ಕೊರೋನಾ ಶಂಕಿತ ಗರ್ಭಿಣಿಯರಿಗೆ ವಿಲ್ಸನ್ ಗಾರ್ಡನ್ ಆಸ್ಪತ್ರೆ ನಿಗದಿ; ಬಿಬಿಎಂಪಿ ಆದೇಶ
Permalink

ಕೊರೋನಾ ಶಂಕಿತ ಗರ್ಭಿಣಿಯರಿಗೆ ವಿಲ್ಸನ್ ಗಾರ್ಡನ್ ಆಸ್ಪತ್ರೆ ನಿಗದಿ; ಬಿಬಿಎಂಪಿ ಆದೇಶ

ಬೆಂಗಳೂರು, ಜು 9 -ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೋರೋನಾ ಶಂಕಿತ ಗರ್ಭಿಣಿಯರ ಪರೀಕ್ಷೆಗಾಗಿ ವಿಲ್ಸನ್ ಗಾರ್ಡನ್…

Continue Reading →

ಒತ್ತಡದ ಮಧ್ಯೆ ಮೂತ್ರ ವಿಸರ್ಜನೆ ಮರೆಯಬೇಡಿ….!
Permalink

ಒತ್ತಡದ ಮಧ್ಯೆ ಮೂತ್ರ ವಿಸರ್ಜನೆ ಮರೆಯಬೇಡಿ….!

ಆರೋಗ್ಯ ಕಾಪಾಡಿಕೊಳ್ಳವುದು ಈಗಿನ ದಿನಗಳಲ್ಲಿ ಅವಶ್ಯಕವಾಗಿದೆ. ಅನೇಕರು ಕೆಲಸದ ಕಾರಣ ಮೂತ್ರವನ್ನು ಸರಿಯಾದ ಸಮಯದಲ್ಲಿ ವಿಸರ್ಜನೆ ಮಾಡುವುದಿಲ್ಲ. ಮೂತ್ರ ಕಟ್ಟಿಕೊಳ್ಳುವುದ್ರಿಂದ…

Continue Reading →

ಕೋವಿಡ್-19 : ಗರ್ಭಿಣಿಯರಿಗೆ ಆತಂಕ ಬೇಡ
Permalink

ಕೋವಿಡ್-19 : ಗರ್ಭಿಣಿಯರಿಗೆ ಆತಂಕ ಬೇಡ

ಪ್ರಸ್ತುತ ಇರುವ ಸಾಂಕ್ರಾಮಿಕದ ಅವಧಿಯಲ್ಲಿ ಗರ್ಭಧಾರಣೆಯನ್ನು ನಿಭಾಯಿಸುವುದು ಅತ್ಯಂತ ಸವಾಲು ಮತ್ತು ಒತ್ತಡದ ಸಂಗತಿಯಾಗಿದೆ. ಕೊರೋನಾವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಗರ್ಭವತಿಯರಲ್ಲಿ…

Continue Reading →

ಕೋವಿಡ್-19 ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
Permalink

ಕೋವಿಡ್-19 ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಕೊರೊನಾವೈರಸ್ ಏಕಾಏಕಿ ಜನರಲ್ಲಿ ಆತಂಕಕಾರಿಯಾಗಿ ಕಾಡುತ್ತಿರುವ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದ್ದು,ಸಾಂಕ್ರಾಮಿಕ ರೋಗವು ಕಳೆದ ಕೆಲವು ವಾರಗಳಲ್ಲಿ ನಮ್ಮ ಜೀವನಶೈಲಿ, ವೃತ್ತಿ…

Continue Reading →

ಪ್ರಾಣಾಯಾಮದ ಅನುಕೂಲ
Permalink

ಪ್ರಾಣಾಯಾಮದ ಅನುಕೂಲ

ಅನುಲೋಮ-ವಿಲೋಮ ಪ್ರಾಣಾಯಾಮದ ಒಂದು ವಿಧಾನ. ಇದ್ರಲ್ಲಿ ವ್ಯಕ್ತಿ ತನ್ನ ಉಸಿರಾಟ ಕ್ರಿಯೆಗೆ ಹೆಚ್ಚಿನ ಗಮನ ನೀಡ್ತಾನೆ. ಇದು ಒತ್ತಡವನ್ನು ಕಡಿಮೆ…

Continue Reading →

ಕೊರೊನಾ- ಶಾಲೆ, ಆಟವಿಲ್ಲದೇ ಮಕ್ಕಳನ್ನು ಕಾಡುತ್ತಿದೆ ಮಾನಸಿಕಯಾತನೆ
Permalink

ಕೊರೊನಾ- ಶಾಲೆ, ಆಟವಿಲ್ಲದೇ ಮಕ್ಕಳನ್ನು ಕಾಡುತ್ತಿದೆ ಮಾನಸಿಕಯಾತನೆ

ಕೋವಿಡ್-೧೯ ಸೋಂಕಿನಿಂದ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಆದರೆ ಅದು ನಿಮ್ಮ ಕುಟುಂಬದ ಮಾನಸಿಕ ಆರೋಗ್ಯದ ಮೇಲೆ, ವಿಶೇಷವಾಗಿ…

