sಸಿಬಿಐ ಪ್ರಕರಣ; ಸಂವಿಧಾನ ಹಿತಾಸಕ್ತಿ ಆಧರಿಸಿ ಕ್ರಮ- ಸುಪ್ರೀಂ

ನವದೆಹಲಿ, ಡಿ, ೬-ಯಾವುದೇ ಸಂವಿಧಾನಾತ್ಮಕ ಸಂಸ್ಥೆಯ ಹಿತಾಸಕ್ತಿಯಿಂದ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ರಜೆಯ ಮೇಲೆ ಕಳುಹಿಸಿತ್ತು. ಕ್ರಮವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪೀಠದ ಮುಂದೆ ಇಂದು ನಡೆಯಿತು.
ಅಟಾರ್ನಿ ಜನರಲ್ ವೇಣುಗೋಪಾಲ್, ಜುಲೈ ತಿಂಗಳಿನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದರು.
ಕೇಂದ್ರ ವಿಚಕ್ಷಣಾ ಆಯೋಗದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಬಿಐ ಆಡಳಿತದ ಕಾನೂನು ಹಾಗೂ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದರು.
ಸಿಬಿಐ ನಿರ್ದೇಶಕ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ತನಾ ನಡುವೆ ನಡೆದ ಜಗಳ ರಾತ್ರೋರಾತ್ರಿ ನಡೆದಿಲ್ಲ. ಈ ಕಾದಾಟಕ್ಕೆ ಸುದೀರ್ಘ ಇತಿಹಾಸವೂ ಇದ್ದಿರಬಹದು. ಅದರೆ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸುವ ಮುನ್ನ ಆಯ್ಕೆ ಸಮಿತಿ ಜತೆ ಚರ್ಚೆ ನಡೆಸಬೇಕಾಗಿತ್ತು ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಪ್ರಶ್ನಿಸಿತ್ತು.
ಸಿಬಿಐ ಮತ್ತು ಸಿಬಿಐ ಬೆಕ್ಕುಗಳ ಕಚ್ಚಾಟದಲ್ಲಿ ದೇಶದ ಅತ್ಯುನ್ನತ ಸಂಸ್ಥೆ ಸಿಬಿಐನ ಘನತೆ, ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಸುಪ್ರೀಂಕೋರ್ಟಿಗೆ ಸರ್ಕಾರ ಹೇಳುವ ಮೂಲಕ ಅಲೋಕ್ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಸಿಬಿಐನಲ್ಲಿ ಇಬ್ಬರು ಅಧಿಕಾರಿಗಳ ನಡುವೆ ಕಚ್ಚಾಟ ತಾರಕಕ್ಕೇರಿದ ಬೆನ್ನಲ್ಲೇ, ಸರ್ಕಾರ ತಕ್ಷಣ ಮಧ್ಯೆ ಪ್ರವೇಶಿಸಿ ಇಬ್ಬರು ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಿ ಸಿಬಿಐ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆ ಮರುಕಳುಸುವಂತೆ ಮಾಡಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದರು.

Leave a Comment