
ಸಂಜೆವಾಣಿ ವಾರ್ತೆ
ಹುಣಸೂರು.ಡಿ.16- ತಾಲೂಕಿನ ಸಿ.ಬಿ.ಟಿ ಕಾಲೋನಿ ಹಾಗೂ ತರಿಕಲ್ಲು ಗ್ರಾಮದ ಕೂಲಿ ಕಾರ್ಮಿಕರು ಕೆಲಸ ಮುಗಿಸಿ ಗೂಡ್ಸ್ ವಾಹನದಲ್ಲಿ ವಾಪಸ್ ಬರುತ್ತಿದ್ದ ವೇಳೆ ಗದ್ದಿಗೆ ಮುಖ್ಯ ರಸ್ತೆಯ ಬಸವನಹಳ್ಳಿ ಗ್ರಾಮದ ಸಮೀಪ ಭೀಕರ ಅಪಘಾತ ಸಂಭವಿಸಿ ಓರ್ವರೂ ಮೃತಪಟ್ಟು 24 ಜನರು ಗಂಭೀರವಾಗಿ ಗಾಯಗೊಂಡಿದ್ದ ಪ್ರಕರಣವನ್ನು ವಿಶೇಷ ಪ್ರಕರಣವನಾಗಿ ಪರಿಗಣಿಸಿ ಮೃತ ಭಾರತಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ 2 ಲಕ್ಷ ಪರಿಹಾರವನ್ನು ಮಂಜೂರು ಮಾಡಿಸಿದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥರಿಗೆ ಭಾರತಿ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ದುರ್ಘಟನೆ ನಡೆದ ಸಂದರ್ಭ ಮಾಜಿ ಶಾಸಕ ಮಂಜುನಾಥ್ ಗಾಯಳುಗಳನ್ನು ಭೇಟಿ ಮಾಡಿ ವೈಯಕ್ತಿಕ ಧನ ಸಹಾಯ ಕೂಡ ಮಾಡಿದನ್ನು ಇಲ್ಲಿ ಸ್ಮರಿಸಬಹುದು.


























