98.60 ಲಕ್ಷ ರೂ. ವೆಚ್ಚದ 13 ಕೊಠಡಿಗಳಿಗೆ ಭೂಮಿಪೂಜೆ

ಹುಬ್ಬಳ್ಳಿ,ಫೆ.13- ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒಂದಿಲ್ಲೊಂದು ಯೋಜನೆಗಳನ್ನು ಜಾರಿ ಮಾಡುತ್ತಿರುವ ನಮ್ಮ ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ನೀಡಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ತಿಳಿಸಿದರು.

ಸರ್ಕಾರದ ವಿವಿಧ ಯೋಜನೆಯಡಿ ಮಂಜೂರಾದ 98.60 ಲಕ್ಷ ರೂ. ಅನುದಾನದಲ್ಲಿ ಕ್ಷೇತ್ರ ವ್ಯಾಪ್ತಿಯ ಬಿಡ್ನಾಳ, ಎಸ್.ಎಂ. ಕೃಷ್ಣಾ ನಗರ, ಗಾರ್ಡನಪೇಟ್, ಅಕ್ಕಿಹೊಂಡ ಹಾಗೂ ವೀರಾಪುರ ಓಣಿಯ ಸರ್ಕಾರಿ ಶಾಲೆಗಳಿಗೆ ಮಂಜೂರಾದ 13 ಹೊಸ ಕೊಠಡಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಅದರಂತೆ ಮೂಲ ಸೌಕರ್ಯಗಳ ಹೆಚ್ಚಳಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ನನ್ನ ಕ್ಷೇತ್ರ ವ್ಯಾಪ್ತಿಯಲ್ಲೇ 28 ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 2.17 ಕೋ.ರೂ. ಮಂಜೂರು ಮಾಡಿದೆ. ಈ ಪೈಕಿ ಪ್ರಥಮ ಹಂತದಲ್ಲಿ ಬಿಡನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 5, ಎಸ್.ಎಂ. ಕೃಷ್ಣಾ ನಗರದ ಉರ್ದು ಶಾಲೆ, ಗಾರ್ಡನಪೇಟ್‍ನ ಉರ್ದು ಶಾಲೆ, ಅಕ್ಕಿಹೊಂಡದ ನಂ.5 ಶಾಲೆ ಹಾಗೂ ವೀರಾಪುರ ಓಣಿಯ ನಂ.4 ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಲಾ 2ರಂತೆ ಒಟ್ಟು 13 ಹೊಸ ಕೊಠಡಿಗಳ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಅತಿ ಹೆಚ್ಚು ಕೊಳಚೆ ಪ್ರದೇಶಗಳನ್ನು ಹೊಂದಿರುವ ನನ್ನ ಕ್ಷೇತ್ರದಲ್ಲಿ ಬಡವರೇ ಹೆಚ್ಚು ವಾಸವಾಗಿದ್ದು, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಾನೂ ಸಹ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ ಬೋರ್ಡ, ಡೆಸ್ಕ್, ಗ್ರಿಲ್, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಇನ್ನಿತರೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದ್ದು, ಇದರಿಂದಾಗಿ ಕೆಲವೆಡೆ ಮಕ್ಕಳ ಹಾಜರಾತಿಯಲ್ಲೂ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಶಾಲೆಗಳ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಸದಸ್ಯರಾದ ಮಂಜುನಾಥ ಚಿಂತಗಿಂಜಲ, ವಿಜನಗೌಡ ಪಾಟೀಲ, ಅಲ್ತಾಫ್ ಕಿತ್ತೂರು, ಶಿವು ಮೆಣಸಿನಕಾಯಿ, ಮಾಜಿ ಸದಸ್ಯರಾದ ಮೋಹನ ಅಸುಂಡಿ, ಯಮನೂರು ಜಾಧವ, ಮಲಿಕಜಾನ್ ಬಾಲಸಿಂಗ್, ಯಮನೂರು ಗುಡಿಹಾಳ, ಮುಖಂಡರಾದ ಕುಮಾರ ಕುಂದನಹಳ್ಳಿ, ಬಾಬಾಜಾನ್ ಕಾರಡಗಿ, ಇರ್ಷಾದ್ ಬ್ಯಾಹಟ್ಟಿ, ನಿರಂಜನ ಹಿರೇಮಠ, ಶಬ್ಬೀರ ಕಾರೀಗಾರ, ಶೌಕತ ಅಲಿ ತುಗ್ಗಾನಟ್ಟಿ, ಗಂಗಾಧರ ಕಲ್ಲಣ್ಣವರ, ದಿವಾನಸಾಬ್ ನಧಾಫ್, ಸೈಯದ್ ಮದನ್, ಶಫೀ ಶಿರಗುಪ್ಪಿ, ಸಿ.ಆರ್.ಪಿ. ಅಶೋಕ ಕುಂಬಾರ, ಎ.ಇ. ಕೆ.ಕೆ. ಮುಳಗುಂದಮಠ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಇತರರು ಉಪಸ್ಥಿತರಿದ್ದರು.

Leave a Comment