ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡವನ್ನು ವಶಕ್ಕೆ: ಅಬಕಾರಿ ಇನ್ಸ್ ಪೆಕ್ಟರ್ ವೈ.ಎಸ್.ಲೋಕೇಶ್

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಸೆ.02:-
ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡವನ್ನು ಖಚಿತ ಮಾಹಿತಿ ಆದರಿಸಿ ಅಬಕಾರಿ ಇನ್ಸ್ ಪೆಕ್ಟರ್ ವೈ.ಎಸ್.ಲೋಕೇಶ್ ಮತ್ತು ತಂಡ ಶೋಧನೆ ಮಾಡಿ ವಶಪಡಿಸಿ ಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.


ಪಟ್ಟಣದ ಹೊರವಲಯಕ್ಕೆ ಮಧುವನಹಳ್ಳಿ ಮತ್ತು ಮುಸ್ಲಿಂ ಬ್ಲಾಂಕ್ ಹೊಂದಿಕೊಂಡಂತೆ ಇರುವ ಜಮೀನಿನಲ್ಲಿ ಆಕ್ರಮವಾಗಿ ಅಂದಾಜು ಅರ್ಧ ಕೆ.ಜಿ.ಯಷ್ಟು ಬೆಳದಿರುವ ಒಂದು ಗಾಂಜಾಗಿಡವಾಗಿದ್ದು ಈಗಾಗಲೇ ಹೂ.ಮತ್ತು ತೆನೆ ಬಂದಿದ್ದು 5.2 ಎತ್ತರ ಬೆಳದಿದ್ದು ಖಚಿತ ಮಾಹಿತಿಯೊಂದಿಗೆ ಗಾಂಜಾ ಬೆಳದಿರುವ ಸ್ಥಳಕ್ಕೆ ಅಬಕಾರಿ ಇನ್ಸ್ ಪೆಕ್ಟರ್ ವೈ.ಎಸ್.ಲೋಕೇಶ್ ತಂಡ ಬೇಟಿ ನೀಡಿ ಪರಿಶೀಲಿಸಿ ವಶ ಪಡಿಸಿ ಕೊಂಡು ಸ್ಥಳೀಯರಿಂದ ಪಂಚನಾಮೆ ನಡೆಸಲಾಗಿದೆ.


ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿರುವ ಅಬಕಾರಿ ಅಧಿಕಾರಿಗಳು ಪಟ್ಟಣದ ವ್ಯಾಪ್ತಿಯಲ್ಲಿ ಗಾಂಜಾ ಗಿಡಿಗಳನ್ನು ಸರ್ಕಾರಿ ಜಮೀನಿನಲ್ಲಿ ಒಂದೊಂದೇ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿ ವಶ ಪಡಿಸಿ ಕೊಳ್ಳುತ್ತಿರುವ ಬಗ್ಗೆ ಪಟ್ಟಣದ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಗಾಂಜಾ ಗಿಡ ಶೋಧನಾ ಕಾರ್ಯದಲ್ಲಿ ಸಿಬ್ಬಂದಿಗಳಾದ ಕೆ.ಪಿ.ಶಿವಕುಮಾರ್, ಶಿವಪ್ಪಬಾನುಸಿ, ಗೋಪಾಲಕೃಷ್ಣ ಹಾಗೂ ಮಹಜರ್ ದಾರರು ಇದ್ದರು.