371 (ಜೆ) ದಿಂದ ಹೈಕ ಭಾಗದ ಚಿತ್ರಣ ಬದಲು

ಹೈಕ ಭಾಗಕ್ಕೆ 371(ಜೆ) ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಲು ಸಾಧ್ಯವೇ ಇಲ್ಲ ಎಂದು ಬಿಜೆಪಿಯವರು ಹೇಳಿದ್ದರು.2009 ರಲ್ಲಿ ನಾನು ಇದೇ ಸ್ಥಳದಲ್ಲಿ ನಿಂತು ಭರವಸೆ ನೀಡಿದ್ದೆ. ನಮ್ಮ ಯುಪಿಎ ಸರಕಾರ ಅದನ್ನು ಈಡೇರಿಸಿತು. ಇದು ಹೈ ಕ ಭಾಗದ ಜನರ ಬದುಕಿನ ಚಿತ್ರಣವನ್ನೇ ಬದಲಿಸಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಅವರು ಮಾತನಾಡಿದರು

ಈ ಭಾಗದ ಅಭಿವೃದ್ಧಿಗೆ ಹಿಂದೆ 350 ಕೋಟಿ ರೂ ಬರುತ್ತಿತ್ತು. ಈಗ 4 ಸಾವಿರ ಕೋಟಿ ಬರುತ್ತಿದೆ.ಈ ಭಾಗದ 20 ಸಾವಿರ ಜನರಿಗೆ ಉದ್ಯೋಗ ದೊರಕಿದೆ.

ಕಪ್ಪುಹಣ ನೋಟ್ ರದ್ದತಿ ಹೆಸರಿನಲ್ಲಿ ಮೋದಿ ಅವರು ಎಲ್ಲ  ಕಪ್ಪುಕುಳಗಳ ಕಪ್ಪುಹಣವನ್ನು ಬಿಳಿಯಾಗಿಸಿದರು.ಜನಸಾಮಾನ್ಯರು ಬ್ಯಾಂಕುಗಳ ಮುಂದೆ ನಿಂತರೆ ಮೋದಿ ಆಪ್ತರು ಬ್ಯಾಂಕುಗಳ ಹಿಂಬಾಗಿಲಿನಿಂದ ಸೂಟ್ ಕೆಸ್ ಗಳ ಮೂಲಕ ಹಣ ಬದಲಿಸಿಕೊಂಡರು ಎಂದು ಆರೋಪಿಸಿದರು.ಕೊಟ್ಟ ಮಾತಿನಂತೆ ನಡೆಯುವದೇ ನಮ್ಮ ಜಾಯಮಾನ ಅದು ನಾಯಕತ್ವದ ಲಕ್ಷಣ ಸುಳ್ಳು ಹೇಳುವದೇ ಮೋದಿ ಅವರ ಕಾಯಕ ಎಂದು ಟೀಕಿಸಿದರು.

ಜೇವರಗಿ ವರದಿ:

ಕಲಬುರಗಿಗೆ ಆಗಮಿಸುವದಕ್ಕಿಂತ ಮುಂಚೆ ರಾಹುಲ್ ಗಾಂಧಿ ಅವರು  ಜೇವರಗಿ  ಪಟ್ಟಣದ

ತಾಲ್ಲೂಕು ಕ್ರೀಡಾಂಗಣದಲ್ಲಿ ಜನಾಶೀರ್ವಾದ  ಯಾತ್ರೆಯಲ್ಲಿ ಮಾತನಾಡಿದರು. ಪ್ರಧಾನಿ ಮೋದಿ ಅವರು ಬರೀ ಭಾಷಣದಲ್ಲೇ ಕಾಲ ಕಳೆಯುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು ಆದರೆ ಮಾಡಿದ್ದು ಕೇವಲ 450 ಮಾತ್ರ. ನಾವು ಯಾವತ್ತು ಸುಳ್ಳು ಹೇಳುವದಿಲ್ಲ ನುಡಿದಂತೆ ನಡೆಯುತ್ತೇವೆ ಎಂದರು. ಸಿದ್ದರಾಮಯ್ಯ ಅವರ ಸರಕಾರವು ಪಜಾಪಪಂ ಜನರಿಗಾಗಿ 27,700 ಕೋಟಿ ರೂ ಅನುದಾನ ನೀಡಿದೆ. ಆದರೆ ಮೋದಿ ಅವರು ಕೇವಲ 55  ಸಾವಿರ ಕೋಟಿ ನೀಡಿದ್ದಾರೆ. ಎಂದರು

ಬಿಜೆಪಿಯವರು ಬೆಂಕಿಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರೇ ನೀವು ಕರ್ನಾಟಕಕ್ಕೆ ಬಂದು ಶಾಂತಿಯ

ಬಗ್ಗೆ ಉಪದೇಶ ಹೇಳಬೇಡಿ ಎಂದು ಟೀಕಿಸಿದರು.

ಸಾಲಮನ್ನಾ ಬಗ್ಗೆ ಮೋದಿ ಮಾತನಾಡುವದಿಲ್ಲ. ಆದರೆ ಉದ್ಯಮಿಗಳ ಬಂಡವಾಳಶಾಹಿಗಳ 1.30 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಸರಕಾರ ರೈತರ 8 ಸಾವಿರ ಕೋಟಿ ಸಾಲಮನ್ನಾ ಮಾಡಿದೆ ಮೋದಿ ಅವರು ಕರ್ನಾಟಕಕ್ಕೆ ಬಂದು ಜೈಲಿಗೆ ಹೋಗಿ ಬಂದವರ ಜತೆ ಕುಳಿತುಕೊಂಡು ಭ್ರóಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ  ಎಂದರು

ಜೇವರಿಗೆ ಬಂದ ಬಳಿಕ ನನಗೆ ಧರ್ಮಸಿಂಗರ ನೆನಪಾಗುತ್ತಿದೆ ಆದರೆ ಈಗ ಅವರು ನಮ್ಮೊಂದಿಗೆ ಇಲ್ಲ ಎಂದು ಸ್ಮರಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ, ಸಾಕೆ ಶೈಲಜನಾಥ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ,

ಸಚಿವರಾದ ಡಾ ಶರಣಪ್ರಕಾಶ ಪಾಟೀಲ, ಪ್ರಿಯಾಂಕ ಖರ್ಗೆ, ಡಿಕೆ ಶಿವಕುಮಾರ,ರೋಷನ್ ಬೇಗ್ ಮಾಲೀಕಯ್ಯ ಗುತ್ತೇದಾರ, ಬಿ ಆರ್ ಪಾಟೀಲ ಡಾ ಅಜಯಸಿಂಗ್ ಡಾ ಉಮೇಶ ಜಾಧವ ಸಂಸದರಾದ

ವೀರಪ್ಪ ಮೊಯಿಲಿ, ಕೆ ಎಚ್ ಮುನಿಯಪ್ಪ  ಬಿಕೆ ಹರಿಪ್ರಸಾದ ಜಗದೇವ ಗುತ್ತೇದಾರ, ಅಲ್ಲಮಪ್ರಭು ಪಾಟೀಲ,  ಶರಣುಕುಮಾರ ಮೋದಿ ಸೇರಿದಂತೆ ಹಲವಾರು ಮುಖಂಡರು

ಉಪಸ್ಥಿತರಿದ್ದರು

Leave a Comment