ಆಧಾರ್ ಗಾಗಿ ಜನರ ಪರದಾಟ-ಪ್ರತಿಭಟನೆ
Permalink

ಆಧಾರ್ ಗಾಗಿ ಜನರ ಪರದಾಟ-ಪ್ರತಿಭಟನೆ

ಮುನವಳ್ಳಿ,ಜೂ19 : ಪಟ್ಟಣದ ನಾಡಕಚೇರಿಯಲ್ಲಿ ಆಧಾರ ಕಾರ್ಡ ಮಾಡಿಸಿಕೊಳ್ಳಲು ಹಲವಾರು ತಿಂಗಳುಗಳಿಂದ ಪ್ರತಿನಿತ್ಯ ನೂರಾರು ಸಾರ್ವಜನಿಕರು ಬೆಳಗಿನ ಜಾವ 2…

Continue Reading →

ಕುಂಠಿತಗೊಂಡ ಬಿತ್ತನೆ-ಮಳೆ ನಿರೀಕ್ಷೆಯಲ್ಲಿ ರೈತರು ಬಾದಾಮಿ, ಜೂ 19-ಸತತ ಎರಡು-ಮೂರು ವರ್ಷಗಳಿಂದ ಬರದಿಂದ ಕಂಗಾಲಾಗಿದ್ದ ತಾಲೂಕಿನ ರೈತರು ಈ ಬಾರಿಯಾದರೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಕಳೆದ ವಾರ ತಾಲೂಕಿನ ವಿವಿದೆಡೆ ಅಲ್ಪ ಸ್ವಲ್ಪ ಮಳೆಯಾಗಿದ್ದು, ರೈತರು ಆಶಾಭಾವನೆಯಲ್ಲಿದ್ದಾರೆ. ತಾಲೂಕಿನ ರೈತರು ಮುಂಗಾರು ಬಿತ್ತನೆ ಕಾರ್ಯ ಆರಂಭಿಸಲು ಸನ್ನದ್ಧರಾಗಿದ್ದಾರೆ. ಮುಂಗಾರು ಹಂಗಾಮಿನ ಕ್ಷೇತ್ರ; ಬಾದಾಮಿ ತಾಲೂಕಿನಲ್ಲಿ ನೀರಾವರಿ ಬೇಸಾಯದಲ್ಲಿ ಏಕದಳ ಧಾನ್ಯಗಳನ್ನು 22700 ಹೆಕ್ಟೇರ್, ದ್ವಿದಳ ಧಾನ್ಯಗಳನ್ನು17400 ಹೆಕ್ಟೇರ್, ಎಣ್ಣೆಕಾಳು ಬೀಜಗಳನ್ನು 8100 ಹೆಕ್ಟೇರ್, ವಾಣಿಜ್ಯ ಬೆಳೆಗಳನ್ನು 880 ಹೆಕ್ಟೇರಗಳನ್ನು ಸೇರಿದಂತೆ 5700 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿದೆ. ಮಳೆ ಪ್ರಮಾಣ;ಕಳೆದ ಜನೇವರಿ ಮಾಹೆಯಿಂದ ಮೇ 31 ರ ವರೆಗೆ 94 ಮಿ.ಮಿ ಮಳೆಯಾಗುವ ನಿರೀಕ್ಷೆ ಇತ್ತು ಆದರೆ ಈ ಅವಧಿಯಲ್ಲಿ 42 ಮಿ.ಮಿ. ಮಾತ್ರ ಮಳೆಯಾಗಿದೆ. ಜೂನ್ 1 ರಿಂದ 15 ರ ವರೆಗೆ 41 ಮಿ.ಮಿ. ಮಳೆಯಾಗಬೇಕಾಗಿತ್ತು. ಆದರೆ 39 ಮಿ.ಮಿ.ಮಾತ್ರ ಮಳೆಯಾಗಿದೆ. ಜನೇವರಿ 1 ರಿಂದ ಜೂನ್ 15 ರ ವರೆಗೆ 135 ಮಿ.ಮಿ. ಮಳೆಯಾಗಬೇಕಾಗಿತ್ತು. ಆದರೆ 81 ಮಿ.ಮಿ.ಮಾತ್ರ ಮಳೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಬೀಜಗಳ ವಿತರಣೆಗೆ ಸಿದ್ದತೆ; ಈಗಾಗಲೇ ಕೃಷಿ ಇಲಾಖೆಯ ಮಾಹಿತಿಯಂತೆ ಜೋಳ, ಗೋವಿನಜೋಳ, ತೊಗರೆ, ಹೆಸರು, ಸೂರ್ಯಕಾಂತಿ ಬೀಜಗಳು ಬಂದಿದ್ದು, ರೈತರಿಗೆ ಹೋಬಳಿಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮತ್ತು ರಸಗೊಬ್ಬರಗಳನ್ನು ಮತ್ತು ಆಯ್ದ ಪಿಕೆಪಿಕೆ ಬ್ಯಾಂಕ್ ಮೂಲಕ ರಸಗೊಬ್ಬರಗಳನ್ನು ರೈತರಿಗೆ ವಿತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಗುಳೇದಗುಡ್ಡ, ಕಟಗೇರಿ, ಕೆರೂರ, ಕುಳಗೇರಿ ಭಾಗದಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದೆ. ಇಲ್ಲಿ ರೈತರು ಬಿತ್ತನೆ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ರೈತರು ಮಸಾರಿ ಭೂಮಿಯಲ್ಲಿ ಅತಿ ಹೆಚ್ಚು ಶೇಂಗಾ ಬಿತ್ತನೆ ಮಾಡಲು ತಯಾರಿ ನಡೆಸಿ ಬೀಜವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ.   ಕಪ್ಪು ಭೂಮಿಯಲ್ಲಿ ಮುಂಗಾರಿಗೆ ಹೆಸರು ಬಿತ್ತನೆ, ಮಸಾರಿ ಭೂಮಿಯಲ್ಲಿ ಸೂರ್ಯಕಾಂತಿ, ಸಜ್ಜೆ, ತೊಗರಿ ಬಿತ್ತನೆ ಮಾಡಲು ಸಿದ್ಧತೆ ಮಾಡಿಟ್ಟುಕೊಂಡಿದ್ದಾರೆ.  ಬೀಜದ ದಾಸ್ತಾನು; ಪ್ರಸಕ್ತ ವರ್ಷ ರೈತರಿಗೆ ಮುಂಗಾರು ಹಂಗಾಮಿಗೆ ರೈತ ಸಂಪರ್ಕ ಕೇಂದ್ರಗಳನ್ನು ಬೀಜ ಮತ್ತು ಗೊಬ್ಬರ ಮತ್ತು ಆಯ್ದ ತಾಲೂಕಿನ ಪಿಕೆಪಿಎಸ್ ಮೂಲಕ ರಸಗೊಬ್ಬರ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಾಕ್ಸ್-1; “ತಾಲೂಕಿನಲ್ಲಿ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ನಿಗದಿತ ಪ್ರಮಾಣದಲ್ಲಿ ಮಳೆ ಆಗದ ಕಾರಣ ಜೂನ್ 15 ರ ವರೆಗೆ 11298 ಹೆಕ್ಟೇರ್ ಬಿತ್ತನೆಯಾಗಿದೆ. ತಾಲೂಕಿನ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಏಕದಳ, ದ್ವಿದಳ, ಎಣ್ಣೆಕಾಳು ಬಿತ್ತನೆ ಬೀಜ ಹಾಗೂ ಗೊಬ್ಬರ ಸಂಗ್ರಹವಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ಮತ್ತು ಗೊಬ್ಬರ ಮತ್ತು ಆಯ್ದ ಪಿಕೆಪಿಎಸ್ ಮೂಲಕ ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.” -ಎ.ವಿ.ತಿರಕನ್ನವರ, ಸಹಾಯಕ ಕೃಷಿ ನಿರ್ದೇಶಕರು, ಬಾದಾಮಿ. ಬಾಕ್ಸ್-2 “ಕಳೆದ ಎರಡು-ಮೂರು ವರ್ಷ ಬರದಿಂದ ಕಂಗೆಟ್ಟಿರುವ ರೈತನಿಗೆ ಈ ವರ್ಷವಾದರೂ ಸಂಪೂರ್ಣ ಮಳೆಯಾದರೆ ಮಾತ್ರ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ಮಳೆರಾಯ ಕೃಪೆ ತೋರಬೇಕಿದೆ” -ಮಲ್ಲಿಕಾರ್ಜುನ ಮೇಡಿ, ಬೇಲೂರ ಗ್ರಾಮದ ರೈತ.

