IMA ಬಹುಕೋಟಿ ವಂಚನೆ ಪ್ರಕರಣ : ಸಿಬಿಐನಿಂದ 15 ಕಡೆ ಏಕಕಾಲಕ್ಕೆ ದಾಳಿ

 

ಬೆಂಗಳೂರು.ನ.8. ರಾಜ್ಯದಲ್ಲಿ ಬಹುದೊಡ್ಡ ಹಗರಣವೆಂದೇ ಕರೆಯಲಾಗುತ್ತಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ರಾಜ್ಯದ ವಿವಿದೆಢೆಯಲ್ಲಿ ಏಕಕಾಲಕ್ಕೆ 15 ಕಡೆಯಲ್ಲಿ ದಾಳಿ ನಡೆಸಿದ್ದಾರೆ. ಈ ಮೂಲಕ ಮಹತ್ವದ ದಾಖಲೆಗಳನ್ನು ಕಲೆ ಹಾಕುವಲ್ಲಿ ತೊಡಗಿದ್ದಾರೆ.

ಐಎಂಎ ಪ್ರಕರಣವನ್ನು ಎಸಿಬಿಯಿಂದ ಸಿಬಿಐ ತನಿಖೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಳೆದ ಹಲವು ದಿನಗಳ ಹಿಂದೆ ವಹಿಸಿದ್ದರು. ಇಂತಹ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಬಿಐ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ಪ್ರಕರಣ ಸಂಬಂಧ ಕಲೆ ಹಾಕುವಲ್ಲಿ ತೊಡಗಿದ್ದರು.

ಇದೀಗ ತಮ್ಮ ತನಿಖೆಗೆ ಚುರುಕು ಮುಟ್ಟಿಸಿದ್ದು, ರಾಜ್ಯದ ರಾಮನಗರ, ಬೆಂಗಳೂರು, ಮಂಡ್ಯ ಮತ್ತು ಬೆಳಗಾವಿ ಸೇರಿದಂತೆ ವಿವಿಧ 15 ಕಡೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಮಹತ್ವದ ದಾಖಲೆಗಳ ಸಂಗ್ರಹದಲ್ಲಿ ನಿರತವಾಗಿದೆ. ಅಲ್ಲದೇ ಇಬ್ಬರು ಐಪಿಎಸ್ ಅಧಿಕಾರಿಗಳ ಮೇಲೂ ದಾಳಿ ನಡೆಸಿದೆ.

Leave a Comment