ಅತ್ಯಾಚಾರ ಖಂಡಿಸಿ ಢಾಕಾದಲ್ಲಿ ವಿದ್ಯಾರ್ಥಿಗಳಲ್ಲಿ ಪ್ರತಿಭಟನೆ

ಢಾಕಾ, ಜೂ.30- ಸ್ಥಳೀಯ ಬಾಂಗ್ಲಾದೇಶದ ರಾಜಕಾರಣಿಯೊಬ್ಬರು ಹಿಂದೂ ಮಹಿಳೆಯ ಮೇಲೆ ನಡೆಸಿದ ಕ್ರೂರ ಅತ್ಯಾಚಾರ ಪ್ರಕರಣ ಖಂಡಿಸಿ ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಗಳನ್ನು ಸಂಘಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಢಾಕಾ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳ ಗುಂಪು, ಚಪ್ಪಾಳೆ ತಟ್ಟಿ ಘೋಷಣೆಗಳನ್ನು ಕೂಗುತ್ತಾ, ಅಪರಾಧಿಗಳ ವಿರುದ್ಧ “ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

21 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾ*ರ ಎಸೆಗಿದ ಆರೋಪದ ಮೇಲೆ ಸ್ಥಳೀಯ ರಾಜಕಾರಣಿ ಸೇರಿದಂತೆ ಐವರನ್ನು ಬಂಧಿಸಿರುವ ಘಟನೆ ಬಾಂಗ್ಲಾದೇಶದ ಮುರಾದ್ ನಗರ ಉಪಜಿಲ್ಲಾದಲ್ಲಿ ನಡೆದಿದೆ.

ಜೂನ್ 26 ರಂದು ಈ ಘಟನೆ ನಡೆದಿದ್ದು, ರಾಮಚಂದ್ರಾಪುರ ಪಚ್ಕಿಟ್ಟಾ ಗ್ರಾಮದ 38 ವರ್ಷದ ಫಜೋರ್ ಅಲಿ ಎಂಬಾತ ಸಂತ್ರಸ್ತೆಯ ತಂದೆಯ ಮನೆಗೆ ನುಗ್ಗಿ ಈ ಕೃತ್ಯವೆಸಗಿರುವುದಾಗಿ ವರದಿ ತಿಳಿಸಿದೆ.

ಫಜೋರ್ ಅಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‍ಪಿ) ನಾಯಕನಾಗಿದ್ದಾನೆ. ಸಂತ್ರಸ್ತೆಯ ಪತಿ ವಿದೇಶದಲ್ಲಿ ನೆಲೆಸಿದ್ದಾರೆ. ಹರಿಸೇವಾ ಹಬ್ಬದ ಪ್ರಯುಕ್ತ ಸಂತ್ರಸ್ತೆ ಮಕ್ಕಳೊಂದಿಗೆ ತಂದೆ ಜತೆ ಇದ್ದಳು. ಈ ವೇಳೆ ರಾತ್ರಿ 10 ಗಂಟೆಯ ವೇಳೆ ಫಜೋರ್ ಅಲಿ ಮನೆಗೆ ನುಗ್ಗಿದ್ದಾನೆ. ಬಲವಂತವಾಗಿ ಮನೆಯೊಳಗೆ ನುಗ್ಗಿ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಅಲಿಯನ್ನು ಹಿಡಿದು ಥಳಿಸಿದ್ದಾರೆ ಆದರೆ ಅವನು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.

ಘಟನೆ ಸಂಬಂಧ ಸಂತ್ರಸ್ತೆ ಜೂನ್ 27 ರಂದು ಸಂತ್ರಸ್ತೆ ಲಿಖಿತ ದೂರು ನೀಡಿದ್ದಾಳೆ. ಮುರಾದ್‍ನಗರ ಪೆÇಲೀಸರು ಭಾನುವಾರ (ಜೂ.29) ಮುಂಜಾನೆ 5 ಗಂಟೆಯ ವೇಳೆಗೆ ಫಜೋರ್ ಅಲಿಯನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿಯ ಜತೆ ಕೃತ್ಯದ ವಿಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಎಂಡಿ ಸುಮನ್, ರಂಜಾನ್ ಅಲಿ, ಎಂಡಿ ಆರಿಫ್ ಮತ್ತು ಎಂಡಿ ಅನಿಕ್ ಎಂಬುವವರನ್ನು ಬಂಧಿಸಲಾಗಿದೆ.

ಸದ್ಯ ಬಾಂಗ್ಲಾದಲ್ಲಿ ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಯುವತಿಯ ಮೇಲೆ ಮುಸ್ಲಿಂ ಯುವಕ ಅತ್ಯಾಚಾ*ರವೆಸಗಿರುವುದು ರಾಜಕೀಯ ಪ್ರತಿಭಟನೆಗೆ ಕಾರಣವಾಗಿದೆ.