-ಚಿಕ್ಕನೆಟಕುಂಟೆ ಜಿ.ರಮೇಶ್
ಚಕ್ರವರ್ತಿಫ್ಯಾಮಿಲಿ ಎಂಟಟೈನ್‌ಮೆಂಟ್ ಚಿತ್ರ. ಜೊತೆಗೆ ಅಂಡರ್‌ವಲ್ಡ್‌ಕೂಡ ಇದೆ. ಮನೆಗಿಂತ ದೇಶಮುಖ್ಯ. ಮೂರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ.ಮೂರು ಪಾತ್ರಗಳಲ್ಲಿ ಯಾವುದು ಇಷ್ಟವಾಗಲಿದೆ ಎನ್ನುವುದಕ್ಕೆ ಇನ್ನೊಂದೇ ದಿನ ಕಾಯಿರಿ….”

ಹೀಗಂತ ಚಾಲೆಂಜಿಂಗ್ ಸ್ಟಾರ್ ಹೇಳುವ ಮೂಲಕ ಚಿತ್ರದ ಬಗೆಗಿರುವ ಎಲ್ಲಾ ಕುತೂಹಲಗಳನ್ನು ಚಿತ್ರಮಂದಿರದಲ್ಲಿಯೇ ನೋಡಿದರೆ ಅದಕ್ಕಿರುವ ಥ್ರಿಲ್ ಎನ್ನುವುದನ್ನು ಹೇಳುವ ಮೂಲಕ ಮತ್ತಷ್ಟು ಕುತೂಹಲ ಕಾಪಾಡಿಕೊಂಡರು.

’ಚಕ್ರವರ್ತಿಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಚಿತ್ರ ಗೆದ್ದಾಗ ಆರಕ್ಕೆ ಏರಿಲ್ಲ. ಸೋತಾಗ ಮೂರಕ್ಕೆ ಇಳಿದಿಲ್ಲ.ಹಾಗಾಗಿ ಯಾಕೆ ಟೆನ್ಷನ್ ತಗೋಬೇಕು.ಅಷ್ಟಕ್ಕೂ ಕನಸು ಕಾಣುವುದೇ ಇಲ್ಲ.ಚಕ್ರವರ್ತಿ ಇದೇ ಮೊದಲ ಬಾರಿಗೆ ಮಧ್ಯರಾತ್ರಿ ಬಿಡುಗಡೆಯಾಗುತ್ತಿದೆ. ಇದರ ಖುಷಿ ಇದೆ. ಹಾಗಂತ ಯಾವುದೇ ಟೆನ್ಷನ್ ಅಥವಾ ಭಯವಿಲ್ಲ.
ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಮುಖಾಮುಖಿಯಾಗಿದ್ದ ದರ್ಶನ್, ಚಿತ್ರದಲ್ಲಿ ಮೂರು ಪಾತ್ರಗಳಿವೆ.ಅವುಗಳಿಗಾಗಿ ಗೆಟಪ್ ಬದಲಾಯಿಸಿಕೊಳ್ಳಬೇಕಾಗಿತ್ತು.ಹಾಗಾಗಿ ಚಿತ್ರ ವಿಳಂಬವಾಯಿತು.ಒಂದೊಂದು ಪಾತ್ರವನ್ನೂ ಒಟ್ಟಿಗೆ ಮುಗಿಸಿದ್ದೇವೆ.

ಅದಕ್ಕೆ ಕಾರಣ ಆ ಪಾತ್ರಗಳಿಗಾಗಿಯೇ ತಯಾರಿ ಮಾಡಿಕೊಳ್ಳಬೇಕಾಗಿತ್ತು.ಇದುವರೆಗೂ ಮಾಡಿರುವ ೪೭ ಸಿನಿಮಾಗಳಲ್ಲಿ ಇದು ಭಿನ್ನವಾದ ಸಿನಿಮಾ. ನಿರ್ದೇಶಕ ಚಿಂತನ್ ಕಥೆ ಹೇಳಿದಕ್ಕಿಂತ ಚೆನ್ನಾಗಿ ಮಾಡಿದ್ದಾರೆ. ಅವರೊಬ್ಬ ಅನ್‌ಸ್ಯಾಟಿಸ್‌ಫೈಡ್ ನಿರ್ದೇಶಕ ಎನ್ನುವ ಮೂಲಕ ಮೆಚ್ಚುಗೆ ಮಾತನಾಡಿದರು.

