50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಪಾಂಡವಪುರ:ಫೆ:13- ತಾಲೂಕಿನ ಬಿಂಡಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆ ಲೆಕ್ಕ ಶೀರ್ಷಿಕೆ ಅನುದಾನದ 50 ಲಕ್ಷ ವೆಚ್ಚ ರಸ್ತೆ ಅಭಿವೃದ್ದಿ ಕಾಮಗಾರಿಗೆ ಜಿಪಂ ಸದಸ್ಯ ಸಿ.ಅಶೋಕ್ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ದಿಗಾಗಿ ಸಂಸದ ಸಿ.ಎಸ್.ಪುಟ್ಟರಾಜು ಅವರ ಕೋರಿಕೆಯ ಮೇರೆಗೆ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆಯ ಲೆಕ್ಕ ಶೀರ್ಷಿಕೆಯಡಿ ಪಾಂಡವಪುರ ತಾಲೂಕಿಗೆ 1.50 ಕೋಟಿ ಹಣ ಬಿಡುಗಡೆ ಮಾಡಿಸಿದ್ದಾರೆ. ಅದರಂತೆ ತಾಲೂಕ ಬಿಂಡಹಳ್ಳಿ ಗ್ರಾಮದ ರಸ್ತೆ ಅಭಿವೃದ್ದಿಗೆ 50 ಲಕ್ಷ ಹಣವನ್ನು ಮಂಜೂರು ಮಾಡಿಸಲಾಗಿದೆ ಎಂದರು.
ಕಳೆದ ಎಂಟು ತಿಂಗಳ ಹಿಂದೆಯೇ ಹಣ ಮಂಜೂರು ಮಾಡಿಸಲಾಗಿತ್ತು. ಕಾಮಗಾರಿಗೆ ಗುದ್ದಲಿ ಪೂಜೆಗೆ ಸ್ಥಳೀಯರ ಶಾಸಕರು ದಿನಾಂಕವನ್ನು ನಿಗಧಿ ಮಾಡದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಕ್ಕೆ ತಡವಾಯಿತು. ಆದರೆ, ಶಾಸಕ ಪುಟ್ಟಣ್ಣಯ್ಯನವರು ರಸ್ತೆ ಅಭಿವೃದ್ದಿ ಕಾಮಗಾರಿಗೆ ಭಾನುವಾರಕ್ಕೆ ದಿನಾಂಕ ನಿಗಧಿ ಮಾಡಿದ್ದರು ಅದರೆ ಬರದೆ ಸೋಮವಾರಕ್ಕೆ ನಿಗಧಿ ಮಾಡಿದ್ದರು ಅದರಂತೆ ನಾವು ಸಹ ಸೋಮವಾರ ಪೂಜೆಗೆ ಸಿದ್ದತೆಮಾಡಿಕೊಂಡೆದ್ದವು. ಶಾಸಕರು ದೂರವಾಣಿ ಕರೆಮಾಡಿ ನಾನು ಬರಲು ಸಾಧ್ಯವಿಲ್ಲ ನೀವೇ ಭೂಮಿ ಪೂಜೆ ನೆರವೇರಿಸಿ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಗುದ್ದಲಿ ಪೂಜೆ ನೆರವೇರಿಸುತ್ತಿದ್ದೇವೆ ಎಂದು ತಿಳಿಸಿದರು.
ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಪೂರ್ಣಿಮಾವೆಂಕಟೇಶ್, ಗ್ರಾಪಂ ಅಧ್ಯಕ್ಷ ರೇವಣ್ಣ, ತಾಪಂ ಮಾಜಿ ಅಧ್ಯಕ್ಷ ಬಿ.ಡಿ.ಹುಚ್ಚೇಗೌಡ, ಮಾಜಿ ಸದಸ್ಯ ಶ್ರೀನಿವಾಸ್, ಗ್ರಾಪಂ ಉಪಾಧ್ಯಕ್ಷ ರಾಧಮ್ಮ, ಶೋಭಾ, ಸದಸ್ಯೆ ಸಣ್ಣತಾಯಮ್ಮವೀರಭದ್ರೇಗೌಡ, ಎಸ್‍ಡಿಎಂಸಿ ಅಧ್ಯಕ್ಷ ಶಿವಕುಮಾರ್, ಕೇಬಲ್‍ನಾಗೇಶ್, ಡೈರಿ ಬಸವರಾಜು, ಯ.ನಾಗೇಗೌಡ, ರಂಗೇಗೌಡ, ಬಸವರಾಜು, ಚಂದ್ರು, ಜವರೇಗೌಡ, ಅಂಗಡಿಸ್ವಾಮಣ್ಣ, ಯೋಗೇಶ್, ಬಿ.ಎನ್.ರವಿ, ಸುರೇಂದ್ರ, ಸಣ್ಣಣ್ಣ, ಯುವ ಮುಖಂಡರಾದ ರಾಜೇಶ್, ಅರುಣ್ ಸೇರಿದಂತೆ ಹಾಜರಿದ್ದರು

Leave a Comment