ಸಿನಿಮಿಯ ರೀತಿ ಶಪಥ ಮಾಡಿದ ಶಶಿಕಲಾ

ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶರಣಾಗಲು ಚೆನ್ನೈನಿಂದ ಹೊರಡುವ ಮೊದಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಜಯಲಲಿತಾ ಅವರ ಸಮಾಧಿ ಬಳಿಗೆ ಆಗಮಿಸಿ ಪುಷ್ಪ ನಮನ ಸಲ್ಲಿಸಿದ ಬಳಿಕ ಸಮಾಧಿ ಮುಂದೆ ಸಿನಿಮಿಯ ರೀತಿಯಲ್ಲಿ ಶಪಥ ಮಾಡಿದರು.
ಅಪಾರ ಬೆಂಬಲಿಗರೊಂದಿಗೆ ಇಂದು ಚೆನ್ನೈನ ಮರೀನ್‌ಬೀಚ್‌ನಲ್ಲಿರುವ ಜಯಲಲಿತಾ ಸಮಾಧಿಗೆ ಆಗಮಿಸಿದ ಶಶಿಕಲಾ ಅವರು ಮೂರು ಬಾರಿ ಸಮಾಧಿಗೆ ಬಲಗೈನಿಂದ ಜೋರಾಗಿ ತಟ್ಟುತ್ತ ಶಪಥ ಮಾಡಿದರು.

Leave a Comment