ಕುಂಠಿತಗೊಂಡ ಬಿತ್ತನೆ-ಮಳೆ ನಿರೀಕ್ಷೆಯಲ್ಲಿ ರೈತರು ಬಾದಾಮಿ, ಜೂ 19-ಸತತ ಎರಡು-ಮೂರು ವರ್ಷಗಳಿಂದ ಬರದಿಂದ ಕಂಗಾಲಾಗಿದ್ದ ತಾಲೂಕಿನ ರೈತರು ಈ ಬಾರಿಯಾದರೂ…

Continue Reading →

ಶ್ವಾನಗಳ ದಾಳಿಯಿಂದ ಜಿಂಕೆ ರಕ್ಷಣೆ
Permalink

ಶ್ವಾನಗಳ ದಾಳಿಯಿಂದ ಜಿಂಕೆ ರಕ್ಷಣೆ

ಮುಂಡಗೋಡ,ಜೂ.18- ಶುಕ್ರವಾರ ಬೀದಿ ನಾಯಿ ದಾಳಿಗೊಳಗಾಗಿದ್ದ ಜಿಂಕೆಯನ್ನು ರಕ್ಷಿಸಿ ಸುರಕ್ಷಿತವಾಗಿ ಸನವಳ್ಳಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ತಾಲೂಕಿನ ಕರಗಿನಕೊಪ್ಪ ಗ್ರಾಮದ…

