
ಸುಳ್ಯ:ಅರಂತೋಡು ಗ್ರಾಮದ ಹಾಸ್ಪಾರೆ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು ಮನೆಯ ಜಗಳಿಯಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಅಡ್ತಲೆಯ ಹಾಸ್ಪಾರೆ ಕೂಸಪ್ಪ ಗೌಡ ಎಂಬವರ ಮನೆಯ ಬಾಗಿಲಿನ ವರೆಗೆ ಚಿರತೆ ಬಂದು ಜಗಲಿಯಲ್ಲಿ ಮಲಗಿದ್ದ ಸಾಕು ನಾಯಿಯನ್ನು ಕಳೆದ ರಾತ್ರಿ ಹೊತ್ತೊಯ್ದಿದೆ. ನಾಯಿ ಕಾಣಿಯಾದ ಬಗ್ಗೆ ಮನೆಯ ಸಿಸಿ ಟಿ ವಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕಾಡನೆಗಳ ದಾಳಿ ಬೆನ್ನಲ್ಲೇ ಚಿರತೆಗಳ ಕಾಟ ಇದೀಗ ಕೃಷಿಕರ ನಿದ್ದೆಗೆಡಿಸಿದೆ.

























