6 ರಂದು ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

 

ಕಲಬುರಗಿ ಫೆ 4: ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆ,ಮಹಾನಗರಪಾಲಿಕೆಯ ಸಹಯೋಗದಲ್ಲಿ ಫೆಬ್ರವರಿ 6 ರಂದು ಬೆಳಿಗ್ಗೆ 11.30 ಕ್ಕೆ ನಗರದ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಆಚರಿಸಲಾಗುವದು ಎಂದು ಜಿಲ್ಲಾ ಭೋವಿ (ವಡ್ಡರ) ಸಮಾಜದ ಅಧ್ಯಕ್ಷ ತಿಪ್ಪಣ್ಣ ಒಡೆಯರಾಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದು,ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸುವರು.ಸಂಸದರು ಶಾಸಕರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ,ಸಮಾಜದ ಮುಖಂಡರು ಪಾಲ್ಗೊಳ್ಳುವರು.ವಿಜಯಪುರದ ಬಿಎಲ್‍ಡಿ ಸಂಸ್ಥೆ ಪ.ಪೂ ಕಾಲೇಜು ಉಪನ್ಯಾಸಕ ಕೆ.ವಿ ಒಡೆಯರ್ ಉಪನ್ಯಾಸ ನೀಡುವರು.

ಭವ್ಯ ಮೆರವಣಿಗೆ:

ಮಧ್ಯಾಹ್ನ 1.30 ಕ್ಕೆ ಡಾ. ಎಸ್ ಎಂ ಪಂಡಿತರಂಗಮಂದಿರದಿಂದ ಜಗತ್ ವೃತ್ತ, ಗೋವಾಹೋಟೆಲ್, ಶಾಸ್ತ್ರೀಚೌಕ ಮೂಲಕ ಬ್ರಹ್ಮಪುರದಲ್ಲಿರುವ ಶಿವದಾಸ ಮಹಾರಾಜರ ಮಠದವರೆಗೆ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರಾಮಯ್ಯ ಪೂಜಾರಿ,ಭಾಗ್ಯಾ ,ತಿಮ್ಮಯ್ಯಶಾಬಾದಕರ,ರಾಜು ಸಿಂಧೆ ಸೇರಿದಂತೆ ಇತರರಿದ್ದರು..

Leave a Comment