Continue Reading →

ಹ್ಯಾಂಡ್ ಸ್ಯಾನಿಟೈಜರ್ ಬಳಕೆಗೆ ಇರಲಿ ಎಚ್ಚರ
Permalink

ಹ್ಯಾಂಡ್ ಸ್ಯಾನಿಟೈಜರ್ ಬಳಕೆಗೆ ಇರಲಿ ಎಚ್ಚರ

ಕೊರೊನಾ ವೈರಸ್ ಸೋಂಕನ್ನು ತಪ್ಪಿಸಲು ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಕೈ ತೊಳೆಯುವಂತೆ ಸಲಹೆ ಮಾಡಲಾಗುತ್ತದೆ. ಈಗ ಹ್ಯಾಂಡ್ ಸ್ಯಾನಿಟೈಜರ್ ಬಳಕೆ…

Continue Reading →

ಕಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು
Permalink

ಕಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು

ಕಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿದಿನ ತಿಂದ್ರೆ ವೈದ್ಯರಿಂದ ದೂರ ಇರಬಹುದು. ಹಸಿ ಕಡಲೆಯಾಗಿರಲಿ, ಬೇಯಿಸಿದ ಕಡಲೆಯಾಗಿರಲಿ ಇದು ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿರುವ ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ರಾತ್ರಿ ಕಡಲೆಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಜೇನು ತುಪ್ಪದೊಂದಿಗೆ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದಿಲ್ಲ. ಕಲ್ಲು ಬೆಳೆದಿದ್ದರೆ ತಕ್ಷಣ ಹೊರಕ್ಕೆ ಬರುತ್ತದೆ. ವಿಟಮಿನ್ ಎ, ಬಿ, ಸಿ, ಡಿ ಮತ್ತು ರಂಜಕ, ಪೊಟ್ಯಾಷಿಯಂ, ಮೆಗ್ನೀಸಿಯಮ್ ಮತ್ತು ಖನಿಜಗಳ ಮೂಲವಾಗಿರುವುದರಿಂದ ರಾತ್ರಿ ನೆನೆಸಿಟ್ಟ ಕಡಲೆಯನ್ನು ಬೆಳಿಗ್ಗೆ ಒಂದು ಮುಷ್ಠಿ ಖಾಲಿ ಹೊಟ್ಟೆಯಲ್ಲಿ ಸೇವನೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಹುರಿದ ಕಡಲೆಯ ಸೇವನೆ ಮಾಡುವುದರಿಂದ ಪದೇ ಪದೇ ಮೂತ್ರ ಬರುವುದು ಕಡಿಮೆಯಾಗುತ್ತದೆ. ಕಡಲೆ ಜೊತೆ ಬೆಲ್ಲ ಬೆರೆಸಿ ಸೇವನೆ ಮಾಡುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಕಡಿಮೆಯಾಗುತ್ತವೆ. ಕಡಲೆ ಹಿಟ್ಟಿನ ಪುಡಿಯನ್ನು ಅರಿಶಿನದ ಜೊತೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಹೊಳಪು ಪಡೆಯುತ್ತದೆ. ರಾತ್ರಿ ನೆನೆಸಿಟ್ಟ ಕಡಲೆಗೆ ಉಪ್ಪು, ಶುಂಠಿ, ಜೀರಿಗೆ ಬೆರೆಸಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.

Continue Reading →

ಕೊರೋನಾ ಮಹಾಮಾರಿಗೆ ಅರಿಶಿನ ಮನೆ-ಮದ್ದು!
Permalink

ಕೊರೋನಾ ಮಹಾಮಾರಿಗೆ ಅರಿಶಿನ ಮನೆ-ಮದ್ದು!

