
ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆದ ಸೌತ್‍ಬೀಸ್ ಹರಾಜಿನಲ್ಲಿ “ಜೋಡಿ” ಎಂದು ಹೆಸರಿಸಲಾದ ಅಪರೂಪದ ನ್ಯಾನೊಟೈರನ್ನಸ್ ಡೈನೋಸಾರ್‍ನ ಅಸ್ಥಿಪಂಜರವು ಸುಮಾರು 450 ಕೋಟಿ ರೂಪಾಯಿಗಳಿಗೆ ($47.3 ಮಿಲಿಯನ್) ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಈ ಅಪರೂಪದ ಪಳೆಯುಳಿಕೆಗಾಗಿ ಆರು ಪ್ರಮುಖ ಬಿಡ್‍ದಾರರು ಸುಮಾರು 12 ನಿಮಿಷಗಳ ಕಾಲ ತೀವ್ರ ಪೈಪೆÇೀಟಿ ನಡೆಸಿದರು. ಪ್ರಸಿದ್ಧ ಟಿ. ರೆಕ್ಸ್ ಡೈನೋಸಾರ್ ಹೋಲುವ ಈ ಜೀವಿ, ಗಾತ್ರದಲ್ಲಿ ಅದಕ್ಕಿಂತ ಚಿಕ್ಕದಾಗಿದ್ದರೂ ಅತ್ಯಂತ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ವಿಜ್ಞಾನಿಗಳಿಗೆ ತಿಳಿದಿರುವಂತೆ ಈ ತಳಿಯ ಕೇವಲ ಮೂರು ಸಂಪೂರ್ಣ ಅಸ್ಥಿಪಂಜರಗಳು ಮಾತ್ರ ಪ್ರಪಂಚದಲ್ಲಿ ಲಭ್ಯವಿದ್ದು, ಆ ಪೈಕಿ ಇದು ಅತ್ಯಂತ ಸುಸ್ಥಿತಿಯಲ್ಲಿರುವ ಅಪರೂಪದ ಪಳೆಯುಳಿಕೆಯಾಗಿದೆ.
ಅಪರೂಪದ ನ್ಯಾನೊಟೈರನ್ನಸ್ ಡೈನೋಸಾರ್‍ನ ಅಸ್ಥಿಪಂಜರವು ಸಾರ್ವಜನಿಕರ ಮತ್ತು ವಿಜ್ಞಾನಿಗಳ ಗಮನ ಸೆಳೆದಿದೆ. ಆರಂಭದಲ್ಲಿ ಸೌತ್‍ಬೀಸ್ ಸಂಸ್ಥೆಯು ಈ ಅಸ್ಥಿಪಂಜರಕ್ಕೆ 6 ರಿಂದ 9 ಮಿಲಿಯನ್ ಡಾಲರ್‍ಗಳಷ್ಟು ಅಂದಾಜು ಬೆಲೆಯನ್ನು ನಿಗದಿಪಡಿಸಿತ್ತಾದರೂ, ಹರಾಜಿನಲ್ಲಿ ಕೇವಲ 12 ನಿಮಿಷಗಳ ಕಾಲ ಆರು ಪ್ರಮುಖ ಬಿಡ್‍ದಾರರ ನಡುವೆ ನಡೆದ ತೀವ್ರ ಪೈಪೆÇೀಟಿ ಹಾಗೂ ಹರಾಜಿನ ತೀವ್ರತೆಯಿಂದಾಗಿ ಇದು ಅಂತಿಮವಾಗಿ 47.3 ಮಿಲಿಯನ್ ಡಾಲರ್‍ಗಳಿಗೆ, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 450 ಕೋಟಿ ರೂಪಾಯಿಗಳಿಗೆ ಬಿಕರಿಯಾಯಿತು. ಈ ಬೃಹತ್ ಮೊತ್ತದ ಮಾರಾಟದೊಂದಿಗೆ, ಜಗತ್ತಿನ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಡೈನೋಸಾರ್ ಪಳೆಯುಳಿಕೆಗಳಲ್ಲಿ ‘ಜೋಡಿ’ ಎರಡನೇ ಅತ್ಯಂತ ದುಬಾರಿ ಅಸ್ಥಿಪಂಜರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುಮಾರು 6.7 ಕೋಟಿ ವರ್ಷಗಳಷ್ಟು ಹಳೆಯದಾದ ಈ ಪಳೆಯುಳಿಕೆಯು ದೈಹಿಕವಾಗಿ 20 ಅಡಿ ಉದ್ದ ಹಾಗೂ 9.5 ಅಡಿ ಎತ್ತರವನ್ನು ಹೊಂದಿದೆ. ಈ ಪಳೆಯುಳಿಕೆಯ ಪ್ರಮುಖ ವಿಶೇಷತೆಯೆಂದರೆ ಇದರಲ್ಲಿ ಸುಮಾರು 35 ತೀಕ್ಷ್ಣವಾದ ಹಲ್ಲುಗಳು ಮತ್ತು ನಾಲ್ಕೂ ಕಾಲುಗಳ ಉಗುರುಗಳನ್ನು ಒಳಗೊಂಡ ಸಂಪೂರ್ಣ ತಲೆಬುರುಡೆಯು ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಲ್ಪಟ್ಟಿದೆ. 2023 ರಲ್ಲಿ ಇದನ್ನು ಪ್ರದರ್ಶನಕ್ಕಿಟ್ಟಿದ್ದಾಗ, ಇದು ಪ್ರಸಿದ್ಧ ಟಿ. ರೆಕ್ಸ್ ಡೈನೋಸಾರ್‍ನ ಮರಿ ಅಥವಾ ಸಣ್ಣ ವಯಸ್ಸಿನ ಪಳೆಯುಳಿಕೆ ಎಂದು ಭಾವಿಸಲಾಗಿತ್ತು.
ಆದರೆ ಇತ್ತೀಚಿನ ಆಳವಾದ ವೈಜ್ಞಾನಿಕ ಅಧ್ಯಯನಗಳು ಮತ್ತು ಪಳೆಯುಳಿಕೆ ತಜ್ಞರ ಸಂಶೋಧನೆಗಳ ನಂತರ, ಇದು ಟಿ. ರೆಕ್ಸ್‍ನ ಮರಿಯಲ್ಲ, ಬದಲಿಗೆ ಅದೇ ಕಾಲಘಟ್ಟದಲ್ಲಿ ಜೀವಿಸುತ್ತಿದ್ದ ‘ನ್ಯಾನೊಟೈರನ್ನಸ್’ ಎಂಬ ಸಂಪೂರ್ಣ ಭಿನ್ನ ಹಾಗೂ ಪ್ರತ್ಯೇಕ ಸಣ್ಣ ತಳಿಯ ಡೈನೋಸಾರ್ ಎಂಬುದು ದೃಢಪಟ್ಟಿದೆ. ಪ್ರಪಂಚದಾದ್ಯಂತ ಈ ಜೀವಿಗಳ ಕೇವಲ ಮೂರು ಸಂಪೂರ್ಣ ಅಸ್ಥಿಪಂಜರಗಳು ಮಾತ್ರ ಲಭ್ಯವಿದ್ದು, ಆ ಪೈಕಿ ಪ್ರಸ್ತುತ ಹರಾಜಾಗಿರುವ ಈ ಪಳೆಯುಳಿಕೆಯೇ ಅತ್ಯಂತ ಸುಸ್ಥಿತಿಯಲ್ಲಿರುವ ಅಪರೂಪದ ಸಂಪತ್ತು ಎಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ.





















