
(ಸಂಜೆವಾಣಿ ವಾರ್ತೆ )
ಬಳ್ಳಾರಿ, ಜೂ.8; ಉತ್ತರ ಪ್ರದೇಶದ ನೋಯ್ಡದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಮೇಯರ್ ಗಳ ‘ ಸಮ್ಮೇಳನದಲ್ಲಿ ಇಲ್ಲಿನ ಪಾಲಿಕೆಯ ಮೇಯರ್ ಪಿ.ಗಾದೆಪ್ಪ ಪಾಲ್ಗೊಂಡಿದ್ದರು.
ಸಮ್ಮೇಳನದಲ್ಲಿ ನಡೆದ ವಾಯು ಮಾಲಿನ್ಯ ತಡೆಗಟ್ಟುವ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಗಾದೆಪ್ಪ ವಾಯು ಮಾಲಿನ್ಯದ ಕುರಿತು ಮಾತನಾಡಿದರು.
ಈ ವೇಳೆ ಉತ್ತರ ಪ್ರದೇಶದ ಮಂತ್ರಿ ಡಾ. ಸೋಮೆಂದ್ರ ತೋಮರ್, ಯಮುನಾ ನಗರದ ಮೇಯರ್ ಸುಮನ್ ಬಹ್ಮನಿ, ದೆಹಲಿ ಮೇಯರ್ ಪ್ರವೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಸಮ್ಮೇಳನದಲ್ಲಿ ವಾಯು ಮಾಲಿನ್ಯದ ಕುರಿತ ಸಲಹೆ ಸೂಚನೆಗಳನ್ನು ನೀಡಿ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಯ್ತು
ಬಳ್ಳಾರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಖಾನೆಗಳು ಹೆಚ್ಚಾಗಿರುವುದರಿಂದ ವಾಯು ಮಾಲಿನ್ಯದಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದು.
ಬಳ್ಳಾರಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಾಯು ಮಾಲಿನ್ಯವು ಹೆಚ್ಚಿದ್ದು ಇದರ ಬಗ್ಗೆ ವಿಚಾರ ಸಂಕಿರಣದಲ್ಲಿ ಚರ್ಚಿಸಿದ್ದು.
ಮುಂದಿನ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಇದೇ ರೀತಿಯ ವಿಚಾರ ಸಂಕೀರ್ಣವನ್ನು ನಡೆಸಲು ಸಭೆಯು ಅಂಗೀಕರಿಸಿ ಹಾಗೂ ಈ ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳು ಕೆಲವು ವಾಯು ಮಾಲಿನ್ಯದ ಬಗ್ಗೆ ಚರ್ಚಿಸಿ ಕೆಲವು ವಿಷಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ತೀರ್ಮಾನಿಸಿತು ಎಂದು ಗಾದೆಪ್ಪ ಹೇಳಿದ್ದಾರೆ.





























