
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಡಿ,20- ಕೇರಳದ ಶಬರಿ ಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನದ ದ್ವಾರಪಾಲಕರ ಚಿನ್ನ ನಾಪತ್ತೆ ಪ್ರಕರಣದಲ್ಲಿ ಕೇರಳದ ಎಸ್ಐಟಿ ಅಧಿಕಾರಿಗಳು ನಗರದ ರೊದ್ದಂ ಜ್ಯೂವೆಲ್ಸ್ ಮಾಲೀಕ ಗೋವರ್ಧನ ಅವರನ್ನು ವಿಚಾರಣೆಗೆಂದು ಕರೆದು ಬಂಧಿಸಿದ್ದಾರೆ.
ನಗರದ ರೊದ್ದಂ ಜ್ಯೂವೆಲ್ಸ್ ಅಂಗಡಿ ಮತ್ತು ಮಾಲೀಕರ ಮನೆಯಲ್ಲಿ ಕೇರಳದ ಎಸ್ ಐಟಿ ತಂಡ ಕಳೆದ ಅಕ್ಟೋಬರ್ 24 ರಂದು ಆಗಮಿಸಿ ಪರಿಶೀಲನೆ ಮಾಡಿ ತೆರಳಿತ್ತು.
ಅಯ್ಯಪ್ಪ ಸ್ವಾಮಿ ದೇವಾಲಯದ ದ್ವಾರ ಬಾಗಿಲಿನ ದ್ವಾರ ಪಾಲಕ ವಿಗ್ರಹಗಳಿಗೆ ಚಿನ್ನದ ಮರು ಲೇಪನ ಕಾರ್ಯದಲ್ಲಿ ಚಿನ್ನ ನಾಪತ್ತೆಯಾಗಿರುವ ಬಗ್ಗೆ ಕೇರಳದ ಎಸ್ ಐಟಿ ತಂಡ ವಿಚಾರಣೆ ನಡೆಸಿತ್ತು.
ಗೋವರ್ಧನ ಅವರು ಅರ್ಚಕ ಉನ್ನಿಕೃಷ್ಣನ್ ಸೂಚನೆ ಮೇರೆಗೆ 2019 ರಲ್ಲಿ ಚಿನ್ನ ಲೇಪಿತ ದೇವಾಲಯದ “ದ್ವಾರಬಾಗಿಲು” ಅರ್ಪಣೆ ಮಾಡಿದ್ದರು ದ್ವಾರಪಾಲಕರ ಮರು ಲೇಪನ ಕಾರ್ಯ ಕ್ಕೂ ಮುನ್ನ ಇದ್ದ ಬಂಗಾರದ ದ್ವಾರ ಪಾಲಕರ ನಾಲ್ಕೂವರೆ ಕೆಜಿ ಚಿನ್ನ ನಾಪತ್ತೆಯಾಗಿರುವ ಪ್ರಕರಣ ಇದಾಗಿದೆ.
ಈ ಬಗ್ಗೆ ಈ ಹಿಂದೆ ಸಂಜೆವಾಣಿ ಜೊತೆ ಮಾತನಾಡಿದ್ದ ಗೋವರ್ಧನ ಅವರು 2004 ರಿಂದ ನಾನು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ದಾನ ಮಾಡುತ್ತ ಬಂದಿರುವೆ ಅದನ್ನು ಹೇಳವು ಅಗತ್ಯತೆ ಇಲ್ಲ. ಆದರೆ ಈ ಪ್ರಕರಣಕ್ಕೆ ಸಬಂಧಿಸಿದಂತೆ ಹೇಳುವುದಾದರೆ ಅರ್ಚಕರ ಸೂಚನೆಯಂತೆ ಕೇರಳದಲ್ಲಿ ಕಟ್ಟಿಗೆ ತೆಗೆದುಕೊಂಡು ಬೆಂಗಳೂರಿನ ಶ್ರೀರಾಂಪುರದ ಅಯ್ಯಪ್ಪ ದೇವಸ್ಥಾನದಲ್ಲಿ ಮೂವತ್ತೈದು ಲಕ್ಷ ವೆಚ್ಚದಲ್ಲಿರಾಗಿ ಶೀಟ್ ಮಾಡಿಸಿ. ಅದಕ್ಕೆ ಚಿನ್ನದ ಲೇಪನ ಮಾಡಿಸಿ 2019 ರಲ್ಲಿ ನೀಡಿದ್ದೆ.
ದ್ವಾರಪಾಲಕರ ಚಿನ್ನ ನಾಪತ್ತೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಆದರೂ ಎಸ್ ಐಟಿ ಕೇಳಿದ ಪ್ರಶ್ನೆಗಳಿಗೆ ಉತ್ತರ ದಾಖಲೆ ನೀಡಿರುಚೆ. ಮತ್ತೆ ಕರೆದರೆ ವಿಚಾರಣೆಗೆ ಹೊಗುವೆ ಎಂದಿದ್ದರು.
ಆ ದೇವರು ನಮಗೆ ಬೇಕಾದಷ್ಟು ನೀಡಿದ್ದಾರೆ. ಚಿನ್ನ ಕದಿಯುವ ಅಗತ್ಯತೆ ನನಗೆ ಇಲ್ಲ. ನಾವು ಎಂತಹ ಅಯ್ಯಪ್ಪ ಭಕ್ತರು ಎನ್ನುವುದು ಜನತೆಗೂ ಗೊತ್ತಿದೆ ಎಂದಿದ್ದರು. ಇವರ ಜೊತೆ ಉನ್ನಿ ಕೃಷ್ಣನ್ ಬಂಧನವೂ ಆಗಿದೆ

