ಅಂಡರ್‌ವಲ್ಡ್ ಎಂದಾಗ
ಕೆಟ್ಟದ್ದೇ ನಡೆಯುತ್ತದೆ ಎಂದು ಯಾಕೆ ಬಾವಿಸಬೇಕು.ಒಳ್ಳೆಯ ಜಾಗದಲ್ಲಿ ಕೆಟ್ಟದ್ದೂ ಆಗಬಹುದು.ಕೆಟ್ಟ ಜಾಗದಲ್ಲಿ ಒಳ್ಳೆಯದೂ ಆಗಬಹುದು ಅಲ್ಲವೇ. ಒಂದು ಪಾತ್ರದಲ್ಲಿ ಡೈಲಾಗ್ ಡಿಲವೆರಿ, ಮತ್ತೊಂದರಲ್ಲಿ ಕಣ್ಣಲ್ಲಿ ಮಾತನಾಡಿಸುವ ಶಕ್ತಿ ಹೀಗೆ ಮೂರು ಪಾತ್ರಗಳೂ ಮೂರು ರೀತಿ ಮೂಡಿಬಂದಿವೆ. ಚಿತ್ರದಲ್ಲಿ ಎಲ್ಲಾ ಮಾದರಿಯ ಕ್ಯಾಮರಗಳನ್ನು ಬಳಸಲಾಗಿದೆ. ತಾರಾಗಣದಲ್ಲಿಯೂ ಕೂಡ ದೊಡ್ಡ ಚಿತ್ರ.

’ಚಕ್ರವರ್ತಿ ಎನ್ನುವುದು ಹಿರೋ. ನಾನೂ ಸೇರಿದಂತೆ ಇನ್ನುಳಿದ ನಟರೆಲ್ಲಾ ಪಾತ್ರಗಳಷ್ಟೇ. ಪಾತ್ರಕ್ಕೆ ಏನು ಬೇಕೋ ಅದನ್ನು ಮಾಡಿದ್ದೇವೆ. ನಟರ ಆಯ್ಕೆಯಲ್ಲಿ ನಾನು ಯಾವುದೇ ಹಸ್ತಪಕ್ಷೇಪ ಮಾಡಿಲ್ಲ. ಅಥವಾ ಸ್ನೇಹಿತರೆನ್ನುವ ಕಾರಣಕ್ಕೆ ನಟಿಸಿ ಎಂದೂ ಹೇಳಿಲ್ಲ. ಇನ್ನುಳಿದ ನಟರ ಆಯ್ಕೆ ನಿರ್ದೇಶಕ ಚಿಂತನ್, ದಿನಕರ್ ಮತ್ತು ಮಲ್ಲಿ ಅವರದು. ಅವರ ಕಲ್ಪನೆಗೆ ತಕ್ಕಂತೆ ತಾನು ನಟಿಸಿದ್ದೇನೆ. ನಿರ್ಮಾಪಕ ಸಿದ್ದಾಂತ್ ಚಿತ್ರಕ್ಕೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಒದಗಿಸಿದ್ದಾರೆ. ಅವರಂತ ನಿರ್ಮಾಪಕರು ಚಿತ್ರರಂಗಕ್ಕೆ ಅಗತ್ಯವಿದೆ. ಬೇರೊಬ್ಬ ಚಿತ್ರ ನಿರ್ಮಾಪಕರು ಕೈ ಬಿಟ್ಟು ಹೋದ ಹಿನ್ನೆಲೆಯಲ್ಲಿ ಅವರು ಖರ್ಚು ಮಾಡಿದ ಪ್ರತಿ ಪೈಸೆ ಬಾಕಿ ನೀಡಿ ’ಚಕ್ರವರ್ತಿ ನಿರ್ಮಾಣ ಕೈಗೆತ್ತಿಕೊಂಡಿದ್ದಾರೆ.

