ರೈತನ ಶಂಕಾಸ್ಪದ ಸಾವು
Permalink

ರೈತನ ಶಂಕಾಸ್ಪದ ಸಾವು

ಬೆಂಗಳೂರು, ಆ. ೨೦-ತೋಟದ ಮನೆಯಲ್ಲಿ ಮಲಗಿದ್ದ ರೈತರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚೆನ್ನಪಟ್ಟಣದ ಬ್ರಹ್ಮಣೀಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಬ್ರಹ್ಮಣೀಪುರದ ಪುಟ್ಟಸ್ವಾಮಿ(೪೦) ಮೃತ ರೈತರಾಗಿದ್ದಾರೆ.ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಪುಟ್ಟಸ್ವಾಮಿ ಅವರು ಬೆಳಿಗ್ಗೆ ಮೃತದೇಹವಾಗಿ…

Continue Reading →

ಕೆರೆ ಸಂರಕ್ಷಣೆಗೆ ಪ್ರತಿಭಟನೆ
Permalink

ಕೆರೆ ಸಂರಕ್ಷಣೆಗೆ ಪ್ರತಿಭಟನೆ

ಬೆಂಗಳೂರು, ಆ.೨೦- ಕಾರ್ಖಾನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಯಲಹಂಕದಪುಟ್ಟೇನಹಳ್ಳಿ ಕೆರೆಗೆ ಹರಿದುಬರುತ್ತಿರುವ ತ್ಯಾಜ್ಯ ನೀರನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಟ್ರಸ್ಟ್ ಆಶ್ರಯದಲ್ಲಿ ಸ್ಥಳೀಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಐಟಿಸಿ ಕಾರ್ಖಾನೆಯ ಕಾರ್ಮಿಕರು ಇಂದು ಪ್ರತಿಭಟನೆ…

Continue Reading →

ಕುರ್‌ಕುರೆ ಆಮಿಷ ಬಾಲಕಿಯ ಮೇಲೆ ಅತ್ಯಾಚಾರ
Permalink

ಕುರ್‌ಕುರೆ ಆಮಿಷ ಬಾಲಕಿಯ ಮೇಲೆ ಅತ್ಯಾಚಾರ

ಬೆಂಗಳೂರು, ಆ. ೧೯- ಮನೆಯ ಬಳಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯನ್ನು ಕುರ್‌ಕುರೆ ಕೊಡಿಸುವುದಾಗಿ ಕರೆದೊಯ್ದ ಯುವಕನೊಬ್ಬ ಅತ್ಯಾಚಾರವೆಸಗಿರುವ ಹೀನಕೃತ್ಯ ಅಮೃತಹಳ್ಳಿಯಲ್ಲಿ ನಡೆದಿದೆ. ಕೃತ್ಯವೆಸಗಿದ ಆರೋಪಿ ಅಮೃತಹಳ್ಳಿಯ ಶ್ರೀರಾಮಪುರದ  ನವೀನ್ (21)ನನ್ನು ಪೊಲೀಸರು ಬಂಧಿಸಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ…

Continue Reading →

ಕೇರಳಕ್ಕೆ ಬಸ್ ಸಂಚಾರ ಆರಂಭ
Permalink

ಕೇರಳಕ್ಕೆ ಬಸ್ ಸಂಚಾರ ಆರಂಭ

ಬೆಂಗಳೂರು,ಆ.೧೯-ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ( ಕೆಎಸ್‌ಆರ್‌ಟಿಸಿ)ತನ್ನ ಬಸ್ ಸೇವೆಗಳನ್ನು ಪುನಾರಂಭಿಸಿದೆ. ಇಂದು ಸಂಜೆ ೪ ಗಂಟೆಯಿಂದಲೇ ಕೆಎಸ್ ಆರ್ ಟಿಸಿ ಕೇರಳಕ್ಕೆ ತನ್ನ ಬಸ್ ಸಂಚಾರವನ್ನು ಆರಂಭಿಸಲಿದೆ. ಇಂದು ಸಂಜೆ…

Continue Reading →

ಎಕ್ಸ್ ರೇ ಕೇಂದ್ರದಲ್ಲಿ  ಮಹಿಳೆಯ ವಜ್ರಾಭರಣ ಕಳವು
Permalink

ಎಕ್ಸ್ ರೇ ಕೇಂದ್ರದಲ್ಲಿ ಮಹಿಳೆಯ ವಜ್ರಾಭರಣ ಕಳವು

ಬೆಂಗಳೂರು,ಆ.೧೯-ಮಣಿಪಾಲ್ ಆಸ್ಪತ್ರೆಯ ಎಕ್ಸ್ ರೇ ವಿಭಾಗದಲ್ಲಿ ವಜ್ರಾಭರಣಗಳನ್ನು ಕಳವು ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಮಹದೇವಪುರ ಪೊಳೀಸರಿಗೆ ದೂರು ನೀಡಿದ್ದಾರೆ. ಬೆನ್ನು ನೋವು ಚಿಕಿತ್ಸೆಗೆಂದು ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದ ವೈಟ್‌ಫೀಲ್ಡ್‌ನ ಐಟಿಪಿಎಲ್ ರಸ್ತೆಯಲ್ಲಿರುವ ಅಪ್‌ಸ್ಕೇಲ್ ಅಪಾರ್ಟ್‌ಮೆಂಟಿನ ನಿವಾಸಿ ದೀಪ್ತಿ ದಾಸ್,…

