7 ಕೋಟಿ ರೂ. ವಶ

ಗದಗ,ಏ 16- ದಾಖಲಾತಿಗಳಿಲ್ಲದ 7 ಕೋಟಿ ರೂ. ಹಣವನ್ನು ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಚೆಕ್ ಪೋಸ್ಟನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಆಕ್ಸಿಸ್ ಬ್ಯಾಂಕ್‌ಗೆ ಸೇರಿದ ಹಣ ಇದಾಗಿದ್ದು ಎನ್ನಲಾಗಿದೆ. ಆದರೆ ಯಾವುದೇ ದಾಖಲಾತಿಗಳಿಲ್ಲದ್ದರಿಂದ 7 ಕೋಟಿ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಟಿಎಂಗೆ ಸಾಗಿಸಲಾಗುತ್ತಿದೆ ಎಂದು ವಾಹನದಲ್ಲಿದ್ದ ಬ್ಯಾಂಕ್ ಸಿಬ್ಬಂದಿ ಸಮಜಾಯಿಸಿ ನೀಡಿದರೂ ಸಮರ್ಪಕ ದಾಖಲೆ ತೋರಿಸದ ಹಿನ್ನಲೆ ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Leave a Comment