8 ಲಕ್ಷ ರೂ ಗಾಂಜಾ ಜಪ್ತಿ,ಬಂಧನ

ವಿಜಯಪುರ : ಅಕ್ರಮವಾಗಿ ಬೆಳೆಯಲಾಗಿದ್ದ ಸುಮಾರು ರೂ. 8 ಲಕ್ಷ ಮೌಲ್ಯದ 101 ಕೆಜಿ ಗಾಂಜಾ ಅಬಕಾರಿ ಪೊಲೀಸರು ದಾಳಿ ನಡೆಸಿ ಗಾಂಜಾ ಹಾಗೂ ಒರ್ವ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆಯ ಹೆಬ್ಬಾಳಟ್ಟಿ ಬಳಿ ಗುರಪ್ಪ ಸಿದ್ದಪ್ಪ ಕಾಖಂಡಕಿ ತನ್ನ ತೋಟದಲ್ಲಿ ಲಿಂಬೆ ಮತ್ತು ಬಾಳೆ ಗಿಡಗಳ ಮಧ್ಯ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳಸಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೋಲಿಸರು ದಾಳಿ ನಡೆಸಿದಾಗ ಏನು ಸಿಗದ ಕಾರಣ ಮತ್ತೆ ತನಿಖೆ ಮುಂದುವರೆಸಿ ಡ್ರ್ರೋಣ ಕ್ಯಾಮರಾ ಬಳಸಿ ಹೊಲದಲ್ಲಿ ನೋಡಿದಾಗ ಗಾಂಜಾ ಗಿಡಗಳು ಹೊಲದ ಭಾಗದಲ್ಲಿ ಪತ್ತೆಯಾಗಿದೆ ಅಬಕಾರಿ ಪೋಲಿಸರು ಗಾಂಜಾ ಗಿಡಗಳೊಂದಿಗೆ ಆರೋಪಿ ಗುರಪ್ಪನನ್ನು ಬಂಧಿಸಿದ್ದಾರೆ..

Leave a Comment