ರಣರಂಗವಾದ ಸದನ : ಪಳನಿ ವಿಶ್ವಾಸ ಮತಕ್ಕೆ ಅಡ್ಡಿ, ಡಿಎಂಕೆ ಸದಸ್ಯರ ಉಚ್ಛಾಟನೆ

ತಮಿಳುನಾಡು ನೂತನ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿಧಾನಸಭೆಯಲ್ಲಿಂದು ವಿಶ್ವಾಸ ಮತ ನಿರ್ಣಯ ಮಂಡಿಸಿದ ಸಂದರ್ಭದಲ್ಲಿ ಪ್ರತಿಪಕ್ಷ ‌ಡಿಎಂಕೆ ಸದಸ್ಯರು ಸಭಾಧ್ಯಕ್ಷ ಧನಪಾಲ್ ಅವರಿಗೆ ಮುತ್ತಿಗೆ ಹಾಕಿ  ಅವರಿದ್ದ ಪೀಠವನ್ನು ಜಖಂಗೊಳಿಸಿ ಮೈಕ್ ಕಿತ್ತೆಸೆದಾಗ ಉಂಟಾದ ಹಿಂಸಾಚಾರ, ಕೋಲಾಹಲ ವಾತಾವರಣದ ನಡುವೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದ ಅಪರೂಪದ ಪ್ರಸಂಗ ನಡೆಯಿತು.

Leave a Comment