ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ.14- ಸಮೀಪದ ನಂಜನಗೂಡು ತಾಲೂಕಿನ ತಾಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹರಿಹರಪುರದ ಆರ್.ಜ್ಞಾನೇಶ್ ಅವರು ಬುಧವಾರ ಪುನರಾಯ್ಮೆಗೊಂಡರು.
ವೈಯುಕ್ತಿಕ ಕಾರಣಕ್ಕೆ ಜ್ಞಾನೇಶ್ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ನರಸೀಪುರ ಬಿಳಿಗೆರೆ ಮುಖ್ಯ ರಸ್ತೆಯಲ್ಲಿರುವ ತಾಯೂರು ಗೇಟ್ ಬಳಿಯಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಸಭೆಯನ್ನು ಕರೆಯಲಾಗಿತ್ತು. ಆಡಳಿತ ಮಂಡಳಿಯ ನಿರ್ದೇಶಕರು ಅವರ ಮನವೊಲಿಸಿ, ಜ್ಞಾನೇಶ್ ಅವರನ್ನೇ ಅವಿರೋಧವಾಗಿ ಮರು ಆಯ್ಕೆ ಮಾಡಿದರು.
ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಎನ್.ಸುಮ ಕಾರ್ಯನಿರ್ವಹಿಸಿದರು. ಸಂಘದ ಉಪಾಧ್ಯಕ್ಷ ಹಾರೋಪುರ ಶಿವಣ್ಣ, ನಿರ್ದೇಶಕರಾದ ಎಂ. ಬಸವರಾಜು, ಜಿ.ಪಿ. ಮಹದೇವ ಪ್ರಸಾದ್, ಟಿ.ಪಿ.ಮಹೇಶ್, ಜಿ.ಎಂ. ಮಹದೇವಸ್ವಾಮಿ, ಟಿ.ಆರ್. ಲೋಕೇಶ್, ಕುಮಾರ, ಪುಟ್ಟಸ್ವಾಮಿ, ಮುದ್ದ ಮಾದೇಗೌಡ, ಸಾಕಮ್ಮ, ಚಾಮಮ್ಮ, ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕ ಶಿವಲಿಂಗೇಗೌಡ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಮೋದ್ ಕುಮಾರ್, ಹಿರಿಯ ಸಹಾಯಕ ಆರ್.ಕಿಶೋರ್ ಕುಮಾರ್ ಹಾಗೂ ಇತರರು ಇದ್ದರು.



