ಕೊರೋನಾವೈರಸ್ ಎಂಬ ಖಡ್ಗ ಇಡೀ ಪ್ರಪಂಚದ ತಲೆಯ ಮೇಲೆ ನೇತಾಡುತ್ತಿದೆ. ಇಲ್ಲಿಯವರೆಗೆ ಈ ಭೀತಿಗೊಳಿಸುವ ವೈರಸ್ ಅನ್ನು ತೆಗೆದುಹಾಕುವ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ, ಅಥವಾ ಯಾವುದೇ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಈ ಕರೋನದ ಬಗ್ಗೆ ಇಡೀ ಜಗತ್ತು ಭಯಭೀತರಾಗಲು ಇದು ಕಾರಣವಾಗಿದೆ. ಈ ವೈರಸ್ ನಾಶದಲ್ಲಿ ಅರಿಶಿನದ ಪಾತ್ರ ಏನು ಎಂದು ನಾವು ನಿಮಗೆ ತಿಳಿಸುತ್ತೇವೆ.ವಾಸ್ತವವಾಗಿ ವೈದ್ಯಕೀಯ ವಿಜ್ಞಾನವು ಅರಿಶಿನದ ಗುಣಲಕ್ಷಣಗಳನ್ನು ತಿಳಿದಾಗ ಅರಿಶಿನ ಸೇವನೆಯು ಕರೋನಾ ರೋಗವನ್ನು ತಡೆಯುತ್ತದೆ ಮತ್ತು ಸೋಂಕು ಸಂಭವಿಸಿದಲ್ಲಿ, ಅರಿಶಿನವು ಚಿಕಿತ್ಸೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ ಎಂಬ ಸತ್ಯ ಹೊರಬಂದಿತು. ನಮ್ಮ ದೇಶದಲ್ಲಿ ಆರೋಗ್ಯಕರ ಆಹಾರ ಪದ್ಧತಿಗಳು ರೂಧಿಯಲ್ಲಿವೆ. ಇದು ಆರೋಗ್ಯವಾಗಿರಲು ಅತ್ಯುತ್ತಮ ವಿಧಾನವಾಗಿದೆ.ಕೊರೋನಾ ಅವಧಿಯಲ್ಲಿ ಅರಿಶಿನದ ಗುಣಮಟ್ಟವನ್ನು ಇಂದು ಇಡೀ ಜಗತ್ತು ದೃಢವಾಗಿ ಅರ್ಥಮಾಡಿಕೊಳ್ಳುತ್ತಿದೆ. ನಮ್ಮ ಋಷಿಮುನಿಗಳು ಇದನ್ನು ಶುಭ ಎಂದು ಕರೆಯುವ ಮೂಲಕ ನಮ್ಮ ಸಂಸ್ಕೃತಿಯ ಭಾಗವಾಗಿಸಿದ್ದರು. ಇಂದು ಅದೇ ಅರಿಶಿನವು ಕರೋನಾ ವೈರಸ್ ವಿರುದ್ಧ ಗುರಾಣಿಯಾಗಿ ನಿಂತಿದೆ. ವಾಸ್ತವವಾಗಿ ಅರಿಶಿನವು ಸೂಪರ್ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬಯೋಟಿಕ್ ಮತ್ತು ಆಂಟಿ ವೈರಸ್ ಆಗಿದೆ.ಭಾರತೀಯ ಗೋಲ್ಡನ್ ಕೇಸರಿ ಎಂದು ಕರೆಯಲ್ಪಡುವ ಅರಿಶಿನವು ಪೌಷ್ಠಿಕಾಂಶದ ಅಂಶಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಅರಿಶಿನವು ವೈದ್ಯಕೀಯ ಏಜೆಂಟ್ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತ ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುವ ಮೂಲಕ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.  ಈ ಅರಿಶಿನವನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಅದರ ಔಷಧೀಯ ಗುಣಮಟ್ಟ ಹೆಚ್ಚಾಗುತ್ತದೆ. ಅರಿಶಿನವನ್ನು ಬೆಚ್ಚಗಿನ ನೀರಿನಲ್ಲಿ ಬೆರಸಿ ಕುಡಿಯುವುದರಿಂದ ಗಂಟಲಿನ ಸೋಂಕು ನಿವಾರಣೆಯಾಗುತ್ತದೆ.ಅರಿಶಿನ ಹಾಲನ್ನು ನಿರಂತರವಾಗಿ ಸೇವಿಸುವುದರಿಂದ ಈ ವೈರಸ್ ಹರಡುವುದನ್ನು ತಡೆಯಬಹುದು. ವೈದ್ಯರು ಮತ್ತು ತಜ್ಞರು ಹೇಳುವ ವಿಧಾನವನ್ನು ಜಾರಿಗೆ ತರುವ ಮೂಲಕ ಅನೇಕ ರೋಗಗಳನ್ನು ತಪ್ಪಿಸಬಹುದು. ನೀವು ಕಚ್ಚಾ ಅರಿಶಿನವನ್ನು ಒಂದು ಕಪ್ ಹಾಲು ಮತ್ತು ಒಂದು ಕಪ್ ನೀರಿನಲ್ಲಿ ಕುದಿಸಲು ಪ್ರಾರಂಭಿಸುತ್ತೀರಿ ಮತ್ತು ಹಾಲು ಕುದಿಸಿದ ನಂತರ ಕೇವಲ ಒಂದು ಕಪ್ ಮಾತ್ರ ಉಳಿದಿರುವಾಗ, ಅದನ್ನು ಬಿಸಿಯಾಗಿ ಕುಡಿಯಿರಿ. ಇದನ್ನು ಮಾಡುವುದರಿಂದ ನೀವು ಕರೋನಾ ಸೇರಿದಂತೆ ವಿಶ್ವದ ಅನೇಕ ಕಾಯಿಲೆಗಳಿಂದ ರಕ್ಷಿಸಲ್ಪಡುತ್ತೀರಿ ಮತ್ತು ರಾತ್ರಿಯಲ್ಲಿ ಅರಿಶಿನ ಹಾಲು ಕುಡಿಯುವುದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ ಎಂದಿದ್ದಾರೆ.ಇಂದು ಪ್ರಪಂಚದಾದ್ಯಂತದ ವೈದ್ಯಕೀಯ ವಿಜ್ಞಾನಿಗಳು ಕರೋನವನ್ನು ತಪ್ಪಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಅನೇಕ ಪ್ರಮುಖ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ ಎಂದು ಹೇಳುತ್ತಿದ್ದಾರೆ.

