ಅಕ್ಷಯ ಪಾತ್ರ ಫೌಂಡೇಶನ್‍ನಿಂದ ಮ್ಯೂಸಿಕ್ ಫಾರ್ ಮೀಲ್ಸ್ ಸಂಗೀತ ಕಾರ್ಯಕ್ರಮ

ಬೆಂಗಳೂರು.ಜೂ13: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುವ ಮಹೋನ್ನತ ಕಾರ್ಯ ಮಾಡುತ್ತಿರುವ ಅಕ್ಷಯ ಪಾತ್ರ ಫೌಂಡೇಶನ್ ಇದೀಗ ತನ್ನ ಉದ್ದೇಶದ ಭಾಗವಾಗಿ ದಿವ್ಯಶ್ರೀ ಡೆವಲಪರ್ಸ್ ಜೊತೆಗಿನ ಸಹ- ಪ್ರಾಯೋಜಕತ್ವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಫ್ಯೂಷನ್ ಬ್ಯಾಂಡ್ ಆಗಿರುವ ಅಗಮ್ ಬ್ಯಾಂಡ್ ನೇತೃತ್ವದಲ್ಲಿ “ಮ್ಯೂಸಿಕ್ ಫಾರ್ ಮೀಲ್ಸ್” ಎಂಬ ಎರಡು ದಿನಗಳ ಚಾರಿಟಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಬಹುನಿರೀಕ್ಷಿತ ಕಾರ್ಯಕ್ರಮವು ಜೂನ್ 14ರಂದು ವೈಟ್‍ಫೀಲ್ಡ್ ನ ಎಂಎಲ್‍ಆರ್ ಕನ್ವೆನ್ಷನ್ ಸೆಂಟರ್ ನಲ್ಲಿ ಮತ್ತು ಜೂನ್ 15ರಂದು ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆಟ್ರ್ಸ್ ನಲ್ಲಿ ನಡೆಯಲಿದೆ.


ಅಗಮ್ ನ ಹೊಸ ಆಲ್ಬಂ “ಅರೈವಲ್ ಆಫ್ ದಿ ಎಥರ್ನಲ್” ನ ಬಿಡುಗಡೆ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿದ್ದು, ವಿಶೇಷವೆಂದರೆ ಎರಡೂ ಸಂಗೀತ ಪ್ರದರ್ಶನಗಳು ಈಗಾಗಲೇ ಭರ್ತಿಯಾಗಿವೆ.
ಈ ಕುರಿತು ಸಂತೋಷ ವ್ಯಕ್ತ ಪಡಿಸಿರುವ ಅಕ್ಷಯ ಪಾತ್ರ ಫೌಂಡೇಶನ್ ನ ಸಿಇಓ ಶ್ರೀಧರ್ ವೆಂಕಟ್ ಅವರು, ಸಂಗೀತಕ್ಕೆ ಒಗ್ಗೂಡಿಸುವ ಮತ್ತು ಪ್ರೇರೇಪಿಸುವ ಶಕ್ತಿ ಇದೆ. ಈ ಮ್ಯೂಸಿಕ್ ಫಾರ್ ಮೀಲ್ಸ್ ಎಂಬ ಕಾರ್ಯಕ್ರಮದ ಮೂಲಕ ನಾವು ಕೇವಲ ಮ್ಯೂಸಿಕ್ ಕಾರ್ಯಕ್ರಮ ಮಾತ್ರವೇ ಆಯೋಜಿಸುತ್ತಿಲ್ಲ, ಬದಲಾಗಿ ನಾವು ಕಲೆ ಮತ್ತು ಅದು ಉಂಟು ಮಾಡಬಲ್ಲ ಉತ್ತಮ ಪರಿಣಾಮದ ನಡುವೆ ಸೇತುವೆ ನಿರ್ಮಿಸುತ್ತಿದ್ದೇವೆ. ಮ್ಯೂಸಿಕ್ ಫಾರ್ ಮೀಲ್ಸ್ ಎಂಬ ಕಾರ್ಯಕ್ರಮ ಆಯೋಜನೆಗೆ ನೆರವಾದ ಬೆಂಗಳೂರಿನ ಜನರು ಮತ್ತು ನಮ್ಮ ಪಾಲುದಾರರಿಗೆ ನಾವು ಕೃತಜ್ಞತೆ ಸಲ್ಲಿಸುತ್ತಿದ್ದೇವೆ” ಎಂದರು.


ಈ ಕಾರ್ಯಕ್ರಮದ ಟಿಕೆಟ್ ನಿಂದ ದೊರೆಯುವ ಹಣವನ್ನು ಶಾಲಾ ಮಕ್ಕಳ ಊಟಕ್ಕಾಗಿ ಬಳಸಲಾಗುತ್ತದೆ. ಆ ಮೂಲಕ ಅವರ ಶೈಕ್ಷಣಿಕ ಮತ್ತು ಬದುಕಿನ ಅಭಿವೃದ್ಧಿಗೆ ಕೊಡುಗೆ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ದಿವ್ಯಶ್ರೀ ಡೆವಲಪರ್ಸ್ ಸಹ-ಪ್ರಾಯೋಜಕರಾಗಿದ್ದು, ಪಾಕಶಾಲ ಸಂಸ್ಥೆಯು ಅಡುಗೆ ಪ್ರಾವೀಣ್ಯತಾ ಪಾಲುದಾರರಾಗಿರಲಿದ. ಕಲ್ಯಾಣ್ ಜ್ಯುವೆಲ್ಲರ್ಸ್ ಅಸೋಸಿಯೇಟ್ ಪ್ರಾಯೋಜಕರಾಗಿ, ಪೆÇೀರ್ಟರ್ ಲಾಜಿಸ್ಟಿಕ್ಸ್ ಪಾಲುದಾರರಾಗಿ ಮತ್ತು ರೇಡಿಯೋ ಸಿಟಿ 91.1 ಎಫ್‍ಎಂ ರೇಡಿಯೋ ಪಾಲುದಾರರಾಗಿರಲಿದೆ.