6 ಪ್ರಯೋಗಾತ್ಮಕ ಕಮರ್ಷಿಯಲ್

ಕನ್ನಡ ಚಿತ್ರರಂಗಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಯ ಚಿತ್ರಗಳು ಸೆಟ್ಟೇರುತ್ತಿವೆ. ಅದರ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆ “೬”.  ಮಂಜು ಸ್ವರಾಜ್ ನಿರ್ದೇಶನದ  ಚಿತ್ರ ೬. ಆರು ಮಂದಿ ಹುಡುಗರ ಸುತ್ತ ಸಾಗುವ ಕಥೆ ಒಳಗೊಂಡಿದೆ.ಕಾಕತಾಳೀಯ ಎಂದರೆ ಮಂಜು ಸ್ವರಾಜ್ ಅವರ ೬ ಆರನೇ ನಿರ್ದೇಶನದ ಚಿತ್ರ ಇದು.

ಗುರು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಅವರ ಟೆಂಟ್ ಸಿನಿಮಾದ ಅನುರಾಗ್,ಪ್ರಜ್ವಲ್,ನೌಶದ್,ರವಿತೇಜ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು ಇನ್ನು ಇಬ್ಬರು ನಟರನ್ನು ಆಯ್ಕೆ ಮಾಡಬೇಕಾಗಿದೆ.ಇದರ ಜೊತೆಗೆ ನಟಿ ಹಾಗು ಕಲಾವಿದರನ್ನು ಶೀಘ್ರದಲ್ಲಿಯೇ ಆಯ್ಕೆ ಮಾಡಲು ಮಂಜು  ಸ್ವರಾಜ್ ಮತ್ತವರ ತಂಡ ಮುಂದಾಗಿದೆ.

film-6-heros

ಕಳೆದವಾರದ ಚಿತ್ರದ ಮಹೂರ್ತ ಸಮಾರಂಭವಿತ್ತು..ಸುತ್ತೂರಿನ ಶಿವರಾತ್ರೀಶ್ಚರ ದೇಶಿಕೇಂದ್ರ ಸ್ವಾಮೀಜಿ ಚಿತ್ರಕ್ಕೆ ಶುಭ ಹಾರೈಸಿದರು, ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ ಶಶಾಂಕ್ ಮತ್ತಿತರರು ಈ ವೇಳೆ ಹಾಗರಿದ್ದು ಚಿತ್ರಕ್ಕೆ ಮತ್ತು ತಂಡಕ್ಕೆ ಶುಭಕೋರಿದರು. ಈ ವೇಳೆ ಮಾತಿಗಿಳಿದ ನಿರ್ದೇಶಕ ಮಂಜು ಸ್ವರಾಜ್,ಸಸ್ಪೆನ್ಸ್,ಥ್ರಿಲ್ಲರ್ ,ಹಾರರ್ ಅಂಶವನ್ನು ಚಿತ್ರ ಒಳಗೊಂಡ, ಚಿತ್ರ “೬”.

ಶಿಶಿರ ಚಿತ್ರದ ಬಳಿಕ ಪ್ರಯೋಗಾತ್ಮಕ ಚಿತ್ರ ಇದಾಗಲಿದೆ.ಶಿಶಿರ ಚಿತ್ರದ ಬಳಿಕ ಇದೊಂದು ಪ್ರಯೋಗಾತ್ಮಕ ಚಿತ್ರ. ಹಾಗಂತ ಬರೀ ಪ್ರಯೋಗಾತ್ಮಕವಲ್ಲ ಕಮರ್ಷಿಯಲ್ ಅಂಶಗಳೂ ಚಿತ್ರದಲ್ಲಿವೆ.

ಸಂಕ್ರಾಂತಿಯ ವೇಳೆಗೆ ಚಿತ್ರೀಕರಣ ಆರಂಭ ಮಾಡಲಾಗುವುದು. ಕಡೆಯ ಕಾರ್ತೀಕ ಮಾಸದ ಶುಭದಿನ ಎನ್ನುವ ಕಾರಣಕ್ಕೆ ಕಳೆದವಾರ ಚಿತ್ರಕ್ಕೆ ಮಹೂರ್ತ ಮಾಡಲಾಗಿದೆ. ಇನ್ನೂ ಇಬ್ಬರು ನಾಯಕರು, ನಟಿ,ಮತ್ತು ಕಲಾವಿದರ ಆಯ್ಕೆಯಾಗಬೇಕಾಗಿದೆ.ಶೀಘ್ರದಲ್ಲಿಯೇ ಅದರ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿಕೊಂಡರು.

ಕಲಾವಿದರೆಲ್ಲಾ ಒಮ್ಮೆ ಆಯ್ಕೆಯಾದ ಬಳಿಕ ಅವರಿಗೆ ಚಿತ್ರದ ಬಗ್ಗೆ ತರಬೇತಿ ನೀಡಲಾಗುವುದು. ಆ ನಂತರ ಚಿತ್ರೀಕರಣಕ್ಕೆ ತೆರಳಲು ತಂಡ ಸಿದ್ದತೆ ಮಾಡಿಕೊಂಡಿದೆ ಎಂದು ಮಾತಿಗೆ ವಿರಾಮ ಹಾಕಿದರು.

ಸತ್ಯಭಾಮ ರಾಜೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ಮಾಪಕರ ಪುತ್ರ ಅನುರಾಗ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಮಾನ್ ರಾಯ್ ಎರಡು ಹಾಡುಗಳಿಗೆ ಸಂಗೀತ ನೀಡಲಿದ್ದಾರೆ. ಲವಿತ್ ಕ್ಯಾಮರ ಚಿತ್ರಕ್ಕಿದೆ.ಇಡೀ ಚಿತ್ರವನ್ನು ಬೆಂಗಳೂರು ಸುತ್ತ ಮುತ್ತ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ.

Leave a Comment