Continue Reading →

ಶತಾಯುಸಿ ಪಾಪು: ಪತ್ರಕರ್ತರ ಒಕ್ಕೂಟದಿಂದ ಸತ್ಕಾರ
Permalink

ಶತಾಯುಸಿ ಪಾಪು: ಪತ್ರಕರ್ತರ ಒಕ್ಕೂಟದಿಂದ ಸತ್ಕಾರ

ಧಾರವಾಡ:- ಶತಾಯುಸಿ  ಖ್ಯಾತ ಪತ್ರಕರ್ತ, ಪಾಪು ಎಂದೆ ಜನಜನಿತರಾದ ನಾಡೋಜ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಾಟೀಲ ಪುಟ್ಟಪ್ಪ…

Continue Reading →

ವರದಿಗಾರನ ಮೇಲೆ ಮಾರಣಾಂತಿಕ ಹಲ್ಲೆ
Permalink

ವರದಿಗಾರನ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ,ಜೂ.18-ಖಾಸಗಿ ಚಾನಲ್ ವರದಿಗಾರನ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ‌ ಘಟನೆ  ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ನಿನ್ನೆ ತಡರಾತ್ರಿ…

Continue Reading →

9 ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ: ರೈತರ ಮುಖದಲ್ಲಿ ಮಂದಹಾಸ
Permalink

9 ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ: ರೈತರ ಮುಖದಲ್ಲಿ ಮಂದಹಾಸ

ಬೆಳಗಾವಿ, ಜೂ 18: ಸಕ್ಕರೆ ನಾಡು ಬೆಳಗಾವಿಯಲ್ಲಿ ರೈತರು ಹಗಲಿರುಳು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಕಬ್ಬಿಗೆ ಬಾಕಿ ಪಾವತಿಸದೇ…

Continue Reading →

ಪತ್ರಕರ್ತರ ಸಂಘದ
Permalink

ಪತ್ರಕರ್ತರ ಸಂಘದ

ತೀರ್ಥಹಳ್ಳಿ ತಾಲೂಕಿನ  ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ತಾಲೂಕು  ಪೊಲೀಸ್ ಅಧಿಕಾರಿ  (ಡಿವೈಎಸ್‍ಪಿ)  ರವಿಕುಮಾರ ಅವರು  ಕಾನೂನು ಮತ್ತು …

Continue Reading →

ಕಿತ್ತೂರು ಕಲ್ಯಾಣ ಕರ್ನಾಟಕ ರೈಲು ಮಾರ್ಗದ ಪೂರ್ವಭಾವಿ ಸಭೆ
Permalink

ಕಿತ್ತೂರು ಕಲ್ಯಾಣ ಕರ್ನಾಟಕ ರೈಲು ಮಾರ್ಗದ ಪೂರ್ವಭಾವಿ ಸಭೆ

ಚನ್ನಮ್ಮನ ಕಿತ್ತೂರ,ಜೂ.18- ಕಿತ್ತೂರ ಅಭಿವೃದ್ಧಿಯಾಗಬೇಕಾದರೆ  ರಾಜಕೀಯ ಮಾಡಬಾರದು  ಮೊದಲಿಗೆ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಇದೆ. ಕಿತ್ತೂರ ಯಾವಾಗೂ ಪ್ರವಾಸಿ ಸ್ಥಾನವಾಗಬೇಕಾಗಿತ್ತು.…

Continue Reading →

ಆಶ್ರಯ ಮನೆ ಹಂಚಿಕೆಗೆ ಆಗ್ರಹಿಸಿ ಸತ್ಯಾಗ್ರಹ
Permalink

ಆಶ್ರಯ ಮನೆ ಹಂಚಿಕೆಗೆ ಆಗ್ರಹಿಸಿ ಸತ್ಯಾಗ್ರಹ

ನರೇಗಲ್ಲ,ಜೂ18 : ದ್ಯಾಂಪುರ ಸಮೀಪ ನಿರ್ಮಾಣ ಮಾಡಲಾಗಿರುವ ಆಶ್ರಯ ಮನೆ ಹಂಚಿಕೆ ವಿಳಂಬ ಖಂಡಿಸಿ ಕರವೇ ಕಾರ್ಯಕರ್ತರು ಸೋಮವಾರ ಪಟ್ಟಣ…

Continue Reading →

ಭೂಮಾಲೀಕರ ತಗಾದೆ-ನಿವೇಶನ ರಹಿತರ ಧರಣಿ
Permalink

ಭೂಮಾಲೀಕರ ತಗಾದೆ-ನಿವೇಶನ ರಹಿತರ ಧರಣಿ

ಲಕ್ಷ್ಮೇಶ್ವರ,ಜೂ18-ತಾಲೂಕಿನ ಯಳವತ್ತಿ ಗ್ರಾಮದಲ್ಲಿ ವಸತಿ ರಹಿತರಿಗೆ(ಹೊಸಕೇರಿ ಪ್ಲಾಟ್) ನೀಡಲಾಗಿರುವ ನಿವೇಶನಗಳ ಫಲಾನುಭವಿಗಳಿಗೆ ಭೂ ಮಾಲೀಕರಿಂದ ಮುಕ್ತಿ ಸಿಗದ್ದರಿಂದ ನಿವಾಸಿಗರು ಸೋಮವಾರ…

Continue Reading →