
(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.21: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಡಾ.ವೀಣಾ ಎಮ್ ಇವರ ಮಾರ್ಗದರ್ಶನದಲ್ಲಿ
“ಇಂಪ್ಯಾಕ್ಟ್ ಆಫ್ ಸ್ಟಾರ್ಟ್ ಅಪ್ ಇಂಡಿಯಾ ಇನಿಷಿಯೇಟಿವ್ ಆನ್
ಸ್ಟಾರ್ಟ್ ಅಪ್ ಎಕೋಸಿಸ್ಟಮ್ – ಆ್ಯನ್ ಅನಾಲಿಟಿಕಲ್ ಸ್ಟಡಿ ಆನ್ ಕಲ್ಯಾಣ ಕರ್ನಾಟಕ ರೀಜನ್” ಎಂಬ ವಿಷಯದ ಮೇಲೆ ಅನಿತಾ ಬಸವರಾಜ್ ಇವರಿಗೆ ವಿವಿಯು ಪಿಹೆಚ್‌ಡಿ ಪದವಿ ಘೋಷಣೆ ಮಾಡಿದೆ.























