ವೇಗಕ್ಕೆ ಚಾಲನೆ

ಕಳೆದ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಛಲಪತಿ ಬಿ ಕೋಲಾರ ಸ್ವತಂತ್ರ ನಿರ್ದೇಶಕರಾಗಿ ವೇಗ ಮೂಲಕ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿ ನಾಯಕ-ನಾಯಕಿಯರು ಇಲ್ಲ, ಬದಲಾಗಿ ಆರು ಪಾತ್ರಗಳನ್ನು ಮುಂದಿಟ್ಟುಕೊಂಡು ಅದರ ಸುತ್ತಲೇ ಚಿತ್ರವನ್ನು ಕೇಂದ್ರೀಕರಿಸಿ ಚಿತ್ರೀಕರಿಸಿದ್ದಾರೆ.
ಇತ್ತೀಚಿನ ಯುವ ಪೀಳಿಗೆ ದುಡ್ಡು ಮಾಡುವ ಆತುರದಲ್ಲಿ ಏನೆಲ್ಲ ಘಟನೆಗಳಿಗೆ ಇಳಿಯುತ್ತಾರೆ. ಅದರಿಂದ ಯಾವ ರೀತಿ ಪರಿಣಾಮವಾಗುತ್ತದೆ ಎನ್ನುವುದನ್ನು ಕೇಂದ್ರೀಕರಿಸಿ ಛಲಪತಿ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಚಿತ್ರವನ್ನು ಬೆಂಗಳೂರು, ಗೋವಾ, ಮಂಗಳೂರು ಸೇರಿದಂತೆ ವಿವಿಧ ಕಡೆ ೬೦ ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ದುಡ್ಡು ಮಾಡುವ ವೇಗದಲ್ಲಿ ಯುವ ಪೀಳಿಗೆ ಅಪರಾಧ ಚಟುವಟಿಕೆಗಳಿಗೆ ಇಳಿಯುವುದರಿಂದ ಏನೆಲ್ಲ ಪರಿಣಾಮವಾಗಲಿದೆ ಎನ್ನುವ ತಿರುಳನ್ನು ಪ್ರಧಾನವಾಗಿರಿಸಿಕೊಂಡು ಚಿತ್ರ ಮಾಡಲಾಗುತ್ತಿದೆ.

ಚಿತ್ರದಲ್ಲಿ ೫ ಹಾಡುಗಳಿವೆ, ವಿಷ್ಣುವರ್ಧನ್ ಕ್ಯಾಮೆರಾ ಚಿತ್ರಕ್ಕಿದೆ. ಒಳ್ಳೆಯ ಚಿತ್ರ ಮಾಡುವುದು ನಮ್ಮ ಉದ್ದೇಶ ಎಂದು ಮಾಹಿತಿ ನೀಡಿದರು. ನಿರ್ಮಾಪಕ ತಾವರೆಕೆರೆ ವೆಂಕಟೇಶ್ ಚಿತ್ರದಲ್ಲಿ ನಟಿಸುತ್ತಿರುವ ಎಲ್ಲರೂ ಹೊಸಬರೆ, ೧ ಕೋಟಿ ವೆಚ್ಚದಲ್ಲಿ ಚಿತ್ರ ಮಾಡುವ ಉದ್ದೇಶವಿದೆ ಎಂದು ಹೇಳಿಕೊಂಡರು.
ನಟ ಆಶಿಕ್ ಸೈಕೋಪಾತ್ರ ನನ್ನದು, ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ಸಿಗಲಿದೆ ಎನ್ನುವ ವಿಶ್ವಾಸ ಅವರು ಕಿರಣ್ ತಾವರೆಕೆರೆ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಮುನಿ ಖಳನಟನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮಮತಾ ರಾವ್ ಹಾಗೂ ನಿಧಿ ಕಾಣಿಸಿಕೊಂಡಿದ್ದು, ಒಳ್ಳೆಯ ಪಾತ್ರ ಎಂದು ವಿವರ ನೀಡಿದರು. ಮಹೇಂದ್ರ ಅವರ ಸಂಗೀತ ಚಿತ್ರಕ್ಕಿದೆ.

Leave a Comment