Continue Reading →

ಸಂತ್ರಸ್ತರ ನೆರವಿಗೆ ಬಿಜೆಪಿ
Permalink

ಸಂತ್ರಸ್ತರ ನೆರವಿಗೆ ಬಿಜೆಪಿ

ಬೆಂಗಳೂರು, ಆ. ೧೯- ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬಿಜೆಪಿ ನೆರವಿಗೆ ಧಾವಿಸಿದೆ. ಕೊಡಗು ಜನರಿಗೆ ಪಕ್ಷದ ವತಿಯಿಂದ ಹೇಗೆ ನೆರವು ನೀಡಬೇಕು ಎನ್ನುವ ಕುರಿತು ಬಿಜೆಪಿ ಕಚೇರಿಯಲ್ಲಿ ನಡೆದ ಹಿರಿಯ…

Continue Reading →

ವಿವಾಹಕ್ಕೆ ಒಪ್ಪದ ಪ್ರಿಯಕರ ಕಬ್ಬನ್‌ಪಾರ್ಕ್‌ನಲ್ಲಿ ಪ್ರೇಯಸಿ ನೇಣು
Permalink

ವಿವಾಹಕ್ಕೆ ಒಪ್ಪದ ಪ್ರಿಯಕರ ಕಬ್ಬನ್‌ಪಾರ್ಕ್‌ನಲ್ಲಿ ಪ್ರೇಯಸಿ ನೇಣು

ಬೆಂಗಳೂರು,ಆ.೧೯-ಪ್ರೀತಿಸಿದ ಹುಡುಗ ವಿವಾಹವಾಗಲು ನಿರಾಕರಿಸಿದ್ದರಿಂದ ನೊಂದ ನೇಪಾಳಿ ಮೂಲದ ಯುವತಿ ಕಬ್ಬನ್ ಪಾರ್ಕ್‌ನ ಮರವೊಂದಕ್ಕೆ ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಸೋಜಾ ಲೇಔಟ್‌ನ ಸಂತೋಷಿ(೨೧)ಆತ್ಮಹತ್ಯೆ ಮಾಡಿಕೊಂಡವರು,ವಿಠ್ಠಲ್ ಮಲ್ಯ ರಸ್ತೆಯ ಲೈಮ್‌ಲೈಟ್ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷಿ…

Continue Reading →

ಕೊಡಗು ನೆರೆ: ಮಾಹಿತಿ ಪಡೆದ ರಾಷ್ಟ್ರಪತಿ
Permalink

ಕೊಡಗು ನೆರೆ: ಮಾಹಿತಿ ಪಡೆದ ರಾಷ್ಟ್ರಪತಿ

ಬೆಂಗಳೂರು, ಆ. ೧೯- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಕೊಡಗು ಜಿಲ್ಲೆಯ ಮಳೆ ಹಾನಿ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ ರಾಷ್ಟ್ರಪತಿಗಳು, ಕೊಡಗಿನಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ…

Continue Reading →

ಪ್ರಶಸ್ತಿ ಹಣವನ್ನು ಸಂತ್ರಸ್ತರಿಗೆ ದಾನ ನೀಡಿದ ಹಂಸಲೇಖ
Permalink

ಪ್ರಶಸ್ತಿ ಹಣವನ್ನು ಸಂತ್ರಸ್ತರಿಗೆ ದಾನ ನೀಡಿದ ಹಂಸಲೇಖ

ಬೆಂಗಳೂರು, ಆ.೧೯- ಕೊಡಗು ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನಾದ ಬ್ರಹ್ಮ ಡಾ.ಹಂಸಲೇಖ ತಮ್ಮ ಪ್ರಶಸ್ತಿಯ ನಗದು ಮೊತ್ತವನ್ನು ಘೋಷಿಸಿ ಮಾದರಿಯಾಗಿದ್ದಾರೆ. ನಗರದಲ್ಲಿಂದು ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಡಾ.ವೇಮಗಲ್ ನಾರಾಯಣ ಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ…

Continue Reading →

3.65 ಕೋಟಿ ಲಾಭ ಗಳಿಸಿದ ಸುಧಾ ಕೋ ಆಪರೇಟಿವ್ ಬ್ಯಾಂಕ್
Permalink

3.65 ಕೋಟಿ ಲಾಭ ಗಳಿಸಿದ ಸುಧಾ ಕೋ ಆಪರೇಟಿವ್ ಬ್ಯಾಂಕ್

ಬೆಂಗಳೂರು, ಆ.೧೯- 1976 ರಲ್ಲಿ ಆರಂಭವಾದ ಶ್ರೀ ಸುಧಾ ಕೋ ಆಪರೇಟಿವ್ ಬ್ಯಾಂಕ್ ನ ದುಡಿಯುವ ಬಂಡವಾಳ 309.63 ಕೋಟಿ ತಲುಪಿದ್ದು, ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ 3.65 ಕೋಟಿ ನಿವ್ವಳ ಲಾಭಗಳಿಸಿರುವುದಾಗಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ತಿಮ್ಮೇ…

Continue Reading →