ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.22: ಅಂಗನವಾಡಿಯಲ್ಲಿ ಎಫ್.ಆರ್.ಎಸ್ ಆಧಾರಿತ ಪದ್ಧತಿ ಬೇಡವೇಬೇಡ, ಈ ನೆಪದಲ್ಲಿ ಫಲಾನುಭವಿಗಳ ಕೈಬಿಡುವ ಕ್ರಮ ನಿಲ್ಲಬೇಕಿದೆ ಎಂದು ಆಗ್ರಹಿಸಿ ಪ್ರತಿಭಟಿಸಲಾಯಿತು. …
ಅಂಗನವಾಡಿ ನೌಕರರಿಗೆ ಕಿರುಕುಳ ನೀಡಬಾರದು.
ಐವತ್ತು ವರ್ಷ ಪೂರೈಸಿದ ಐಸಿಡಿಎಸ್ ನ್ನು ಖಾಯಂಮಾಡಿ. ಅಂಗನವಾಡಿ ನೌಕರರಿಗೆ ವೇತನ ಮತ್ತು ಪಿಂಚಣಿ ನೀಡಲೇಬೇಕು.
ಎಂದು ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಫೆಡರೇಶನ್ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ರಿ) ಸಿಐಟಿಯು ಸಂಯೋಜಿತ ರಾಜ್ಯ ಸಮಿತಿಗಳು ಹೋರಾಟದ ನೇತೃತ್ವದಲ್ಲಿ ಕಪ್ಪು ದಿನಾಚರಣೆ ನಡೆಸಲಾಯಿತು.ಬಳ್ಳಾರಿ ತಾಲ್ಲೂಕು ನಲ್ಲಿ ಸಿಡಿಪಿಓ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮತ್ತು ಕೇಂದ್ರ ರಾಜ್ಯ ಮನವಿ ಸಲ್ಲಿಸಿ ರಿಜಿಸ್ಟರ್ ಪೋಸ್ಟ್ ಕಳಿಸಲಾಯಿತು.ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಕಾಂ.ಕಿರಣ್ ಕುಮಾರಿ, ಕಾರ್ಯದರ್ಶಿಯಾದ ಟಿ.ಈರಮ್ಮ , ಜಿಲ್ಲಾ ಉಪಾಧ್ಯಕ್ಷರಾದ ಕಾಂ.ಗೀತಾ, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕಾಂ.ಸತ್ಯಬಾಬು ಮತ್ತು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿಗಳು ಹಾಗೂ ಸಿಪಿಐಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿಗಳಾದ ಚಂದ್ರ ಕುಮಾರಿ ಹಾಗೂ ಇನ್ನಿತರ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

























