
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.15: ಅಸ್ವಚ್ಚತೆಯಿಂದ ಕೂಡಿದ್ದ ನಗರದ ಎಪಿಎಂಸಿ ಆವರಣ, ತರಕಾರಿ ಮತ್ತು ಹಣ್ಣುಗಳ ಮಾರಾಟದ ಸ್ಥಳ ಎಪಿಎಂಸಿಯ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ ಅವರ ಆಸಕ್ತಿಯಿಂದ ಸ್ವಚ್ಚವಾಗಿದೆ.
ದಿನ ಬೆಳಿಗ್ಗೆ ತರಕಾರಿ, ಸೊಪ್ಪು, ಹಣ್ಣುಗಳ ಹೋಲ್ ಸೇಲ್ ಮಾರಾಟ ಮಾಡಿದ ನಂತರ ಉಳಿದ ಮತ್ತು ಕೆಟ್ಟು ಹೋದವುಗಳನ್ನು ಎಲ್ಲಂದರಲ್ಲಿ ಬೀಸಾಡಿದ್ದರು. ಅದರಲ್ಲೂ ಅವನ್ನು ದನಗಳು ಅರ್ಧ ಮರ್ಧ ತಿಂದು ಬಿಟ್ಟಿದ್ದವು. ಅವು ಕೊಳೆತು ನಾರುತ್ತಿತ್ತು ಈ ಪ್ರದೇಶ. ಇಂತಹುದನ್ನು ಅಂದಂದೇ ಕ್ಲೀನ್ ಮಾಡಿದರೆ ಈ ಅಸ್ವಚ್ಚತೆಯನ್ನು ದೂರ ಮಾಡಬಹುದಿತ್ತು. ಬಹು ದಿನಗಳಾಗಿದ್ದರಿಂದ ಕೊಳೆನಾರುತ್ತಿತ್ತು.
ಈ ಬಗ್ಗೆ ಸಂಜೆವಾಣಿ ವರದಿ ಮಾಡಿತ್ತು. ಈಗ ಈ ಪ್ರದೇಶ ಜೆಸಿಬಿ, ನೌಕರರಿಂದ ಸ್ವತಃ ನಾಗೇಂದ್ರ ಅವರು ಮುಂದೆ ನಿಂತು ಸ್ವಚ್ಚಗೊಳಿಸಿ ಶುದ್ದ ಮಾಡಿದ್ದಾರೆ.
ಪತ್ರಿಕೆಗಳಲ್ಲಿ ವರದಿ ಬಂತು ಎಂದು ಸ್ವಚ್ಚ ಮಾಡಿದರೆ ಸಾಲದು ಈನಕಾರ್ಯ ನಿರಂತರವಾಗಿ ಆಗಬೇಕೆಂಬುದು ಜನರ ಆಶಯವಾಗಿದೆ.
ತರಕಾರಿ ಹಣ್ಣುಗಳ ವೇಸ್ಟ್ ನ್ನು ಒಂದು ಕಡೆ ಹಾಕಲು ಬೃಹತ್ ಡಸ್ಟ್ ಬಿನ್ ಗಳನ್ನು ಇಟ್ಟು ಆಗಿಂದಾಗ್ಗೆ ಸ್ವಚ್ಚತೆಗೆ ಕ್ರಮ ತೆಗೆದುಕೊಳ್ಳಲಿದೆಂದು ಕಟ್ಟೆಮನೆ ನಾಗೇಂದ್ರ ಸಂಜೆವಾಣಿಗೆ ಹೇಳಿದ್ದಾರೆ.