Continue Reading →

ಉಗುರು ಕಡಿಯವ ಅಭ್ಯಾಸ ಅಪಾಯಕ್ಕೆ ಆಹ್ವಾನ
Permalink

ಉಗುರು ಕಡಿಯವ ಅಭ್ಯಾಸ ಅಪಾಯಕ್ಕೆ ಆಹ್ವಾನ

  ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು ಕಾರಣವಾಗುತ್ತದೆ. ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಸ್ವಚ್ಛತೆ ಬಗ್ಗೆ ಗಮನ ನೀಡಬೇಕು.ಉಗುರಿನಲ್ಲಿ ಎಲ್ಲಾ ರೀತಿಯ ಕೊಳಕಿರುತ್ತವೆ. ಕೆಲವರು ಹಲ್ಲಿನಿಂದ ಉಗುರನ್ನು ಕಡಿಯುತ್ತಾರೆ. ಆಗ ಉಗುರಿನಲ್ಲಿರುವ ಕೊಳಕು ದೇಹ ಸೇರುತ್ತದೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಕೊರೊನಾ ನಿಯಂತ್ರಣಕ್ಕೆ ಮಾತ್ರವಲ್ಲ ಎಲ್ಲ ರೋಗದಿಂದ ರಕ್ಷಣೆ ಬೇಕೆನ್ನುವವರು ಉಗುರನ್ನು ಕಡಿಯಬಾರದು. ಮೊಡವೆ ಸಮಸ್ಯೆ ಅನೇಕರನ್ನು ಕಾಡುತ್ತದೆ. ಪಾರ್ಲರ್ ಗೆ ಹೋಗಲು ಈಗ ಸಾಧ್ಯವಿಲ್ಲ. ಕೆಲವರು ಮೊಡವೆ ಒಡೆದು ಅದ್ರಿಂದ ಮುಕ್ತಿ ಪಡೆಯುವ ಪ್ರಯತ್ನ ನಡೆಸುತ್ತಾರೆ. ಇದು ಒಳ್ಳೆಯದಲ್ಲ. ಪದೇ ಪದೇ ಗುಳ್ಳೆಗಳನ್ನು ಸ್ಪರ್ಶಿಸಿದ್ರೆ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಬಹುತೇಕರು ಕೂದಲ ಜೊತೆ ಆಟವಾಡ್ತಾರೆ. ಕೂದಲಿನಲ್ಲಿ ಸೋಂಕು ಅಡಗಿ ಕುಳಿತಿರುತ್ತದೆ. ಕೈನಲ್ಲಿ ಕೂದಲನ್ನು ಮುಟ್ಟಿದಾಗ ಕೈಗೆ ಸೋಂಕು ತಗಲುತ್ತದೆ. ಕೈನಿಂದ ಮುಖ ಮುಟ್ಟಿದಾಗ ಅದು ದೇಹ ಸೇರುವುದು ಸುಲಭವಾಗುತ್ತದೆ. ಬೆಡ್ ಶೀಟ್ ನಲ್ಲಿ ಸಾಮಾನ್ಯವಾಗಿ ಧೂಳಿರುತ್ತದೆ. ಅವುಗಳ ಮೇಲಿರುವ ಸೋಂಕು ಅನೇಕ ದಿನ ಬದುಕಬಲ್ಲವು. ಹಾಗಾಗಿ ಟವೆಲ್, ಬೆಡ್ ಶೀಟ್ ಗಳನ್ನು ವಾರದಲ್ಲಿ ಒಂದು ದಿನ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಟವೆಲ್ ಗಳನ್ನು ವಾರದಲ್ಲಿ 2-3 ದಿನ ತೊಳೆಯಬೇಕು. ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ತಿನ್ನುವಾಗ ಆಹಾರವನ್ನು ಹಂಚಿಕೊಳ್ಳಬಾರದು.

Continue Reading →

  • 1
  • 2