66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

ನವದೆಹಲಿ, ಡಿ ೨೩- ದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದ್ದಾರೆ.
ಈ ಸಮಾರಂಭದಲ್ಲಿ ಉರಿ ಹಾಗೂ ಅಂಧದುನ್ ಚಿತ್ರದ ಅಭಿನಯಕ್ಕಾಗಿ ಆಯುಷ್‌ಮಾನ್ ಖಾರ್ನಾ, ವಿಕ್ಕಿ ಕೌಶಲ್ ಅವರಿಗೆ ಅತ್ಯುತ್ತಮ ನಟ ಹಾಗೂ ತೆಲುಗಿನ ಮಹಾನಟಿ ಚಿತ್ರದ ಅಭಿನಯಕ್ಕಾಗಿ ಕೀರ್ತಿ ಸುರೇಶ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾದರು.ಇನ್ನು ಪ್ಯಾಡ್‌ಮಾನ್ ಚಿತ್ರದಲ್ಲಿ ಅಭಿನಯಿಸಿರುವ ನಟ ಅಕ್ಷಯ್ ಕುಮಾರ್ ಅವರಿಗೆ ಸಾಮಾಜಿಕ ಕಳಕಳಿವುಳ್ಳ ಅತ್ಯುತ್ತಮ ಚಿತ್ರ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮ ನಿರೂಪಣೆಯನ್ನು ಸೋನಾಲಿ ಕುಲಕರ್ಣಿ, ದಿವ್ಯ ದತ್ತ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಬಿಗ್ ಬಿ ಗೈರು
೫೦ ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಸಮಾರಂಭಕ್ಕೆ ಗೈರಾಗಿದ್ದಾರೆ. ಬಿಗ್‌ಬಿ ಅವರಿಗೆ ಮತ್ತೊಂದು ದಿನ ವಿಶೇಷ ಸಮಾರಂಭ ಹಮ್ಮಿಕೊಂಡು ಪ್ರಶಸ್ತಿ ವಿತರಿಸಲು ನಿರ್ಧರಿಸಲಾಗಿದೆ. ತೀವ್ರ ಜ್ವರದ ಕಾರಣ ಬಚ್ಚನ್ ಅವರು ಟ್ವೀಟ್ ಮಾಡಿ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ದೆಹಲಿಗೆ ಪ್ರಯಾಣ ಮಾಡಲು ಆಗುತ್ತಿಲ್ಲ ಪರಿಣಾಮ ರಾಷ್ಟ್ರೀಯ ಪ್ರಶಸ್ತಿಗೆ ಹಾಜರಾಗಲು ಸಾಧ್ಯವಾಗದಿರುವುದು ನಿಜಕ್ಕೂ ದುರದೃಷ್ಟಕರ, ವಿಷಾದನೀಯ ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ. ವೃತ್ತಿಜೀವನದ ಅತ್ಯುತ್ತಮ ನಟನೆಗಾಗಿ ಬಿಗ್ ಬಿ ಅವರಿಗೆ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.

ಅತ್ಯುತ್ತಮ ಹಿಂದಿ ಚಿತ್ರ ಅಂಧದುನ್
ಅತ್ಯುತ್ತಮ ನೃತ್ಯ ಸಂಯೋಜನೆ- ಕೃತಿ ಮಹೇಶ್
ಅತ್ಯುತ್ತಮ ಮನೋರಂಜನಾ ಚಿತ್ರ ಬಾದಯಿ ಹೋ
ಅತ್ಯುತ್ತಮ ಪೋಷಕ ನಟಿ ಸುರೇಖಾ ಸಿಕ್ರಿ
ಅತ್ಯುತ್ತಮ ನಿರ್ದೇಶಕ ಆದಿತ್ಯ ದಾರ್
ಅತ್ಯುತ್ತಮ ಹಿನ್ನಲೆ ಸಂಗೀತ – ಉರಿ ಚಿತ್ರಕ್ಕೆ ಲಭಿಸಿದೆ.
ಅತ್ಯುತ್ತಮ ಕನ್ನಡ ಚಿತ್ರ- ನಾತಿಚರಾಮಿ

Leave a Comment