
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.31: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ 7ಮತ್ತು 8ನೇ ವಿಭಾಗದ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಆರಂಭವಾಯಿತು. ಶಾಲಾ ಆವರಣದಲ್ಲಿ ತಳೀರು ತೋರಣ, ಫರಾರಿ, ರಂಗೋಲಿಗಳಿಂದ ಶೃಂಗರಿಸಿ ಅಧಿಕಾರಿಗಳು ಮತ್ತು ಮಕ್ಕಳು ಸೇರಿ ಶಾಲಾ ಪ್ರಾರಂಭೋತ್ಸವ ನೇರವೆರಿಸಲಾಯಿತು.
ತಹಶೀಲ್ದಾರ್ ನರಸಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡಬಾರದು ಮಕ್ಕಳೆ ಆಸ್ತಿಗಳಾಗಿ ಮಾಡಿರಿ, ಧರ್ಮ ನೀತಿಯಲ್ಲಿ ನಡೆಯುವಂತೆ ಮನೆಯ ಮೊದಲ ಪಾಠ ಶಾಲೆ ಎನ್ನುವ ಹಾಗೆ ಶಿಕ್ಷಕ, ಶಿಕ್ಷಕಿಯರನ್ನು ಪಾಠ ಮಾಡಿದಲ್ಲಿ ಗಾಂಧಿ, ವಿವೇಕಾನಂದರಂತಹ ಮಕ್ಕಳನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗುರ್ರಪ್ಪ ಮಾತನಾಡಿ, ತರಗತಿಯಲ್ಲಿ ಶಿಕ್ಷರಾದವರು ಸ್ಫೂರ್ತಿದಾಯಕವಾಗಿದ್ದರೆ ಮಕ್ಕಳು ಶ್ರದ್ಧೆಯಿಂದ ಪಾಠ ಕಲಿಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶ ಹೆಚ್ಚಿಸಲು ಶಿಕ್ಷಕರು ಮತ್ತಷ್ಟು ಪ್ರಯತ್ನಿಸಿ, ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತೆ ಸಲಹೆ ನೀಡಿದರು. ಇನ್ನು ಕಟ್ಟಡಕ್ಕೆ ಅಡಿಪಾಯ ಎಷ್ಟು ಮುಖ್ಯವೋ ಹಾಗೆಯೇ ಮಕ್ಕಳ ಶಿಕ್ಷಣಕ್ಕೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯ ಎಂದರು.
ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಕರಾದ ನಾವು ನಮ್ಮ ಶಕ್ತಿ ಮೀರಿ ಶಿಕ್ಷಣ ನೀಡುತ್ತೇವೆ ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುವುದಾಗಿ ಮುಖ್ಯಗುರು ಸದಾಶಿವ ಎನ್ ಬನಸೋಡೆ ತಿಳಿಸಿದರು.
ಇದೇ ವೇಳೆ ತಾಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಉಚಿತ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಿದರು. ಮಕ್ಕಳು ಪ್ರಾರಂಭದ ದಿನವೇ ಪಠ್ಯ ಪುಸಕ್ತ, ಸಮವಸ್ತ್ರ ಪಡೆದು ಶಾಲೆಯಲ್ಲಿ ಸಿಹಿಯಾದ ತಿಂಡಿಗಳನ್ನು ಸವಿದು ಆನಂದಿಂದುಳಿದರು. ಶಾಲೆಯ ಸುಂದರ ವಾತವರಣಗಳಲ್ಲಿ ಕಾಲ ಕಳೆದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಲಕ್ಷ್ಮಣ, ರಾಜ್ಯ ದೈ.ಶಿ.ಸಂಘದ ಉಪಾಧ್ಯಕ್ಷ ಈರಣ್ಣ, ಟಿ.ಪಿ.ಒ ರಮೇಶ್, ಇ.ಸಿ.ಒ, ಬಿ.ಆರ್.ಪಿ, ಸಿ.ಆರ್.ಪಿ ಹಾಗೂ ಶಿಕ್ಷಕರಾದ ಶಿವಲಿಂಗಪ್ಪ, ಶರಣಮ್ಮ, ಸುಜಾತ, ಲಿಂಗಣ್ಣ, ಗೋಪಾಲ, ಶಿವಲೀಲಾ, ಅಶ್ವಿನಿ, ಲಾವಣ್ಯ, ಅಶ್ವಿನಿ ಇದ್ದರು.
