5ಸಾವಿರ ಪಿಂಚಣಿ ನಿಗಧಿಗೆ ಆಗ್ರಹ

ಬೆಂಗಳೂರು,ಆ.೧- ದೇಶದಲ್ಲಿರುವ ಲಕ್ಷಾಂತರ ಇ.ಪಿ.ಎಸ್‌ ಪಿಂಚಣಿದಾರರು ತಿಂಗಳಿಗೆ ರೂ 1000ಕ್ಕಿಂತಲೂ ಕಡಿಮೆ ಪಿಂಚಣಿ ಪಡೆಯುತ್ತಿದ್ದು, ಇದರಂದ ಜೀವನ ನಡೆಸಲು ಅಸಾಧ್ಯವಾಗಿದ್ದು ಹೀಗಾಗಿ ಕನಿಷ್ಠ ಮಾಸಿಕ ಪಿಂಚಣಿಯನ್ನು 5 ಸಾವಿರ ರೂ ಗಳಿಗೆ ನಿಗಧಿಪಡಿಸಬೇಕೆಂದು ಭವಿಷ್ಯ ನಿಧಿ ವಂತಿಗೆ ದಾರರ ಮತ್ತು ಇಪಿಎಫ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೈಶಂಕರ ರೆಡ್ಡಿ ಎನ್.ವಿ.ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಹೊಂಬೇಗೌಡ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಪಿಂಚಣಿದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿವೃತ್ತ ನೌಕರರಿಗೆ ಪಿಂಚಣಿ ಜೊತೆ ಡಿ.ಎ.ಸೇರಿಸಿ ಕೊಡುವಂತೆ ನಮಗೂ ಕೂಡ ಡಿಎ ಸೇರಿಸಿ ಕೊಡಬೇಕೆಂದು ಮನವಿ ಮಾಡಿದರು.
ಸರ್ಕಾರದ ಪಿಂಚಣಿಯನ್ನು ಹೆಚ್ಚಾಳ ಮಾಡಲಾಗಿದೆ ಎಂದು ಹೇಳುತ್ತಿದೆ. ಆದರೆ ಇದುವರೆಗೂ ಒಂದು ಪೈಸೆ ಕೂಡ ಹೆಚ್ಚಳವಾಗಿರುವುದಿಲ್ಲ. ಸರ್ಕಾರಕ್ಕಾಗಲಿ, ಇಪಿಎಫ್‌ಓನ ಅಧಿರಕಾರಿಗಳಿಗಾಗಲಿ ನಮ್ಮ ಮೇಲೆ ಎಳ್ಳಷ್ಟು ಮನಸ್ಸಿಲ್ಲ. ಬಿಜೆಪಿ ಸರ್ಕಾರದ ಇಪಿಎಸ್ ಪಿಂಚಣಿದಾರರ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಹಿಂದಿನ ಪಿ.ವಿ.ನರಸಿಂಹರಾವ್ ಸರ್ಕಾರ ಬಡ ನಿವೃತ್ತ ಕಾರ್ಮಿಕರ ಹಿತದೃಷ್ಠಿಯಿಂದ 1971ರ ಕುಟುಂಬ ಪಿಂಚಣಿ ಯೋಜನೆಯನ್ನು ಬದಲಾವಣೆ ಮಾಡಿ ಕಾರ್ಮಿಕ ಪಿಂಚಣಿ ಯೋಜನೆಯನ್ನು 1995 ರಲ್ಲಿ ಜಾರಿಗೆ ತಂದಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಅದರಲ್ಲಿರುವ ಅನೇಕ ಅಂಶಗಳನ್ನು ಅಮೆಂಡ್‌ಮೆಂಟ್‌ಗಳ ಮೂಲಕ ಬದಲಾವಣೆ ಮಾಡಿ ನಿವೃತ್ತ ಕಾರ್ಮಿಕರು ವಿಷ ಕುಡಿದು ಸಾಯುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಂದಾಲಿ, ಎಪಿಎಸ್‌ಆರ್‌ನ ಟಿ.ಸಿ.ಪ್ರಸಾದ್‌ರೆಡ್ಡಿ ಅವರು ಭಾಗವಹಿಸಿದ್ದರು.

Leave a Comment