ಕೆಲವು ಚಿತ್ರಗಳಲ್ಲಿ ನಿರ್ಮಾಪಕರು ಬಾಗಿಲು ಮುಚ್ಚಿಕೊಂಡು ಕೆಲಸ ಮಾಡುತ್ತಾರೆ ಅಂತಹ ಚಿತ್ರಗಳಲ್ಲಿ ನಟಿಸಿ ಬರುತ್ತೇನೆ ಅಷ್ಟೇ ಇನ್ನುಳಿದ ಚಿತ್ರಗಳಲ್ಲಿ ಪ್ರತಿಯೊಂದು ಕೆಲಸ ಆರಂಭಿಸುವಾಗ ಸಲಹೆ ಸಹಕಾರ ಕೇಳುತ್ತಾರೆ. ಅಂತಹ ಚಿತ್ರಗಳಿಗೆ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ. ಚಕ್ರವರ್ತಿಯಲ್ಲಿಯೂ ಕೂಡ ಸಂಪೂರ್ಣ ಚಿತ್ರಕ್ಕಾಗಿ ಅರ್ಪಿಸಿಕೊಂಡಿದ್ದೇನೆ.

ದಿನಕರ್ ಮೊದಲ ಬಾರಿಗೆ ನಟಿಸಿರುವುದರಿಂದ ಎಲ್ಲರಿಂದ ಸಲಹೆ ಪಡೆಡಿದ್ದಾರೆ. ಆತನ ಅಭಿನಯ ಕಂಡು ಅಮ್ಮ ಮೀನಾ, ದಿನಕರ್ ಪಾತ್ರದಲ್ಲಿ ಅಪ್ಪನನ್ನು ಕಂಡು ಅತ್ತಿದ್ದಾರೆ. ಸಂಗೀತದಲ್ಲಿ ವಿಭಿನ್ನ ಸೌಂಡ್ ಕೇಳಲಿದೆ, ನಟಿ ದೀಪಾ ಸನ್ನಿಧಿ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಒಳ್ಳೆಯ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿಕೊಂಡರು. ನಟಿ ದೀಪಾಸನ್ನಿಧಿ, ಇದುವರೆಗೂ ಮಾಡದ ವಿಭಿನ್ನ ಪಾತ್ರ. ಮೂರು ಗೆಟಪ್‌ನಲ್ಲಿ ಬರುತ್ತದೆ. ನನ್ನದು ಶಾಂತಿ ಹೆಸರಿನ ಪಾತ್ರ ಅದರಲ್ಲಿ ಅಶಾಂತಿ ಇರುತ್ತದೋ ಇಲ್ಲವೇ ಚಿತ್ರದಲ್ಲಿ ನೋಡಿ ಎಂದು ಹೇಳಿಕೊಂಡರು.

ಚಾಲೆಂಜಿಂಗ್‌ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಮತ್ತು ಬಹುತಾರಾಗಣದ ಚಿತ್ರ ನಾಳೆ ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲಿಯೂ ೪೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ಇಂದು ಮಧ್ಯರಾತ್ರಿಯಿಂದಲೇ ಚಕ್ರವರ್ತಿಯ ಆರ್ಭಟಕ್ಕೆ ರಂಗಸಜ್ಜಿಕೆಯಾಗಿದೆ.

ನಿರ್ಮಾಪಕ ಸಿದ್ಧಾಂತ್, ಚಿತ್ರದಲ್ಲಿ ನನ್ನದು ಖಡಕ್ ಇಂಟರ್‌ಪೋಲ್  ಅಧಿಕಾರಿಯ ಪಾತ್ರ.  ಚಿತ್ರಕ್ಕೆ ನನ್ನ ಪಾತ್ರ ಟರ್ನಿಂಗ್ ಪಾಯಿಂಟ್.  ಇದೇ ೧೪ರಂದು ಚಿತ್ರವನ್ನು  ತೆರೆಗೆ ತರಲಾಗುತ್ತಿದೆ ಎಲ್ಲರ ಸಹಕಾರ ಮತ್ತು  ಬೆಂಬಲ ಬೇಕು ಎಂದು ಕೇಳಿಕೊಂಡರು.

Leave a Comment