51 ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ

ವೈ.ಎಸ್. ಎಲ್. ಸ್ವಾಮಿ
ಬೆಂಗಳೂರು, ಏ. ೧೬- ರಾಜ್ಯ ವಿಧಾನಸಭೆಗೆ 218 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಕಾಂಗ್ರೆಸ್ ಪಕ್ಷ 51 ಮಂದಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಜನಮನಗೆಲ್ಲಲು ಮುಂದಾಗಿದೆ.

ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೊಸ ಮುಖಗಳಿಗೆ ಟಿಕೆಟ್ ನೀಡುವ ಮೂಲಕ ಚುನಾವಣೆಗಳನ್ನು ಗೆದ್ದಿತ್ತು. ಅದೇ ತಂತ್ರವನ್ನು ಕಾಂಗ್ರೆಸ್ ರಾಜ್ಯದಲ್ಲಿ ಅಳವಡಿಸಿಕೊಂಡು ಗೆಲ್ಲುವ ಮಾನದಂಡದ ಮೇಲೆ 51 ಹೊಸ ಮುಖಗಳಿಗೆ ಟಿಕೆಟ್ ನೀಡಿದೆ.

ಚುನಾವಣೆಯಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ಕೆಲ ಹಾಲಿ ಶಾಸಕರಿಗೆ ಟಿಕೆಟ್‌ನ್ನು ನಿರಾಕರಿಸಲಾಗಿದೆ.

ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ಐದಾರು ಮಂದಿ ಮಾಜಿ ಶಾಸಕರುಗಳಿಗೂ ಈ ಬಾರಿ ಟಿಕೆಟ್ ನೀಡಿ, ಹುರಿದುಂಬಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಸೋಲು ಅನುಭಿಸಿದ ಅಭ್ಯರ್ಥಿಗಳ ಪೈಕಿ 32 ಮಂದಿಗೆ ಮತ್ತೇ ಟಿಕೆಟ್ ನೀಡುವ ಮೂಲಕ ಜನರ ಸಹಾನುಭೂತಿ ಪಡೆಯಲು ಯೋಜನೆ ರೂಪಿಸಲಾಗಿದೆ.

ವಿಧಾನ ಪರಿಷತ್‌ನ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್, ಶ್ರೀನಿವಾಸಮಾನೆ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಬೆಂಗಳೂರಿನ ಮೇಯರ್ ಸಂಪತ್‌ರಾಜ್, ಮಾಜಿ ಮೇಯರ್ ಪದ್ಮಾವತಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಯತೀಂದ್ರ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ, ಸಚಿವ ಜಯಚಂದ್ರ ಅವರ ಪುತ್ರ ಸಂತೋಷ್‌ ಜಯಚಂದ್ರ, ಕಾಂಗ್ರೆಸ್‌ನ ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ. ಶ್ರೀನಿವಾಸಕರಿಯಣ್ಣ, ಇತ್ತೀಚೆಗಷ್ಟೆ ನಿಧನರಾದ ಮಾಜಿ ಸಚಿವ ಖಮರುಲ್ಲಾ ಇಸ್ಲಾಂ ಪತ್ನಿ ಫಾತಿಮಾ ಬೇಗಂ, ಶಾಸಕ ದಿ. ರುದ್ರೇಗೌಡರ ಪತ್ನಿ ಕೀರ್ತನರುದ್ರೇಗೌಡ, ದಿ. ಶಾಸಕ ಚಿಕ್ಕಮಾಧು ಪುತ್ರ ಅನಿಲ್‌ಕುಮಾರ್, ಸಂಸದ ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಗೂರು ಮಂಜೇಗೌಡ, ನಿವೃತ್ತ ಐಎಎಸ್ ಅಧಿಕಾರಿಗಳಾದ ಸಿದ್ದಯ್ಯ, ಸೈಯದ್ ಜಮೀರ್ ಪಾಷ, ವಿಧಾನಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿದ್ದ ಡಾ. ದೇವರಾಜ್ ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಪಾಟೀಲ್, ಎನ್ಎಸ್‌ಯುಐ ಅಧ್ಯಕ್ಷ ಮಂಜುನಾಥ್‌ಗೌಡ, ನಿವೃತ್ತ ಅಧಿಕಾರಿ ಅರವಿಂದ ಬೆಳಗಾವಿ, ತುಮಕೂರು ಗ್ರಾಮಾಂತರದಿಂದ ರಾಯಸಂದ್ರ ರವಿಕುಮಾರ್, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ರಮೇಶ್, ಮಹಿಳಾ ಕಾಂಗ್ರೆಸ್ ಮುಖಂಡೆ ಸುಷ್ಮಾ ರಾಜಗೋಪಾಲರೆಡ್ಡಿ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ರಾಕೇಶ್‌ಮಲ್ಲಿ, ಗುಬ್ಬಿ ಕುಮಾರ್, ಜಗಳೂರಿನ ಎ.ಎಲ್. ಪುಷ್ಪ ಸೇರಿದಂತೆ ಒಟ್ಟು 51 ಮಂದಿ ಹೊಸಬರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ.

ಇವರುಗಳ ಜತೆಗೆ ಹಲವು ಮಾಜಿ ಶಾಸಕರುಗಳಿಗೂ ಟಿಕೆಟ್ ನೀಡಲಾಗಿದ್ದು, ತರೀಕೆರೆಯಿಂದ ಎಸ್.ಎಂ. ನಾಗರಾಜ್, ಶಹಾಪೂರದಿಂದ ಶರಣಬಸಪ್ಪ ದರ್ಶನಾಪುರ, ಹುಕ್ಕೇರಿಯಿಂದ ಮಾಜಿ ಸಚಿವ ಎ.ಬಿ.ಪಾಟೀಲ್, ಸಚಿವ ಎಂ.ಆರ್. ಸೀತಾರಾಮ್, ಮಾಜಿ ಶಾಸಕರುಗಳಾದ ಬಿ. ನಂಜಾಮರಿ, ಎ.ಆರ್. ಕೃಷ್ಣಮೂರ್ತಿ, ಗೋಪಾಲ್ ಭಂಡಾರಿ, ಅಮರೇಗೌಡ ಬಯ್ಯಾಪುರ, ಎಂ.ಡಿ. ಲಕ್ಷ್ಮಿನಾರಾಯಣ್, ಅಮಿತ್ ಶಾಮ್‌ ಘಾಟ್ಗೆ, ಮಹಂತೇಶ್ ಕೌಜಲಗಿ, ಮಾಜಿ ಸಚಿವೆ ಮೋಟಮ್ಮ, ಮಾಜಿ ಸಚಿವ ಬಿ.ಎಲ್.ಶಂಕರ್, ಬಿ.ಕೆ. ಸಂಗಮೇಶ್ ಇವರುಗಳಿಗೂ ಟಿಕೆಟ್ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟದ ಎಲ್ಲ ಸಚಿವರಿಗೂ ಟಿಕೆಟ್ ಸಿಕ್ಕಿದೆ. ಹಾಲಿ ಶಾಸಕರಲ್ಲಿ 11 ಮಂದಿಗೆ ಟಿಕೆಟ್ ನಿರಾಕರಿಸಲಾಗಿದೆ.

Leave a Comment