
ಅನಾನಸ್ ನೋಡಲು ಆಕರ್ಷಕ, ಉತ್ತಮರುಚಿ, ಎಲ್ಲಕಡೆಯೂ ಸುಲಭವಾಗಿ ಸಿಗುವಂತಹ ಹಣ್ಣು. ಇದನ್ನು ಉಪ್ಪು, ಖಾರದೊಡನೆ ಸೇವಿಸಬಹುದು ಹಾಗೂ ಭಾರತದ ಅಡುಗೆಗಳಲ್ಲಿ ಉಪಯೋಗಿಸಬಹುದು. ಈ ಹಣ್ಣು ಸಿಹಿ ಮತ್ತು ಹುಳಿರಸದಿಂದ ಕೂಡಿದ್ದು, ಸತ್ವಶಾಲಿ, ಆರೋಗ್ಯವರ್ಧಕ, ಮೂತ್ರವರ್ಧಕ, ಷರಬತ್ತಿನ ರೂಪದಲ್ಲಿ ಹಾಗೂಜಾಮ್, ಗೊಜ್ಜುಇವುಗಳಲ್ಲಿಬಳಸಬಹುದು. ಇದು ರೋಗನಿರೋಧಕ ಶಕ್ತಿಯಿಂದ ಕೂಡಿದ್ದು, ಪಿತ್ತಕಾರಕ, ದಾಹ, ಅಜೀರ್ಣ, ಮೂಲವ್ಯಾಧಿ, ಕಂಠರೋಗಿಗಳಿಗೆ ದಿವ್ಯಔಷಧಿಯಾಗಿದೆ. ಇದು ತೇವಾಂಶ, ಸಸಾರಜನಕ, ಖನಿಜಾಂಶಗಳು,ರಂಜಕ, ಶರ್ಕರ ಪಿಷ್ಠ, ಸುಣ್ಣ, ಕೊಬ್ಬು, ಕಬ್ಬಿಣ, ಎ ಮತ್ತುಬಿ ಜೀವಸತ್ವಗಳನ್ನು ಹೊಂದಿದೆ.
1.ಕಂಠರೋಹಿಣಿ (ಡಿ ಪೀರಿಯಾ) ಇದು ಒಂದು ವಿಧವಾದ ರೋಗವಾಗಿದ್ದು, ಮಕ್ಕಳಲ್ಲಿ ಜಾಸ್ತಿಯಾಗಿ ಕಂಡುಬರುತ್ತದೆ. ಈರೋಗ ಯುರೋಪಿನಿಂದ ಆರಂಭವಾದದ್ದು.ಇದುಒಂದು ರೀತಿಯ ಕ್ರಿಮಿಗಳ ಮೂಲಕ ಆಕ್ರಮಿಸುತ್ತದೆ. ಈ ಕ್ರಿಮಿಗಳು ಗಂಟಲು ಹಾಗೂಮೂಗಿನೊಳಗೆ ಬಂದು ಒಂದು ರೀತಿಯ ವಿಷವನ್ನು ಹುಟ್ಟಿಸುತ್ತದೆ. ಈ ವಿಷ ಹೃದಯವನ್ನು ಸೇರಿ ಬಹಳ ತೊಂದರೆ ಉಂಟುಮಾಡುತ್ತದೆ. ಈ ರೋಗ ಮಕ್ಕಳ ಆಟಿಕೆಗಳಿಂದ ಪೆನ್ಸಿಲ್, ಬಳಪ, ಸ್ಪೂನ್‍ಗಳ ಮುಖಾಂತರ ಹರಡುತ್ತದೆ.ಈ ಸಂದರ್ಭದಲ್ಲಿ ಮಕ್ಕಳಿಗೆ ಕೆಮ್ಮು ಬರುತ್ತದೆ. ಅವರು ಕೆಮ್ಮಿದಾಗ ಕೂಡ ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದು ದೊಡ್ಡವರಿಗೂ ಸಹ ಬರುತ್ತದೆ. ಗಂಟಲಲ್ಲಿ ಬೂದಿಬಣ್ಣದ ಹೊರೆಯು ಕಟ್ಟಿಕೊಳ್ಳುತ್ತದೆ. ಈ ಸಮಯದಲ್ಲಿ ಅನಾನಸ್ ರಸ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಣ್ಣಿನ ರಸವನ್ನು ಶೋಧಿಸಿ ಗಾಜಿನ ಪಾತ್ರೆಗೆ ಹಾಕಬೇಕು. ಬಾಯಿಯನ್ನು ಬಿಸಿನೀರಿನಿಂದ ಮುಕ್ಕಳಿಸಿ, ಬೆಳ್ಳಿ ಚಮಚದಲ್ಲಿ ರಸವನ್ನು ಬಾಯಿಗೆ ಹಾಕಿ, ಹೊರೆ ಅಡ್ಡವಿರುವುದರಿಂದ ಗಂಟಲು ಒಳಗೆ ಹೋಗದಿರಬಹುದು.ಆ ಪೆÇರೆಯನ್ನು ಈರಸಕತ್ತರಿಸುತ್ತದೆ. ಚಮಚದ ಹಿಂಭಾಗದಿಂದ ಈ ಹೊರೆಯನ್ನು ತೆಗೆಯಬಹುದು. ಚಮಚವನ್ನು ಬಿಸಿನೀರಿನಲ್ಲಿ ಅದ್ದಿ ಇದೇ ರೀತಿ 2,3 ಬಾರಿ ಮಾಡಬೇಕು. ಇದರಿಂದ ರೋಗ ಗುಣವಾಗುತ್ತದೆ.
