
ಉಡುಪಿ, ಮೇ.೧೯: ಅಪ್ರಾಪ್ತ ಪ್ರಾಯದ ಬಾಲಕಿಯನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ರವಿವಾರ ನಡೆದಿದೆ. ರಕ್ಷಿಸಲ್ಪಟ್ಟ ಅಪರಿಚಿತ ಬಾಲಕಿಗೆ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ನಿಟ್ಟೂರು ಬಾಲಕೀಯರ ಬಾಲ ಮಂದಿರದಲ್ಲಿ ಪುರ್ನವಸತಿ ಕಲ್ಲಿಸಲಾಗಿದೆ. ಬಾಲಕಿಯು ಹೆಸರು ಆರತಿ (೧೩ವ) ಅಹಮದಬಾದ್ ಮಧುವನದ ನಿವಾಸಿಯೆಂದು ಹೇಳಿಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ರೈಲ್ವೆ ಆರ್ ಪಿ ಎಫ್ ಸುಧೀರ್ ಶೆಟ್ಟಿ, ಜೀನಾ ಪಿಂಟೋ, ರೈಲ್ವೇ ಮಕ್ಕಳ ಸಹಾಯವಾಣಿ ಸಿಬ್ಬಂದಿ ಅತೀಶ್ ಕುಮಾರ್, ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ರಮ್ಯ, ಲಕ್ಷ್ಮೀಕಾಂತ್ ಭಾಗಿಯಾಗಿದ್ದರು.