@fil = i:\05-29\G29H5-DF.UXT>\NEWS

@h18 = ಉತ್ತರದಲ್ಲಿನ್ನೂ ಉರಿ ಬಿಸಿಲು

ಕಲಬುರಗಿ,ಮೇ.29-ಮೇ ತಿಂಗಳು ಅಂತ್ಯಗೊಳ್ಳುತ್ತಿದ್ದರೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿನ್ನೂ ಬಿಸಿಲ ತಾಪ ಕಡಿಮೆಯಾಗಿಲ್ಲ. ಕಲಬುರಗಿ, ಬೀದರ್, ರಾಯಚೂರು, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬಿಸಿಲ ತಾಪ ಹೆಚ್ಚಾಗಿದ್ದು, ಉರಿ ಬಿಸಿಲಿಗೆ ಜನ ತತ್ತರಿಸಿ ಹೋಗುವಂತಾಗಿದೆ.

ಗುರುವಾರ ಕಲಬುರಗಿಯಲ್ಲಿ ಗರಿಷ್ಠ 44.2, ಕನಿಷ್ಠ 28.3, ಬೀದರ್ ನಲ್ಲಿ ಗರಿಷ್ಠ 42.2, ಕನಿಷ್ಠ 24, ರಾಯಚೂರಿನಲ್ಲಿ ಗರಿಷ್ಠ 42, ಕನಿಷ್ಠ 29, ವಿಜಯಪುರದಲ್ಲಿ ಗರಿಷ್ಠ 40.9, ಕೊಪ್ಪಳದಲ್ಲಿ ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 44.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕರಾವಳಿ ಕರ್ನಾಟಕದ ಕಾರವಾರದಲ್ಲಿ ಕನಿಷ್ಠ ಉಷ್ಣಾಂಶ 29.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ದಕ್ಷಿಣ ಕರ್ನಾಟಕದ ಮಡಿಕೇರಿಯಲ್ಲಿ ಮಾತ್ರ ಬಿಸಿಲ ತಾಪ ತಗ್ಗಿದ್ದು, ಗರಿಷ್ಠ 26.1 ಮತ್ತು ಕನಿಷ್ಠ 17.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಳೆದ ಎರಡ್ಮೂರು ದಿನಕ್ಕೆ ಹೋಲಿಸಿದರೆ ಕಲಬುರಗಿಯಲ್ಲಿ ಕನಿಷ್ಠ ಉಷ್ಣಾಂಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಗರಿಷ್ಠ ಉಷ್ಣಾಂಶ ಹೆಚ್ಚಾಗಿಯೇ ಇರುವುದರಿಂದ ಮಧ್ಯಾಹ್ನದ ವೇಳೆ ಬಿಸಿಲಿಗೆ ಹೆದರಿ ಜನ ಹೊರಗಡೆ ಹೆಚ್ಚು ಓಡಾದಂತಹ ಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದುದ್ದರಿಂದ ಬಿಸಿಲ ತಾಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಮೇ. ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ಅಲ್ಲಲ್ಲಿ ಆಲಿಕಲ್ಲು ಮಳೆಯಾಗಿದ್ದು ಹೊರತು ಪಡಿಸಿದರೆ ಮತ್ತೆ ಮಳೆ ಸುರಿದಿಲ್ಲ. ಹೀಗಾಗಿ ಬಿಸಿಲ ತಾಪ ಸ್ವಲ್ಪ ಕಡಿಮೆಯಾಗಿಲ್ಲ.

ಜೂನ್ ಮೊದಲ ವಾರದಲ್ಲಿ ಮಳೆಯಾಗುವುದರಿಂದ ಬಿಸಿಲ ತಾಪ ಕಡಿಮೆಯಾಗಬಹುದು.

ಪ್ರತಿವರ್ಷ ಬೆಂಕಿಯಂತಹ ಬಿಸಿಲಿಗೆ ಹೆದರಿ ಜನ ಮಧ್ಯಾಹ್ನದ ವೇಳೆ ಮನೆಯಿಂದ ಹೊರಗಡೆ ಕಾಲಿಡದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈ ವರ್ಷ ಬಿಸಿಲಿಗಿಂತಲೂ ಕೊರೊನಾ ಭೀತಿಯಿಂದಲೇ ಜನ ಮನೆಯಿಂದ ಹೊರಗಡೆ ಓಡಾಡದಂತಾಗಿದೆ.

ಕಲಬುರಗಿಯಲ್ಲಿ ಕೊರೊನಾ ಲಾಕ್ ಡೌನ್ ಯಶಸ್ವಿಯಾಗಲು ಬಿಸಿಲು ಸಹ ಒಂದು ರೀತಿಯಲ್ಲಿ ಕಾರಣವಾಗಿದೆ ಅನ್ನವುದು ಸುಳ್ಳುಲ್ಲ.

ಗುರುವಾರ ದಾಖಲಾದ ಉಷ್ಣಾಂಶ

ಕಲಬುರಗಿ- ಗರಿಷ್ಠ 44.2, ಕನಿಷ್ಠ 28.3

ಬೀದರ್-ಗರಿಷ್ಠ 42.2, ಕನಿಷ್ಠ 24.0

ರಾಯಚೂರು-ಗರಿಷ್ಠ 42.0, ಕನಿಷ್ಠ 29.0

ವಿಜಯಪುರ-ಗರಿಷ್ಠ 40.9, ಕನಿಷ್ಠ 23.0

ಕೊಪ್ಪಳ- ಗರಿಷ್ಠ 38.5, ಕನಿಷ್ಠ 24.0

 

Share

Leave a Comment