7 ದಿನ ಶರಣ ದರ್ಶನ ಪ್ರವಚನ

ರಾಯಚೂರು.ನ.09- ನಗರದ ಬಸವೇಶ್ವರ ಕಾಲೋನಿಯಲ್ಲಿ ಅನುಭವ ಮಂಟಪ ಉದ್ಘಾಟನೆ, ಬಸವಮೂರ್ತಿ ಪ್ರತಿಷ್ಠಾಪನೆ ಕೇಂದ್ರದ ಸ್ಮರಣ ಸಂಚಿಕೆ ಬಿಡುಗಡೆ ಸೇರಿದಂತೆ 7 ದಿನ ಶರಣ ದರ್ಶನ ಪ್ರವಚನ ಹಮ್ಮಿಕೊಳ್ಳಲಾಗಿದೆಂದು ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ನ.11 ರಿಂದ 17 ರವರೆಗೆ ಶರಣ ಸಂಸ್ಕೃತಿ ಉತ್ಸವ ಹಾಗೂ ಶಿವಯೋಗ ನಡೆಯಲಿದೆ. ನ.16 ರಂದು ಅನುಭವ ಮಂಟಪ ಉದ್ಘಾಟನೆ, ಸಹಜ ಶಿವಯೋಗ, ಬಸವಮೂರ್ತಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆ, ಶರಣ ಸಂಸ್ಕೃತಿ ಉತ್ಸವ ನಂತರ ಮಹಾಪ್ರಸಾದವನ್ನು ಹಮ್ಮಿಕೊಳ್ಳಲಾಗಿದೆ. ಡಾ.ಈಶ್ವರ ಮಂಟೂರು ರವರು ಶರಣ ದರ್ಶನ ಪ್ರವಚನ ನಡೆಸಿಕೊಡಲಿದ್ದಾರೆಂದು ತಿಳಿಸಿದರು.
ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸಲಿದ್ದಾರೆ. ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿ, ಶಾಂತಮಲ್ಲ ಶಿವಾಚಾರ್ಯ, ಬೂದಿ ಬಸವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಬಸವ ಕೇಂದ್ರ ಜಿಲ್ಲಾಧ್ಯಕ್ಷ ರಾಚನಗೌಡ ಕೋಳೂರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎಂಎಲ್‌ಸಿ ಎನ್‌.ಎಸ್‌.ಬೋಸರಾಜು, ವಿಜಯ ಸಂಕೇಶ್ವರ, ಬಿ.ಸಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಂಕರ್ ಬಿದರಿ, ಅರವಿಂದ್ ಜತ್ತಿ, ಸೇರಿದಂತೆ ಇನ್ನಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಚನ್ನಬಸವಣ್ಣ ಮಹಾಜನಶೆಟ್ಟಿ, ರಾಮಸ್ವಾಮಿ ನೂಲಿ, ವಿಜಯ ಕುಮಾರ ಸಜ್ಜನ, ಚನ್ನಬಸವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment