37 ಹಾವು : ಮಲಿಯಾಬಾದ್ ಅರಣ್ಯಕ್ಕೆ

ರಾಯಚೂರು.ಅ.23- ನಗರದ ಮನೆಗಳಲ್ಲಿ ಮತ್ತು ಇತರೆ ಜನನಿಬಿಡ ಪ್ರದೇಶಗಳಲ್ಲಿ ಹಿಡಿದ ಹಾವುಗಳನ್ನು ಉರಗತಜ್ಞ ಸ್ನೇಕ್ ಸೇವರ್ ಅಫ್ಸರ್ ಹುಸೇನ್ ಅವರು ಹಾವುಗಳನ್ನು ಅರಣ್ಯಕ್ಕೆ ಬಿಡುವ ಮೂಲಕ ರಕ್ಷಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ಹಾಗೂ ಯಲ್ಲಪ್ಪ ಮತ್ತು ಉರಗ ಸಂರಕ್ಷಕರಾದ ಶಶಿಕಾಂತ, ಡಿಂಪ್ಯು ಕೋಠಾರಿ, ಬಸವರಾಜು, ರಾಜು ಸೇರಿದಂತೆ ಅನೇಕರು ಹಾವುಗಳನ್ನು ಅರಣ್ಯಕ್ಕೆ ಬಿಟ್ಟರು. ಒಟ್ಟು 37 ವಿಷಪೂರಿತ ಹಾಗೂ ಸಾಮಾನ್ಯ ಹಾವುಗಳನ್ನು ಸುರಕ್ಷಿತವಾಗಿ ಮಲಿಯಾಬಾದ್ ಅರಣ್ಯಕ್ಕೆ ಬಿಡಲಾಯಿತು. ಎಲ್ಲಿಯಾದರೂ, ವಿಷ ಜಂತು ಕಂಡು ಬಂದಲ್ಲಿ 9900127861, 9900127862 ಗೆ ಕರೆ ಮಾಡಲು ಕೋರಲಾಗಿದೆ.

Leave a Comment