- ಯಕೃತ್ತಿನ ಸಮಸ್ಯೆಗೆ: ಅನಾನಸ್ ಹಣ್ಣನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಒಂದು ಗಾಜಿನ ಪಾತ್ರೆಯಲ್ಲಿ ಹಾಕಿ, ಜೇನುತುಪ್ಪ ಹಾಕಬೇಕು. ಇದನ್ನು 4 – 5 ದಿನಗಳ ನಂತರ ಬೆಳಿಗ್ಗೆ ಹಾಗೂ ಸಂಜೆ 3-4 ತುಂಡನ್ನು ಸೇವಿಸುತ್ತಾ ಬಂದರೆ ಯಕೃತ್ತಿನ ಸಮಸ್ಯೆ ಕಡಿಮೆಯಾಗುತ್ತದೆ. ಲಿವರ್ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಅರಿಶಿನ ಕಾಮಾಲೆ ರೋಗಕ್ಕೂ ಒಳ್ಳೆಯ ಔಷಧಿ.
- ಜೀರ್ಣಶಕ್ತಿಗೆ: ಜೀರ್ಣಶಕ್ತಿಗೆ ಅನಾನಸ್ ಹಣ್ಣನ್ನು ಸಕ್ಕರೆ ಪಾಕದಲ್ಲಿ ಹಾಕಿ ಮಕ್ಕಳಿಗೆ ಕೊಡುತ್ತಿದ್ದರೆ, ಜೀರ್ಣಶಕ್ತಿಗೆ ಸಹಾಯವಾಗುತ್ತದೆ.
4.ಧೂಮಪಾನದ ದುಷ್ಪರಿಣಾಮಕ್ಕೆ: ಬೀಡಿ, ಸಿಗರೇಟ್ ಸೇದುವವರು ಈ ಹಣ್ಣನ್ನು ಕ್ರಮವಾಗಿ ಸೇವಿಸುತ್ತಾ ಬಂದರೆ ದುಷ್ಪರಿಣಾಮಗಳು ನಿವಾರಣೆಯಾಗುತ್ತವೆ. - ಹೊಟ್ಟೆ ತೊಳೆಸುವಿಕೆ, ತಲೆಸುತ್ತು, ನೆಗಡಿ, ರಕ್ತಹೀನತೆ ಹಾಗೂ ಮೂಲವ್ಯಾಧಿ: ಈ ಕಾಯಿಲೆಗಳಿಗೆ ಅನಾನಸ್ ಹಣ್ಣಿಗೆ ಕಾಳುಮೆಣಸಿನಪುಡಿಹಾಗೂ ಉಪ್ಪನ್ನು ಹಾಕಿತಿನ್ನುವುದರಿಂದ ಬೇಗ ಗುಣವಾಗುತ್ತದೆ.
- ಉರಿಮೂತ್ರಕ್ಕೆ: ಉರಿಮೂತ್ರ ಹಾಗೂ ಅಲ್ಪಾಂಶ ಮೂತ್ರ ವಿಸರ್ಜನೆಯಾಗುವವರಿಗೆ ಈ ಹಣ್ಣಿನ ರಸ ಸೇವನೆಯಿಂದ ಗುಣವಾಗುವುದು.
- ಚರ್ಮರೋಗಕ್ಕೆ: ತುರಿಕಜ್ಜಿ, ಗಜಕರ್ಣ ಇನ್ನಿತರ ಚರ್ಮರೋಗಗಳಿಗೆ ಅನಾನಸ್ ಹಣ್ಣಿನ ರಸ ಹಚ್ಚುವುದರಿಂದ ಗುಣವಾಗುತ್ತದೆ.
- ಎಚ್ಚರಿಕೆ: ಗರ್ಭಿಣಿ ಸ್ತ್ರೀಯರು ಈ ಹಣ್ಣನ್ನು ಸೇವಿಸಬಾರದು. ಗರ್ಭಪಾತದಿ0ದ ಗರ್ಭಕೋಶದಲ್ಲಿ ಹೆಪ್ಪುಗಟ್ಟಿರುವ ರಕ್ತದೋಷವನ್ನು ನಿವಾರಿಸಲು ಇದರ ಗಿಡದ ಬೇರನ್ನು ಉಪಯೋಗಿಸಬೇಕು.
- ಸ್ತ್ರೀಯರಿಗೆ ಮಾಸಿಕ ಸ್ರಾವ: ಮಾಸಿಕ ಸ್ರಾವ ಸರಿಯಾಗಿ ಆಗದಿರುವ ಸ್ತ್ರೀಯರು ಎಳೆ ಅನಾನಸ್?ಯಿಯರಸವನ್ನು ಸೇವಿಸುತ್ತಿದ್ದರೆ, ಮಾಸಿಕ ಸ್ರಾವ ನಿಧಾನವಾಗಿ ಸರಿಹೋಗುತ್ತದೆ.
- ಎದೆಉರಿಗೆ:ಎದೆಉರಿ ಮತ್ತು ಸಂಕಟಗಳಿಗೆ ಹಣ್ಣಿನ ರಸವನ್ನು ಕುಡಿಯುವುದರಿಂದ ಬೇಗನೆ ಗುಣವಾಗುವುದು.
- ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್‍ವತಿಯಿಂದ ಪ್ರಕಟಣೆ.
2.ಡಾ.ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತುಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ.
9535383921 9535383921





























