ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.04: ಮಿನಿ ವಿಧಾನಸೌಧದ ಮುಂದೆ ಅನಧಿಕೃತವಾಗಿ ತಲೆಎತ್ತಿರುವ ಪೆಟ್ಟಿಗೆ ಅಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಒತ್ತಾಯಿಸಿದ್ದಾರೆ.
ಅವರು ಮಾತನಾಡಿ ಪ್ರತಿನಿತ್ಯ ತಾಲ್ಲೂಕು ಕಚೇರಿಗೆ ಸಾವಿರಾರು ಜನರು ಬಂದು ಹೋಗುತ್ತಾರೆ ಆ ಸಮಯದಲ್ಲಿ ತಾಲ್ಲೂಕು ಕಚೇರಿ ಸುತ್ತಮುತ್ತ ವಾಹನಗಳ ನಿಲುಗಡೆಯಿಂದ ಟ್ರಾಫಿಕ್ ಕಿರಿಕಿರಿ ಉಂಟುಮಾಡುತ್ತಿದ್ದು ಈ ರಸ್ತೆಯಲ್ಲಿ ಬಾರಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಇಂತಹ ಸಂದರ್ಭದಲ್ಲಿ ಕಚೇರಿಯ ಮುಂಬಾಗದ ಗೇಟ್ ಬಳಿ ಅಂಗಡಿ ತೆರೆಯಲು ಅನಧಿಕೃತವಾಗಿ ಪೆಟ್ಟಿಗೆ ತಂದಿಟ್ಟಿರುವುದರಿಂದ ಮತ್ತಷ್ಟು ಟ್ರಾಫಿಕ್ ಉಂಟಾಗುವುದು ಸ್ಪಷ್ಟವಾಗಿ ಕಾಣುತ್ತಿದೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪೆಟ್ಟಿಗೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರಲ್ಲದೆ ಈ ಪೆಟ್ಟಿಗೆಯನ್ನು ತೆರವು ಮಾಡದಿದ್ದರೆ ಮತ್ತಷ್ಟು ಅಂಗಡಿಗಳು ಹುಟ್ಟಿಕೊಳ್ಳುತ್ತವೆ ಇದರಿಂದ ಈ ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಲಿದೆ ಅದರಲ್ಲೂ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಲ್ಲಿ ಇಟ್ಟಿರುವುದು ಎಷ್ಟು ಸರಿ ಎಂದು ವೇಣು ಪ್ರಶ್ನೆ ಮಾಡಿದ್ಧಾರೆ.
ಅಷ್ಟಕ್ಕೂ ಈ ಪೆಟ್ಟಿಗೆ ಇಡಲು ಅನುಮತಿ ನೀಡಿರುವುದಾದರು ಯಾರು ರಸ್ತೆಯಲ್ಲಿ ಪೆಟ್ಟಿಗೆ ಇಡಲು ಅವಕಾಶವಿದಿಯೇ ಎಲ್ಲವನ್ನೂ ನೋಡಿಕೊಂಡು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಬೇಜವಬ್ದಾರಿಯ ಪರಮಾವದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂದಿನಿ ಮಳಿಗೆ ಹೆಸರಿನಡಿ ಸರ್ಕಾರದ ಜಾಗದಲ್ಲಿ ಎಲ್ಲೆಂದರಲ್ಲಿ ಮಳಿಗೆಗಳನ್ನು ತರೆಯಲಾಗಿದೆ ಆದರೆ ಆ ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟವನ್ನು ಮಾತ್ರ ಮಾಡಬೇಕು ಆದರೆ ಆ ಮಳಿಗೆಗಳಲ್ಲಿ ಕಾಫಿ ಟೀ ಸಿಗರೆಟ್ ಬೀಡಿ ಪಾನ್ ಪರಾಗ್ ಗುಟ್ಕಾ ಸೇರಿದಂತೆ ಬೇರೆ ರೀತಿಯ ಪದಾರ್ಥಗಳ ಮಾರಾಟ ಜಾಸ್ತಿಯಾಗಿದೆ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಮನ್ ಮುಲ್ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಕಂಡರೂ ಕಾಣದಂತಿದ್ದಾರೆ ಎಂದು ಆರೋಪ ಮಾಡಿದರು.
ಕ್ಲಬ್ ಗಳಿಗೆ ಕಡಿವಾಣ ಹಾಕಿ:-ಹಲವು ವರ್ಷಗಳಿಂದ ತಾಲ್ಲೂಕಿನಲ್ಲಿ ಕ್ಲಬ್ ಗಳು ಮರೆಯಾಗಿದ್ದವು ಈಗ ಒಂದೊಂದಾಗಿ ಪ್ರಾರಂಭವಾಗುತ್ತಿವೆ ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬೀಳುವುದರಲ್ಲಿ ಅನುಮಾನವಿಲ್ಲ ಆದ್ದರಿಂದ ತಾಲೂಕಿನಲ್ಲಿ ತಲೆಎತ್ತಿರುವ ಕ್ಲಬ್ ಗಳಿಗೆ ಕಡಿವಾಣ ಹಾಕಬೇಕಿದೆ ಎಂದು ವೇಣು ಆಗ್ರಹಿಸಿದರು.
ಶಾಸಕರ ಮಧ್ಯಪ್ರವೇಶಕ್ಕೆ ಆಗ್ರಹ:- ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಪೆಟ್ಟಿಗೆ ಅಂಗಡಿಗಳು ತೆರೆಯಲು ಪ್ರಾರಂಭವಾಗಿವೆ ಇದರಿಂದ ರಸ್ತೆಗಳು ಕಿರಿದಾಗಿ ವಾಹನಗಳ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿಗಳ ತೆರವಿಗೆ ಅವಕಾಶ ನೀಡದಂತೆ ಶಾಸಕ ಹೆಚ್.ಟಿ.ಮಂಜು ರವರು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ವೇಣು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್,ಪುರಸಭಾ ಮಾಜಿ ಸದಸ್ಯ ಹನುಮಂತರಾಜು,ಕರವೇ ಕಸಬಾ ಹೋಬಳಿ ಅಧ್ಯಕ್ಷ ಕೊಮ್ಮೇನಹಳ್ಳಿ ಅನಿಲ್,ನಗರಘಟಕದ ಅಧ್ಯಕ್ಷ ಮದನ್ ಗೌಡ,ಸ್ವಾಮಿಗೌಡ,ಆನಂದ ಸೇರಿದಂತೆ ಹಲವರಿದ್ದರು.


























