8 ಮಿಲಿಯನ್ ಕಾಶ್ಮೀರಿ ಜನರನ್ನು ಬೆದರಿಸಲು 9 ಲಕ್ಷ ಸೈನಿಕರ ನಿಯೋಜನೆ- ಇಮ್ರಾನ್ ಖಾನ್

ಇಸ್ಲಾಮಾಬಾದ್.ಅ.೧೮. ಸೈನಿಕರನ್ನು ಬಳಸಿಕೊಳ್ಳುವ ಮೂಲಕ ಅಮಾಯಕ ಕಾಶ್ಮೀರಿಗಳನ್ನು ಬೆದರಿಸಿ ತನ್ನ ಭೂ ಸ್ವಾಧೀನ ಕಾರ್ಯಸೂಚಿಯನ್ನು ಸಾಧಿಸಿಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಟೀಕಿಸಿದ್ದಾರೆ.

ಜಮ್ಮು- ಕಾಶ್ಮೀರದಲ್ಲಿ 75 ದಿನಗಳಾದರೂ ನಿರ್ಬಂಧ ಮುಂದುವರೆಸಿರುವ ಮೋದಿ ಆಕ್ರಮಿತ ಸರ್ಕಾರ, ಅಮಾಯಕ ಕಾಶ್ಮೀರಿ ಜನರನ್ನು ಬೆದರಿಸಲು 9 ಲಕ್ಷ ಸೈನಿಕರನ್ನು ನಿಯೋಜಿಸುವ ಮೂಲಕ ಸ್ವಾಧೀನ ಕಾರ್ಯವನ್ನು ಸಾಧಿಸಲು ಮೋದಿ ತಂತ್ರ ರೂಪಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 9 ಲಕ್ಷ ಸೈನಿಕರ ಅಗತ್ಯವಿಲ್ಲ. 8 ಮಿಲಿಯನ್ ಕಾಶ್ಮೀರಿ ಜನರಲ್ಲಿ ಭಯ ಭೀತಿ ಮೂಡಿಸಲಾಗುತ್ತಿದೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಯಭೀತರಾಗಿದ್ದಾರೆ ಎಂದಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಇಡೀ ವಿಶ್ವ ಗಮನಿಸುತ್ತಿದೆ. ನಿರ್ಬಂಧವನ್ನು ತೆಗೆದರೆ ರಕ್ತದೋಕುಳಿ ನಡೆಯಲಿದೆ ಎಂಬ ಭಯ ಮೋದಿಗೆ ಇದೆ.
ಇದು ಕಾಶ್ಮೀರಿ ಜನರನ್ನು ನಿಗ್ರಹಿಸುವ ಏಕೈಕ ಮಾರ್ಗವಾಗಿದೆ ಎಂದು ಇಮ್ರಾನ್ ಖಾನ್ ಬರೆದುಕೊಂಡಿದ್ದಾರೆ.

ಭಾರತ ಸರ್ಕಾರ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿ ನಿರ್ಬಂಧ ಹೇರಿ ಸಂವಹನವನ್ನು ಸ್ಥಗಿತಗೊಳಿಸಿದ ನಂತರ ಆಗಸ್ಟ್ 5 ರಿಂದಲೂ ಆಕ್ರಮಿತ ಕಾಶ್ನೀರದಲ್ಲಿ ಭಯ, ಹತಾಶೆ ಹೆಚ್ಚಾಗಿದೆ. ಮೊಬೈಲ್ ಪೋನ್ ಗಳ ಕರೆ ಹಾಗೂ ಪಠ್ಯ ಸೇವೆಗಳನ್ನು ಆರಂಭಗೊಂಡಿತಾದರೂ, ಮಂಗಳವಾರದಿಂದ ಪಠ್ಯ ಸೇವೆಗಳನ್ನು ಮತ್ತೆ ನಿರ್ಬಂಧಿಸಲಾಗಿದೆ.

Leave a Comment