ದುಷ್ಕರ್ಮಿಗಳಿಂದ ಬೆಂಕಿ : ಜೇನುಹುಳುಗಳ ನಾಶ
ಮುಂಡಗೋಡ, ಆ 12- ನೂರಾರು ಜೇನುಗೂಡುಗಳಿಗೆ ಬೆಂಕಿ ಇಟ್ಟು ಜೇನುಹುಳುಗಳನ್ನು ನಾಶ ಮಾಡಿ, ಜೇನು ಹುಟ್ಟನ್ನು ತೆಗೆದುಕೊಂಡು ಹೋಗುವ ಘಟನೆ ತಾಲೂಕಿನ ಸನವಳ್ಳಿ, ನಂದಿಕಟ್ಟಾ, ಗುಂಜಾವತಿ, ಪಾಳಾ, ಕೂರ್ಲಿ, ಕಾತೂರ, ಮಳಗಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಕಂಡುಬಂದಿದೆ.
ಜೇನುತುಪ್ಪದ ಲಾಭದ ಬೆನ್ನು ಬಿದ್ದ ದುಷ್ಕರ್ಮಿಗಳು ಜೇನುಹುಳುಗಳನ್ನು ಜೀವಂತ ಸುಡುತ್ತಿರುವುದು ದಿನನಿತ್ಯ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕಾಗಿಯೇ ಆಯಾ ಅರಣ್ಯ ಪ್ರದೇಶದಲ್ಲಿ 4-5 ಜನರಿರುವ ತಂಡವೊಂದು ಸಿದ್ದವಾಗಿದ್ದು, ರಾತ್ರಿಯಾಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿಯುತ್ತಾರೆ. ಇದರಿಂದಾಗಿ ಜೇನು ಸಂತತಿ ಕ್ಷೀಣವಾಗುತ್ತಿದೆ.
ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆಂಬ ಆರೋಪ ಕೂಡ ಎಲ್ಲೆಡೆ ಕೇಳಿಬರುತ್ತಿದೆ. ಬಹುತೇಕ ಅರಣ್ಯ ಸಿಬ್ಬಂದಿಗಳು ಅರಣ್ಯ ಪ್ರದೇಶಕ್ಕೆ ಹೋಗದೇ ಇರುವುದು ಸಹ ಈ ಕೃತ್ಯಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

Leave a Comment