
ವಾಷಿಂಗ್ಡನ್/ ಬೀಜಿಂಗ್, ಡಿ.26:- ಭಾರತದೊಂದಿಗೆ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಿಕೊಂಡು ಅಮೆರಿಕ-ಭಾರತ ಸಂಬಂಧಗಳನ್ನು ದುರ್ಬಲಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಅಮೆರಿಕಾ ಗಂಭೀರ ಆರೋಪ ಮಾಡಿದೆ.
ಜೊತೆಗೆ ಚೀನಾ, ಪಾಕಿಸ್ತಾನದೊಂದಿಗೆ ರಕ್ಷಣಾ ಸಹಕಾರವನ್ನು ಬಲಪಡಿಸುತ್ತಿದೆ ಎಂದು ಪೆಂಟಗನ್ ವರದಿ ಆರೋಪಿಸಿದೆ. ಈ ವಿಷಯ ಕುರಿತು ಸ್ಪಷ್ಟನೆ ನೀಡಿರುವ ಚೀನಾ, ಅಮೆರಿಕಾ ಸುಳ್ಳು ನಿರೂಪಣೆಗಳ ಮೂಲಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಪ್ರಯತ್ನ ಎಂದು ತಿರುಗೇಟು ನೀಡಿದೆ.
ಅಮೆರಿಕಾದ ಪೆಂಟಗನ್‍ನ ಈ ಆರೋಪ ಚೀನಾದ ರಕ್ಷಣಾ ನೀತಿಯನ್ನು ವಿರೂಪಗೊಳಿಸುತ್ತದೆ, ಚೀನಾ ಮತ್ತು ಇತರ ದೇಶಗಳ ನಡುವೆ ಭಿನ್ನಾಭಿಪ್ರಾಯ ಬಿತ್ತುತ್ತದೆ ಮತ್ತು ಅಮೆರಿಕ ತನ್ನ ಮಿಲಿಟರಿ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ನೆಪವನ್ನು ಹುಡುಕುವ ಗುರಿಯನ್ನು ಹೊಂದಿದೆ” ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಅಮೆರಿಕ, ತನ್ನ ಸಂಸತ್ತಿಗೆ ಸಲ್ಲಿಸಿದ ವರರಿಯಲ್ಲಿ ಪೆಂಟಗಾನ್, ಭಾರತ- ಚೀನಾ ನಡುವ ಸಮಸ್ಯೆ ಸೃಷ್ಟಿ ಮಾಡಲು ಬಯಸುತ್ತಿದೆ ಇದು ಫಲಪ್ರದವಾಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರತ್ಯೇಕವಾಗಿ, ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಜಾಂಗ್ ಕ್ಸಿಯೋಗಾಂಗ್ ಕೂಡ ಪೆಂಟಗನ್ ವರದಿಯನ್ನು ಟೀಕಿಸಿದ್ದು ಇದು ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಚೀನಾ ಮತ್ತು ಪಾಕಿಸ್ತಾನದ ನಡುವೆ ಬೆಳೆಯುತ್ತಿರುವ ಸಹಕಾರವನ್ನು ಸೂಚಿಸಿತು ಮತ್ತು ಮಿಲಿಟರಿ ನೆಲೆಯನ್ನು ಸ್ಥಾಪಿಸುವ ಯೋಜನೆ ರೂಪಿಸಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕ ಪ್ರತಿ ವರ್ಷ ಇಂತಹ ವರದಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ಪ್ರತ್ಯೇಕ ಮಾಧ್ಯಮಗೋಷ್ಠಿಯಲ್ಲಿ ಹೇಳಿದ ಅವರು ಪ್ರತಿ ವರ್ಷ ದೇಶಗಳ ನಡುವೆ ತಂದು ಹಾಕುವ ಕೆಲಸ ಮಾಡುತ್ತಿದೆ.ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕಾ ಮೂಗು ತೂರಿಸುತ್ತದೆ ಇದು ಸರಿಯಲ್ಲ ಎಂದಿದ್ದಾರೆ.
ವರದಿಯು ಚೀನಾದ ರಾಷ್ಟ್ರೀಯ ರಕ್ಷಣಾ ನೀತಿಯನ್ನು ದುರುದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿಕೊಂಡಿದೆ ಮತ್ತು ಅದರ ಮಿಲಿಟರಿ ಅಭಿವೃದ್ಧಿಯ ಬಗ್ಗೆ ಆಧಾರರಹಿತ ಊಹೆಗಳಿಂದ ಕೂಡಿದೆ. ಮಾ ಚೀನಾದ ಸಶಸ್ತ್ರ ಪಡೆಗಳ ಸಾಮಾನ್ಯ ಚಟುವಟಿಕೆಗಳನ್ನು ನಿಂದಿಸಿದೆ ಎಂದು ಅವರು ಹೇಳಿದ್ದಾರೆ.
ಚೀನಾದ ವಿಸ್ತರಿಸುತ್ತಿರುವ ರಕ್ಷಣಾ ಸಹಕಾರ ಪಾಕಿಸ್ತಾನದ ಕುರಿತಾದ ಹೇಳಿಕೆಗಳನ್ನು ನೇರವಾಗಿ ತಿಳಿಸಲು ಜಾಂಗ್ ನಿರಾಕರಿಸಿದ್ದು ದೇಶ ದೇಶಗಳ ನಡುವೆ ವೈಮನಸ್ಯ ತಂದು ಹಾಕುವ ಅಮೆರಿಕಾ ಪ್ರಯತ್ನ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.




























