A+ ವಯಸ್ಕರ ಚಿತ್ರ ಅಲ್ಲ

ನಟ, ನಿರ್ದೇಶಕ ಉಪೇಂದ್ರ ಅವರ ಶಿಷ್ಯ ವಿಜಯ್ ಸೂರ್ಯ, ಗುರುವನ್ನು ಅನುಸರಿಸಿದ್ದಾರೆ. ಅರ್ಥಾತ್ ತಮ್ಮ ಹೊಸ ಚಿತ್ರಕ್ಕೆ ’ಎ+’ ಎಂದು ಹೆಸರಿಟ್ಟಿದ್ದಾರೆ. ಈ ಮುಂದೆ ’ಎ೧’ ಎಂದು ಹೆಸರಿಡಲು ಮುಂದಾಗಿದ್ದ ವಿಜಯ್‌ಗೆ ಬೇರೊಬ್ಬರು ಅದೇ ಶೀರ್ಷಿಕೆ ಇಟ್ಟ ಹಿನ್ನೆಲೆಯಲ್ಲಿ ಎ+ ಅಂತ ಬದಲಾಯಿಸಿದ್ದಾರೆ.

a-_115

ಎಲ್ಲರ ಜೀವನa-_109ದಲ್ಲಿಯೂ ಹೋರಾಟ ಇದ್ದೇ ಇರುತ್ತದೆ.ಅದರಲ್ಲಿ ಗೆದ್ದು ಬರುವವನೇ ನಿಜವಾದ ನಾಯಕ. ಚಿತ್ರದಲ್ಲಿ ನಾಯಕನ ಜೀವನದಲ್ಲಿಯೂ ಇಂತಹ ಅನೇಕ ಸಮಸ್ಯೆಗಳು ಎದುರಾದಾಗ ಅದನೆಲ್ಲಾ ಹೇಗೆ ಮೆಟ್ಟಿ ನಿಂತು ಸಾಧನೆ ಮಾಡುತ್ತಾನೆ ಎನ್ನುವ ಸುತ್ತಾ ಕಥೆ ಸಾಗಲಿದೆ ಎನ್ನುವುದು ಚಿತ್ರದ ಕತೆ ಎಂದು ನಿರ್ದೇಶಕ ವಿಜಯ್ ಸೂರ್ಯ ಮಾತಿಗಿಳಿದರು.

೩೫ ದಿನಗಳ ಕಾಲ ಬೆಂಗಳೂರು, ಮಾಲೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ.ಒಳ್ಳೆಯ ಚಿತ್ರವಾಗುವ ವಿಶ್ವಾಸವಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

a-_105ಅನಿಲ್ ಸಿದ್ದು, ಸಿಲಿಕಾನ್ ಸಿಟಿ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದೆ, ಉತ್ತಮ ಪಾತ್ರ ಸಿಕ್ಕಿದೆ ಎಂದರೆ ನಟಿ ಸಂಗೀತ, ಚಿತ್ರದಲ್ಲಿ ನನ್ನದು, ಶ್ರೀಮಂತ ಹುಡುಗಿಯ ಮುಗ್ಧ ಪಾತ್ರ. ಕಿರುತೆರೆಯಲ್ಲಿ ನಟಿಸುತ್ತಿದ್ದೇನೆ. ಫೋಟೋ ನೋಡಿ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ.ಒಳ್ಳೆಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಯಾವುದೇ ಹಾಡಿಲ್ಲ. ಭೂಪೆಂದರ್ ಸಿಂಗ್ ಕ್ಯಾಮರ ಕೆಲಸ ಮಾಡಿದ್ದಾರೆ. ಗಣೇಶ್ ನಾರಾಯಣ್ ಹಿನ್ನೆಲೆ ಸಂಗೀತವಿದೆ. ಪ್ರಶಾಂತ್ ಸಿದ್ದಿ ನಾಯಕನ ಸ್ನೇಹಿತನ ಪಾತ್ರ ಮಾಡಿದ್ದಾರೆ.

a-_130

ನಿರ್ಮಾಪಕ ಪ್ರಭು ಕುಮಾರ್, ಕಥೆ ಕೇಳಿ ಅರ್ಧಗಂಟೆಯಲ್ಲಿ ಚಿತ್ರ ನಿರ್ಮಿಸಲು ಒಪ್ಪಿಕೊಂಡೆ. ಹಾಡು, ಫೈಟು ಇಲ್ಲದಿದ್ದರೂ ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ಅವರದು..

ಚಿತ್ರ ನೋಡುವವರನ್ನು ಆಡಿಸುತ್ತದೆ, ಕಾಡಿಸುತ್ತದೆ ಒಟ್ಟಾರೆ ಪ್ರೇಕ್ಷಕರಿಗೆ ಒಳ್ಳೆಯ ಅನುಭವ ನೀಡಲಿದೆ ಎಂದು ಹೇಳಿಕೊಂಡರು.

Leave a Comment