಂದ ನೀಡಲ್ಪಟ್ಟ ನೂತನ ಶೌಚಾಲಯ ಕಟ್ಟಡದ ಶೀಲಾನ್ಯಾಸ ಕಾರ್ಯಕ್ರಮ ನಡೆಯಿತು.
ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಶಿಲಾನ್ಯಾಸವನ್ನು ನೆರವೇರಿಸಿ ಶುಭ ಹಾರೈಸಿದರು. ಸುಮಾರು ೧೦ ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯ ನಿರ್ಮಾಣಗೊಳ್ಳುತ್ತಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ೬ ಶೌಚಾಲಯಗಳು, ೨ ಸ್ನಾನಗೃಹ ನಿರ್ಮಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಸುಳ್ಳ ಕ್ಷೇತ್ರ ಶಿಕ್ಷಣಾಧಿಕಾರಿ ಯಮುನಪ್ಪ ಸಿದ್ದಪ್ಪ ಹರಗಿ, ಆಲೆಟ್ಟಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಯು.ಕೆ. ಶೀತಲ್, ರೋಟರಿ ಸದಸ್ಯರಾದ ಹೇಮಂತ್ ಕಾಮತ್, ಪ್ರಭಾಕರ್ ನಾಯರ್ ,ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯೂಸುಫ್ ಅಂಜಿಕ್ಕಾರ್, ಸ್ಥಳಿಯ ಉದ್ಯಮಿ ಜಗದೀಶ್ ಸರಳಿಕುಂಜ, ಶ್ರೀಪತಿ ಭಟ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಅನಿತಾ, ವೇದಾವತಿ, ಪುಷ್ಪಾವತಿ ಕುಡೆಕಲ್ಲು, ಸುದೇಶ್,ಹಾಗೂ ಎಸ್ಡಿಎಂಸಿ ಸದಸ್ಯರುಗಳು, ವಿದ್ಯಾರ್ಥಿಗಳ ಪೋಷಕ ವೃಂದ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಪೀಚೆ ವಂದಿಸಿದರು.