ಬಿಬಿಎಂಪಿ ಸದಸ್ಯ ನಾರಾಯಣಸ್ವಾಮಿಯಿಂದ ಕಛೇರಿ ಧ್ವಂಸ ಬೆದರಿಕೆ

ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜು ಅವರ ಬಲಗೈ ಬಂಟ ಕೆ.ಆರ್. ಪುರಂನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ನಾರಾಯಣಸ್ವಾಮಿ ಫೆ. 16 ರಂದು ಹೊರಮಾವು ಬಿಬಿಎಂಪಿ ಕಚೇರಿಗೆ ತೆರಳಿ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪ ಅವರಿಗೆ ಖಾತೆ ಮಾಡಿಕೊಡುವಂತೆ ಧಮ್ಕಿ ಹಾಕಿರುವುದಲ್ಲದೆ, ಕಚೇರಿಯಲ್ಲಿ ಪೆಟ್ರೋಲ್ ಎರಚಿ, ಬೆಂಕಿ ಹಚ್ಚುವುದಾಗಿ ಆರ್ಭಟಿಸಿರುವುದು ಕಚೇರಿ ಸಿಬ್ಬಂದಿಯನ್ನು ಕೆಲಕಾಲ ಆತಂಕಕ್ಕೆ ಗುರಿಮಾಡಿತು.

Leave a Comment