500 ಕೋಟಿ ರೂ. ಬಜೆಟ್‌ ನ ʼರಾಮಾಯಣʼದಲ್ಲಿ ದೀಪಿಕಾ ಪಡುಕೋಣೆ-ಹೃತಿಕ್ ರೋಶನ್.?

ಬಹುನಿರೀಕ್ಷಿತ ಮತ್ತು 500 ಕೋಟಿ ರೂಪಾಯಿ ಬಿಗ್ ಬಜೆಟ್ ನ ರಾಮಾಯಣ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಶನ್ ಅವರು ಸೀತೆ ಮತ್ತು ರಾಮ ಆಗಲಿದ್ದಾರೆಯೇ? ಹೀಗೊಂದು ವದಂತಿ ಎಲ್ಲಾ ಕಡೆ ಹಬ್ಬುತ್ತಿದೆ.

ಈ ರೂಮರ್ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಿದವರಿಗೇ ನಿತೇಶ್ ನೀವೇ ಹೇಳಿದ್ದಿರಲ್ಲಾ ರೂಮರ್ ಎಂದು. ಅದೇ ರೀತಿ ಇರಬಹುದು ಎಂದು ಮುಗುಮ್ಮಾಗಿಯೇ ಉತ್ತರಿಸಿದ್ದಾರೆ.

ಇದುವರೆಗೆ ಚಿತ್ರದಲ್ಲಿ ಯಾರು ನಾಯಕ ನಟ, ನಾಯಕ ನಟಿ ಯಾರೆಂಬುದನ್ನು ಇನ್ನೂ ನಿರ್ಧರಿಸಿಲ್ಲ. ಇತರೆ ನಟ-ನಟಿಯರ ಹುಡುಕಾಟವು ಇನ್ನೂ ಆರಂಭವಾಗಿಲ್ಲ. ಈ ಬಗ್ಗೆ ಏನನ್ನೂ ಯೋಚನೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೊದಲು ಚಿತ್ರದ ಎಲ್ಲಾ ಪೇಪರ್ ವರ್ಕ್ ಮುಗಿಯಲಿ. ಆ ಪ್ರಕ್ರಿಯೆಯನ್ನು ಇನ್ನೂ ಆರಂಭಿಸಬೇಕಿದೆ. ಅದು ಮುಗಿದ ನಂತರವಷ್ಟೇ ಮುಂದಿನ ವಿಚಾರದ ಬಗ್ಗೆ ಯೋಚನೆ ಮಾಡುತ್ತೇವೆ ಎಂದಿದ್ದಾರೆ.

Leave a Comment